ಅನಾರೋಗ್ಯದಿಂದ ಪತ್ನಿ ಸಾವು: ಮನನೊಂದು ಮಕ್ಕಳೊಂದಿಗೆ ಕಾಲುವೆಗೆ ಹಾರಿದ ವ್ಯಕ್ತಿ

Death
Published on

ಬಳ್ಳಾರಿ: ಪ್ರೀತಿಯ ಮಡದಿ ಅನಾರೋಗ್ಯಕ್ಕೀಡಾಗಿ ಮೃತಪಟ್ಟ ಹಿನ್ನೆಲೆಯಲ್ಲಿ ಮನನೊಂದ ವ್ಯಕ್ತಿಯೊಬ್ಬ ತನ್ನ ಮಕ್ಕಳೊಂದಿಗೆ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬಳ್ಳಾರಿ ಮೂಲದ ಗಣೇಶ್ ಆಚಾರ್ಯ ಮಕ್ಕಳೊಂದಿಗೆ ಲಕುಂದಿ ಗ್ರಾಮದ ಬಳಿಯ‌ ಹೆಚ್ಎಲ್​ಸಿ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದುರ್ಘಟನೆಯಲ್ಲಿ ಗಣೇಶ್ ಅವರ ಎರಡನೇ ಮಗಳು ಸ್ಪೂರ್ತಿ (12) ಕೂಡ ಸಾವಿಗೀಡಾಗಿದ್ದಾಳೆ.

ಅದೃಷ್ಟವಶಾತ್ ಮೊದಲ ಮಗಳು ಕೀರ್ತನಾ ಬದುಕುಳಿದಿದ್ದಾಳೆ. ಸದ್ಯ ಪುತ್ರಿ ಸ್ಫೂರ್ತಿ ಮೃತದೇಹ ಪತ್ತೆಯಾಗಿದ್ದು, ಗಣೇಶ್​ ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ. ಈ ಸಂಬಂಧ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net