ಸಾರ್ವಜನಿಕರಲ್ಲಿ ಡಯಾಬಿಟಿಸ್ ಅರಿವು

byn
Published on

ಬೈಂದೂರು: ಉತ್ತಮ ಆರೋಗ್ಯ ಹೊಂದುವುದು ಬಹುಮುಖ್ಯ. ಡಯಾಬಿಟಿಸ್ ಬಗ್ಗೆ ಹಲವರಲ್ಲಿ ತಪ್ಪು ಮಾಹಿತಿಗಳಿವೆ. ಈ ಬಗ್ಗೆ ಅರಿತು, ಸರಿಯಾದ ಆಹಾರ ಕ್ರಮ ಅನುಸರಿಸುವುದರಿಂದ ಡಯಾಬಿಟಿಸ್‌ನಿಂದ ಅಂತರ ಸಾಧ್ಯ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರೇಮಾನಂದ ಕೆ. ಹೇಳಿದರು.

ರೋಟರಿ ಸಮುದಾಯ ಭವನದಲ್ಲಿ ರೋಟರಿ ಕ್ಲಬ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೇತೃತ್ವದಲ್ಲಿ ಆಶಾ ಕಾರ್ಯಕರ್ತರಿಗೆ ಮಧುಮೇಹದ ಬಗ್ಗೆ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಉಡುಪಿ ಬಿಗ್ ಮೆಡಿಕಲ್ ಸೆಂಟರ್ ವೈದ್ಯೆ, ಮಧುಮೇಹ ತಜ್ಞೆ ಡಾ.ಶ್ರುತಿ ಬಲ್ಲಾಳ್, ಮಧುಮೇಹ ಕಾರಣ, ನಿಯಂತ್ರಣ ಹಾಗೂ ಉತ್ತಮ ಆಹಾರ ಕ್ರಮ ಅನುಸರಿಸುವಿಕೆ ಮೊದಲಾದ ವಿಷಯಗಳ ಕುರಿತು ಮಾಹಿತಿ ನೀಡಿದರು.

ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಮೋಹನ್ ರೇವಣ್ಕರ್ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಕಾರ್ಯದರ್ಶಿ ಸುನೀಲ್ ಬೈಂದೂರು, ಸದಸ್ಯರಾದ ಐ.ನಾರಾಯಣ್, ಉದಯ್ ಆಚಾರ್, ಶಾರದಾ ನಾರಾಯಣ್ ಉಪಸ್ಥಿತರಿದ್ದರು. ತಾಲೂಕು ಆರೋಗ್ಯಾಧಿಕಾರಿ ಕಚೇರಿ ಹೇಮಾ ಈಶ್ವರ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net