ಬಸವಣ್ಣನವರ ಚಿತ್ರ ಮಾಡುವಂತೆ ಡಾಲಿ ಧನಂಜಯ್​ಗೆ ಮನವಿ! ಸಿನಿಮಾ ಮಾಡುವುದರ ಬಗ್ಗೆ ನಟ ಹೇಳಿದ್ದಿಷ್ಟು

ವಿಜಯವಾಣಿ - 2024-01-13T150037.474
Published on

ಬಾಗಲಕೋಟೆ: ಕೂಡಲಸಂಗಮದಲ್ಲಿ 37ನೇ ಶರಣಮೇಳ ನಡೆದಿದ್ದು, ಕಾರ್ಯಕಮಕ್ಕೆ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಮತ್ತು ನಟ, ನಿರ್ಮಾಪಕ ಡಾಲಿ ಧನಂಜಯ ಆಗಮಿಸಿದ್ದರು. ಈ ವೇಳೆ ಶರಣಮೇಳ ಉದ್ದೇಶಿಸಿ ಭಾಷಣ ಮಾಡಿದ ಹಂಸಲೇಖ, ಕನ್ನಡದ ಶರಣರಿಗೆ ಶರಣು, ನನ್ನ ಜೀವನದಲ್ಲಿ ಎಷ್ಟೋ ಮುಖ್ಯ ಘಟನೆಗಳು ನಡೆದಿವೆ ಎಂದರು.

ಕ್ರೈಸ್ತರಿಗೆ ಒಂದು, ಮುಸ್ಲೀಮರಿಗೆ ಮೆಕ್ಕಾ ತೀರ್ಥ ಕ್ಷೇತ್ರಗಳಿದ್ರೆ...ಶರಣರಿಗೆ ತೀರ್ಥ ಕ್ಷೇತ್ರಯಾವುದು ಅಂದ್ರೆ, ಅದು ಕೂಡಲಸಂಗಮ. ಜಿಲ್ಲೆಯಲ್ಲಿ ಒಂದು ಪ್ರಶಸ್ತಿ ‌ಕೊಡ್ತಾರೆ ಅಂದ್ರೆ ಅದು ಜಿಲ್ಲೆಯ ಸುದ್ದಿ, ಒಂದು ರಾಷ್ಟ್ರದಲ್ಲಿ ಸುದ್ದಿಯಾಗುವ ಪ್ರಶಸ್ತಿ ಅಂದ್ರೆ, ಅದು ರಾಷ್ಟ್ರೀಯ ಪ್ರಶಸ್ತಿಯಾಗುತ್ತದೆ. ನನಗೆ ಲಿಂಗಾನಂದ ಶ್ರೀ ಪ್ರಶಸ್ತಿ ಕೊಡುತ್ತಿರುವುದು ಇವತ್ತು ರಾಷ್ಟ್ರದಲ್ಲಿ ದೊಡ್ಡ ಸುದ್ದಿಯಾಗಿದೆ ಎಂದರು.

ಶರಣ ಮೇಳದಲ್ಲಿ ಭಾಗಿಯಾಗಿದ್ದ ಡಾಲಿ ಧನಂಜಯ್​ಗೆ ಕೂಡ ಸನ್ಮಾನ ಮಾಡಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಧನಂಜಯ,

ಅಲ್ಲಮಪ್ರಭು, ಆಯ್ದಕ್ಕಿ ಮಾರಯ್ಯ, ಬಸವಣ್ಣ ವಚನ ಹೇಳಿ, ಎಲ್ಲರ ಗಮನ ಸೆಳೆದರು. ಅಲ್ಲಮಪ್ರಭುಗಳ ಪಾತ್ರ ಮಾಡಿದ್ದು ಬಹಳ ಖುಷಿ ತಂದಿದೆ. ಇಲ್ಲಿಗೆ ಬಂದು ನನ್ನ ಭಕ್ತಿಯ ಪಾತ್ರೆ ತುಂಬಿದೆ ಎಂದರು.

ಇನ್ನು ಅಲ್ಲಮಪ್ರಭುಗಳ ಸಂಭಾಷಣೆ ಹೇಳುವಂತೆ ನಟನಿಗೆ ಒತ್ತಾಯಿಸಿದ ಭಕ್ತರು, ಹಂಸಲೇಖ ಹಾಗೂ ನೀವು ಒಟ್ಟಾಗಿ ಬಸವಣ್ಣನವರ ಸಿನಿಮಾ ಮಾಡುವಂತೆ ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಾಲಿ, ಆ ತರಹ ಅವಕಾಶ ದೊರೆತರೆ ಖಂಡಿತ ಮಾಡುವುದಾಗಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net