

ನವದೆಹಲಿ: ಭಿಕ್ಷುಕರೂ ಸಹ ಅಪ್ಗ್ರೇಡ್ ಆಗಿದ್ದಾರೆ. ಭಿಕ್ಷುಕರು ಕೈಯಲ್ಲಿ ತಟ್ಟೆ, ಪಾತ್ರೆಗಳನ್ನು ಹಿಡಿದು ರೈಲು, ಬಸ್ಗಳಲ್ಲಿ ಬೋಗಿಗಳಲ್ಲಿ ಹಾಡುಗಳನ್ನು ಹಾಡುತ್ತಾ, ಭಿಕ್ಷೆ ಬೇಡುತ್ತಾರೆ. ಆದರೆ ಇಲ್ಲೊಬ್ಬ ಭಿಕ್ಷುಕ ಡಿಜಿಟಲ್ ಯುಗಕ್ಕೆ ತಕ್ಕಂತೆ ಸಂಪೂರ್ಣವಾಗಿ ಬದಲಾಗಿದ್ದಾನೆ.
ಭಿಕ್ಷುಕನೊಬ್ಬ ತನ್ನ ಕೈಯಲ್ಲಿ ಕ್ಯೂಆರ್ ಕೋಡ್ ಬೋರ್ಡ್ ಹಿಡಿದು ಜನರ ಬಳಿ ಭಿಕ್ಷೆ ಬೇಡುತ್ತಾನೆ. ರೈಲಿನಲ್ಲಿದ್ದ ಪ್ರಯಾಣಿಕರೊಬ್ಬರು ಆ ವ್ಯಕ್ತಿ ಭಿಕ್ಷೆ ಬೇಡುವ ವರ್ತನೆಯನ್ನು ವಿಡಿಯೋ ಮೂಲಕ ದಾಖಲಿಸಿದ್ದಾರೆ.
ಇದೀಗ ಆ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಸಾಮಾನ್ಯವಾಗಿ ಭಿಕ್ಷುಕರು ಬೇಡಿದಾಗ ದಾನದ ರೂಪದಲ್ಲಿ ಕೆಲವರು ತಿನ್ನಲು ಏನಾದರೂ ಕೊಡುತ್ತಾರೆ. ಅಥವಾ ನಗದು ರೂಪದಲ್ಲಿ ಒಂದಷ್ಟು ಹಣ ಕೊಟ್ಟು ಕಳುಹಿತ್ತಾರೆ. ಇತ್ತೀಚೆಗೆ ಇಂತಹದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.