ಹೊಸ ಚಿತ್ರದ ಶೀರ್ಷಿಕೆಯನ್ನು ರಿವೀಲ್ ಮಾಡಿದ ನಟ ಧನುಷ್!; ಯಾವ ಭಾಷೆಯಲ್ಲಿ ಗೊತ್ತಾ?

dhanush
dhanush new film
Published on

ಆಂಧ್ರಪ್ರದೇಶ: ಟಾಲಿವುಡ್ ಸ್ಟಾರ್ ನಟ ಧನುಷ್(Actor Dhanush) ಇದೀಗ ತಮ್ಮ ಹೊಸ ಚಿತ್ರದ ಶೀರ್ಷಿಕೆಯನ್ನು ಅನಾವರಣಗೊಳಿಸಿದ್ದು, ಈ ಬಗ್ಗೆ ಅಧಿಕೃತವಾಗಿ ಟ್ವಿಟರ್(Twitter) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಈ ಹಿಂದೆ ನಟ ಧನುಷ್ ಮತ್ತೊಮ್ಮೆ ಆನಂದ್ ಎಲ್. ರೈ ಅವರೊಂದಿಗೆ ಕೈಜೋಡಿಸಲಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣದಲ್ಲಿ(Social Media) ಹರಿದಾಡಿತ್ತು. ಸದ್ಯ ಈ ಊಹೆಗಳು ನಿಜವಾಗಿದ್ದು, ಆನಂದ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರದಲ್ಲಿ ಧನುಷ್ ನಾಯಕ ನಟರಾಗಿ ಮಿಂಚಲಿದ್ದಾರೆ.

ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪೋಸ್ಟ್​ ಮಾಡಿರುವ ನಟ ಧನುಷ್, "ನನ್ನ ಮುಂದಿನ ಚಿತ್ರ 'ತೇರೆ ಇಷ್ಕ್ ಮೇ'. ಹಿಮಾಂಶು ಶರ್ಮಾ ಮತ್ತು ನೀರಜ್ ಯಾದವ್ ಅವರು ಚಿತ್ರದ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ಬರೆದಿದ್ದಾರೆ. ಎ.ಆರ್. ರೆಹಮಾನ್(AR Rahman) ಅವರು ಸಂಗೀತ ಸಂಯೋಜನೆ ಮಾಡಿದ್ದು, ಹಿಮಾಂಶು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ" ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net