ಮಕ್ಕಳ ದಿನಾಚರಣೆ; ಬೀದಿಗಿಳಿದು ರಸ್ತೆ ರಿಪೇರಿ ಮಾಡಿದ ಮಕ್ಕಳು

New Project (8)
Published on

ಉಡುಪಿ: ಇಂದು ಮಕ್ಕಳ ದಿನಾಚರಣೆ! ರಜೆ ಇರುವುದರಿಂದ ಮಕ್ಕಳು ಮೋಜು ಮಾಡಿಕೊಂಡು ಮನೆಯಲ್ಲಿ ಇರುತ್ತಾರೆ. ಆದರೆ ಉಡುಪಿಯ ಬೈಂದೂರು ತಾಲೂಕಿನಲ್ಲಿ ಮಕ್ಕಳ ದಿನಾಚರಣೆಯನ್ನು ವಿಭಿನ್ನವಾಗಿ ಆಚರಿಸಿದ್ದಾರೆ. ಮಕ್ಕಳ ದಿನಾಚರಣೆಯ ಕಾರ್ಯಾಚರಣೆ ಹೇಗಿತ್ತು ಗೊತ್ತಾ?

ವಿದ್ಯಾರ್ಥಿಗಳು ಹಾರೆ ಹಿಡಿದು ರಸ್ತೆಗಿಳಿದಿದ್ದಾರೆ. ಜಿಲ್ಲಾ ಪಂಚಾಯತ್​ಗೆ ಸೇರಿದ ರಸ್ತೆ ಕೆಲವೆಡೆ ಡಾಂಬರ್ ಸಂಪೂರ್ಣ ಕಿತ್ತು ಹೋಗಿ ಸಂಚಾರಕ್ಕೆ ತೊಡಕಾಗಿತ್ತು. ದುರಸ್ತಿ ಕಾಣದೆ ಸಂಚರಿಸುವುದು ಕಷ್ಟವಾಗಿತ್ತು. ಸ್ಥಳೀಯರು ಸಾಕಷ್ಟು ಬಾರಿ ಮನವಿ ಮಾಡಿದ್ದರೂ ದುರಸ್ತಿ ಕಾರ್ಯ ಪ್ರಾರಂಭವಾಗಿರಲಿಲ್ಲ. ವಿದ್ಯಾರ್ಥಿಗಳು ಅವ್ಯವಸ್ಥೆಯಿಂದ ಬೇಸತ್ತು ಹಾರೆ ಹಿಡಿದು ರಸ್ತೆ ಸರಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net