

ನವದೆಹಲಿ: ಎಲ್ಲರೂ ಸಾಮಾನ್ಯವಾಗಿ ತಮ್ಮ ಮನೆಯ ಡಿಸೈನ್‌ಗಳು ಡಿಫರೆಂಟ್ ಆಗಿರಲಿ ಎಂದು ಬಯಸುತ್ತಾರೆ. ಹಾಗೆ ಯೋಚಿಸಿದ ಒಬ್ಬರು ತಮ್ಮ ಬಾತ್‌ರೂಂ ಅನ್ನು ವಿಭಿನ್ನವಾಗಿ ಡಿಸೈನ್ ಮಾಡಿದ್ದು ಅದೀಗ ಭಾರಿ ವೈರಲ್ ಆಗಿದೆ.
ನೋಡಲು ಸಾಮಾನ್ಯ ಬಾತ್‌ರೂಮ್‌ನಂತೆ ಕಾಣುವ ಈ ಚಿತ್ರದಲ್ಲಿ ಟೈಲ್ಸ್‌ಗಳನ್ನು ಚಿತ್ರ ವಿಚಿತ್ರವಾಗಿ ಜೋಡಿಸಲಾಗಿದ್ದು, ವಿಭಿನ್ನ ರೀತಿಯಲ್ಲಿ ಡಿಸೈನ್ ಮಾಡಲಾಗಿದೆ.
ಒಬ್ಬೊಬ್ಬರಿಗೆ ಒಂದೊಂದು ತೆರನಾಗಿ ಈ ಬಾತ್‌ರೂಮ್ ಕಾಣಿಸುವುದಂತೆ. ಹಲವು ಮಂದಿ ತಮಗೆ ಈ ಚಿತ್ರ ನೋಡಿ ತಲೆತಿರುಗಿದೆ ಎಂದೂ ಹೇಳಿದ್ದಾರೆ.
ಈ ಫೋಟೋ ಇದೀಗ ಭಾರಿ ವೈರಲ್ ಆಗಿದೆ. ಚಿತ್ರ ಪೋಸ್ಟ್ ಮಾಡಿದ ವಾರದಲ್ಲಿಯೇ 41 ಸಾವಿರಕ್ಕೂ ಅಧಿಕ ಮಂದಿ ಶೇರ್ ಮಾಡಿದ್ದಾರೆ. ಸಹಸ್ರಾರು ಸಂಖ್ಯೆಯಲ್ಲಿ ಕಮೆಂಟ್‌ಗಳು ಬಂದಿದ್ದು, ತಮಗೆ ಯಾವ ರೀತಿ ಅನುಭವ ನೀಡುತ್ತದೆ ಎಂಬುದನ್ನು ಬರೆದಿದ್ದಾರೆ.
ಕೆಲವರಿಗೆ ಇದನ್ನು ನೋಡಿದರೆ ಏನೂ ವಿಶೇಷ ಎನ್ನಿಸಿಲ್ಲವಂತೆ. ಇನ್ನು ಕೆಲವರಿಗೆ ಚಿತ್ರ-ವಿಚಿತ್ರ ಅನುಭವ ಆಗಿದೆಯಂತೆ. ಇದನ್ನು ನೋಡುತ್ತಿದ್ದಂತೆಯೇ ನಾನು ಬಿದ್ದೇ ಹೋಗುತ್ತಿದ್ದೇನೋ ಎನ್ನುವಂಥ ಭಾವನೆ ಉಂಟಾಗುತ್ತಿದೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಹೀಗೆ ಏನೇನೋ ಕಮೆಂಟ್‌ಗಳನ್ನು ಬರೆದಿದ್ದಾರೆ.
ಹಾಗಾದರೆ ಈ ಬಾತ್‌ರೂಂ ವಿನ್ಯಾಸದ ಬಗ್ಗೆ ನಿಮ್ಮ ಅಭಿಪ್ರಾಯವೇನು?