More

    ‘ಬಿಹಾರದ ಮುಂದಿನ ಗೃಹಸಚಿವ ಈಗಿನ ಡಿಜಿಪಿ ಗುಪ್ತೇಶ್ವರ್​ ಪಾಂಡೆ…!’

    ಮುಂಬೈ: ಸುಶಾಂತ್​ ಸಿಂಗ್​ ರಜಪೂತ್​ ಸಾವಿನ ತನಿಖೆ ಶುರುವಾದಾಗಿನಿಂದ ಶಿವಸೇನೆ, ಬಿಹಾರ ಡಿಜಿಪಿ ಗುಪ್ತೇಶ್ವರ್​ ಪಾಂಡೆ ವಿರುದ್ಧ ಕಿಡಿಕಾರುತ್ತಿದೆ.

    ಅದರಲ್ಲೂ ನಟನ ಸಾವಿನ ತನಿಖೆಯನ್ನು ಸುಪ್ರಿಂಕೋರ್ಟ್​ ಸಿಬಿಐಗೆ ವಹಿಸಿದ ದಿನ, ಗುಪ್ತೇಶ್ವರ್​ ಪಾಂಡೆ ಸಂತೋಷ ವ್ಯಕ್ತಪಡಿಸಿದ್ದರು. ಅನ್ಯಾಯದ ವಿರುದ್ಧ ನ್ಯಾಯಕ್ಕೆ ಸಿಕ್ಕ ಜಯ ಇದು ಎಂದು ಹೇಳಿಕೆ ನೀಡಿದ್ದರು. ಇದನ್ನೂ ಓದಿ: ಮನೋರೋಗಿ ಗಂಡನ ಬಳಲಿಕೆ ಸಹಿಸದೆ ಗಂಡ ಮಕ್ಕಳನ್ನು ಕೊಲೆಗೈದು ಆತ್ಮಹತ್ಯೆಗೀಡಾದ ವೈದ್ಯೆ

    ಆ ಹೇಳಿಕೆಯನ್ನಿಟ್ಟುಕೊಂಡು ಶಿವಸೇನೆ ಮುಖಂಡ ಸಂಜಯ್​ ರಾವತ್​ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಸುಶಾಂತ್​ ಸಾವಿನ ತನಿಖೆಯನ್ನು ಸುಪ್ರೀಂಕೋರ್ಟ್​ ಸಿಬಿಐ ವಹಿಸಿದ್ದೇ ವಹಿಸಿದ್ದು, ಡಿಜಿಪಿ ಮುಖದ ಮೇಲೆ ಭರ್ಜರಿ ಸಂತೋಷ ಕಾಣುತ್ತಿದೆ. ಮಾಧ್ಯಮ ಹೇಳಿಕೆ ನೀಡುವಾಗ ಅವರು ಬಿಜೆಪಿ ಧ್ವಜ ಕೈಯಲ್ಲಿ ಹಿಡಿದುಕೊಳ್ಳುವುದೊಂದೇ ಬಾಕಿ ಇತ್ತು. ಅಷ್ಟರ ಮಟ್ಟಿಗೆ ಆ ಪಕ್ಷದ ಪರ ಇದ್ದಾರೆ ಎಂದು ರಾವತ್​ ವ್ಯಂಗ್ಯವಾಡಿದ್ದರು. ಇದೀಗ ಮಹಾರಾಷ್ಟ್ರ ವಸತಿ ಸಚಿವ ಜಿತೇಂದ್ರ ಅವ್ಹಾದ್​ ಕೂಡ ಡಿಜಿಪಿ ಗುಪ್ತೇಶ್ವರ ಪಾಂಡೆ ವಿರುದ್ಧ ಟ್ವೀಟ್​ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕರೊನಾ ಕೇಸ್​ಗಳಿಲ್ಲ; ಮಾಸ್ಕ್​ ಧರಿಸೋದು ಕಡ್ಡಾಯವೇನಲ್ಲ; ಅದ್ಯಾವ ದೇಶದಲ್ಲಿದೆ ಈ ನಿರಾಳತೆ?

    ಬಿಹಾರಕ್ಕೆ ಮುಂದಿನ ಅವಧಿಗೂ ನಿತೀಶ್​ ಕುಮಾರ್​ ಅವರೇ ಮುಖ್ಯಮಂತ್ರಿಯಾದರೆ ಈಗಿನ ಡಿಜಿಪಿ (ಪಾಂಡೆ) ಅವರು ಖಂಡಿತ ಗೃಹಮಂತ್ರಿಯಾಗುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.
    ಅಂದರೆ ಈ ಮೂಲಕ ಡಿಜಿಪಿ ಗುಪ್ತೇಶ್ವರ್​ ಪಾಂಡೆ ಅವರು ಬಿಜೆಪಿ ಪಕ್ಷದ ಪರ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. (ಏಜೆನ್ಸೀಸ್​)

    ಅನಾರೋಗ್ಯದಿಂದ ಪತ್ನಿ ಸಾವು: ಮನನೊಂದು ಮಕ್ಕಳೊಂದಿಗೆ ಕಾಲುವೆಗೆ ಹಾರಿದ ವ್ಯಕ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts