ಡಿಫೆನ್ಸ್ ಅಧಿಕಾರಿ ಹುದ್ದೆಗೆ ಆಯ್ಕೆಯಾದ ಮಂಗಳೂರಿನ ಅಧ್ವೈತ್ ನಾರಾಯಣ್

Oplus_131072
Oplus_131072
Published on

ಮಂಗಳೂರು: ಇತ್ತೀಚೆಗೆ ನಡೆದ ಯುಪಿಎಸ್‌ಸಿ ಕಂಬೈಂಡ್ ಡಿಫೆನ್ಸ್ ಸರ್ವೀಸ್ ಪರೀಕ್ಷೆಯಲ್ಲಿ ಮಂಗಳೂರಿನ ಅಧ್ವೈತ್ ನಾರಾಯಣ್ ಅವರು 100 ಅಂಕಗಳ ಆಲ್ ಇಂಡಿಯಾ ರ‌್ಯಾಂಕ್‌ನೊಂದಿಗೆ ಡಿಫೆನ್ಸ್ ಅಧಿಕಾರಿ ಹುದ್ದೆ ಆಯ್ಕೆಯಾಗಿದ್ದಾರೆ. ಪ್ರಸ್ತುತ ಚೆನೈನ ಅಫೀಸರ್ ಟ್ರೈನಿಂಗ್ ಅಕಾಡಮಿಯಲ್ಲಿ 49ದಿನಗಳ ತರಬೇತಿ ಬಳಿಕ ಭಾರತದ ಸೈನ್ಯದ ಉನ್ನತ ದರ್ಜೆಯಾದ ಅಧಿಕಾರಿ ಹುದ್ದೆಯನ್ನು ಸ್ವೀಕರಿಸಲಿರುವರು. ಮಂಗಳೂರಿನ ಮೇರಿಹಿಲ್ ನಿವಾಸಿಯಾಗಿರುವ ಇವರು ಕೇಂದ್ರ ಸರ್ಕಾರಿ ನಿವೃತ್ತ ಅಧಿಕಾರಿ ನಾರಾಯಣ್ ಕೆಲೊತ್ ಹಾಗೂ ರೈಲ್ವೆ ನಿವೃತ್ತ ಅಧಿಕಾರಿ ಜಯಲಕ್ಷ್ಮೀ ದಂಪತಿಗಳ ಪುತ್ರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net