More

    ಸ್ನೇಹಿತರಿಗಾಗಿ ಗೀತರಚನೆ; ಆರ್ಕೆಸ್ಟ್ರಾಗೆ 8 ಹಾಡು ಬರೆದ ಧನಂಜಯ್

    ಧನಂಜಯ್​ಗೆ ಹಾಡು ಬರೆಯುವುದು ಹೊಸದಲ್ಲ. ಈ ಹಿಂದೆ, ‘ಬಡವ ರಾಸ್ಕಲ್’ ಚಿತ್ರದ ‘ಉಡುಪಿ ಹೋಟೆಲ್’ ಹಾಡನ್ನು ಬರೆದಿದ್ದರು. ಹೀಗೆ ಆಗಾಗ ಒಂದೊಂದು ಹಾಡು ಬರೆಯುತ್ತಿದ್ದ ಧನಂಜಯ್, ಈಗ ‘ಆರ್ಕೆಸ್ಟ್ರಾ’ ಚಿತ್ರದ ಎಲ್ಲಾ ಹಾಡುಗಳನ್ನು ಹಣ ಪಡೆಯದೇ ಬರೆದಿದ್ದಾರಂತೆ. ಈ ಮೂಲಕ ಅವರು ಪೂರ್ಣಪ್ರಮಾಣದ ಗೀತರಚನೆಕಾರರಾಗಿದ್ದಾರೆ.

    ಪೂರ್ಣಚಂದ್ರ ಮೈಸೂರು, ರಾಜಲಕ್ಷ್ಮೀ ನಟಿಸಿ, ಸುನೀಲ್ ಕಥೆ ಬರೆದು ನಿರ್ದೇಶನ ಮಾಡಿರುವ ‘ಆರ್ಕೆಸ್ಟ್ರಾ’ ಚಿತ್ರಕ್ಕೆ ಧನಂಜಯ ಸಾಹಿತ್ಯ ಬರೆದಿದ್ದಾರೆ. ರಘು ದೀಕ್ಷಿತ್ ಸಂಗೀತ ಸಂಯೋಜಿಸಿದ್ದಾರೆ. ಇತ್ತೀಚೆಗೆ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.

    ‘ಆರ್ಕೆಸ್ಟ್ರಾ’ ಹಾಡುಗಳ ಕುರಿತು ಮಾತನಾಡಿದ ಧನಂಜಯ್, ‘ನಾವೆಲ್ಲ ಮೈಸೂರಿನ ಕಾಲೇಜಿ ನಲ್ಲಿ ನಾಟಕ ಮಾಡಬೇಕಾದರೆ ಬೀಳುತ್ತಿದ್ದ ವಿಷಿಲ್​ಗೆ ನಮ್ಮ ತಲೆ ತಿರುಗುತ್ತಿತ್ತು. ಆ ನಂತರ ಸಿನಿಮಾಗೆ ಬಂದ ಮೇಲೆ ವಾಸ್ತವ ಅರ್ಥವಾಯಿತು. ಜನ ಕೈ ಹಿಡಿದರು. ನನ್ನ ಆರಂಭದ ದಿನಗಳಿಂದಲೂ ಸ್ನೇಹಿತರು ಜತೆಗಿದ್ದಾರೆ. ನಾನು ಅವರ ಜತೆ ಇರುತ್ತೇನೆ. ಎಲ್ಲ ಸ್ನೇಹಿತರು ಸೇರಿ ಈ ಚಿತ್ರ ಮಾಡುತ್ತಿರುವಾಗ, ನನ್ನದೊಂದು ಸಣ್ಣ ಕಾಣಿಕೆ’ ಎನ್ನುತ್ತಾರೆ.

    ಟೆಸ್ಟ್​ ಡ್ರೈವ್ ವೇಳೆ ಮೂರನೇ ಮಹಡಿಯಿಂದ ಬಿದ್ದ ಕಾರು; ಇಬ್ಬರು ಸ್ಥಳದಲ್ಲೇ ಸಾವು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts