ಶಾರದಾ ಆಸ್ಪತ್ರೆ ಆವರಣದಲ್ಲಿ ಧನ್ವಂತರಿ ಪ್ರತಿಷ್ಠಾಪನೆ

SHARADA
Published on

ಉಳ್ಳಾಲ:  ತಲಪಾಡಿ ದೇವಿನಗರ ಶಾರದಾ ಆಯರ್ವೇದ ಆಸ್ಪತ್ರೆಯ ಆವರಣದಲ್ಲಿ ಶ್ರೀ ಧನ್ವಂತರಿ ದೇವರ ಪ್ರತಿಷ್ಠಾಪನೆ ಸೋಮವಾರ ನೆರವೇರಿತು.

ಸಂಸ್ಥೆಯ ಅಧ್ಯಕ್ಷ ಡಾ.ಎಂ.ಬಿ.ಪುರಾಣಿಕ್ ಮುಂದಾಳುತ್ವದಲ್ಲಿ, ತಲಪಾಡಿ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಗಣೇಶ್ ಭಟ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇವರನ್ನು ಪ್ರತಿಷ್ಠಾಪಿಸಿ ಬ್ರಹ್ಮಕಲಶೋತ್ಸವ ನೆರವೇರಿಸಲಾಯಿತು. ಸರ್ಪಸಂಸ್ಕಾರ ವಿಧಿಗಳು, ಆಶ್ಲೇಷ ಬಲಿ, ವಾಸ್ತು ರಕ್ಷೋಘ್ನ ಹೋಮ, ಧನ್ವಂತರಿ ಹೋಮ ಮುಂತಾದ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು.

ಇತಿಹಾಸ ಪ್ರಸಿದ್ಧ ಪಂಜಾಳಗುತ್ತುವಿನ ಮನೆಯಲ್ಲಿ ಪರಿವಾರ ದೈವಗಳಾದ ಮಲರಾಯ, ಧೂಮಾವತಿ-ಬಂಟ, ಅಣ್ಣಪ್ಪ ಪಂಜುರ್ಲಿ, ಸತ್ಯದೇವತೆ, ಗುಳಿಗ ದೈವದ ಪ್ರತಿಷ್ಠಾಪನೆ ನೆರವೇರಿತು. ಸುನಂದಾ ಪುರಾಣಿಕ್, ಸಮೀರ್ ಪುರಾಣಿಕ್, ಪ್ರೀತಿ ಪುರಾಣಿಕ್, ಶಾರದಾ ಸಮೂಹ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯರು, ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಸಿಬ್ಬಂದಿ, ಭಕ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net