ಟೈರ್​ ಸ್ಫೋಟಗೊಂಡು ಡಿವೈಡರ್ ಮೇಲೆ ಹಾರಿದ ಕಾರು: ಮೂವರು ಸಾವು, ನಾಲ್ವರು ಗಂಭೀರ

Car Accident 1
Published on

ಚಿತ್ರದುರ್ಗ: ಕಾರಿನ ಟೈರ್​ ಸ್ಫೋಟಗೊಂಡು ಡಿವೈಡರ್​ ಮೇಲೆ ಹಾರಿದ ಪರಿಣಾಮ ಸ್ಥಳದಲ್ಲೇ ಇಬ್ಬರು ಹಾಗೂ ಆಸ್ಪತ್ರೆಯಲ್ಲಿ ಓರ್ವ ಸಾವಿಗೀಡಾಗಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಭೀಕರ ಅಪಘಾತವು ಹಿರಿಯೂರು ತಾಲೂಕಿನ ಆನೆಸಿದ್ರಿ ಕ್ರಾಸ್ ಬಳಿಯಿರುವ ಶನೇಶ್ವರ ದೇವಸ್ಥಾನ ಮುಂಭಾಗದ ರಾ.ಹೆ 48ರಲ್ಲಿ ಶುಕ್ರವಾರ ನಡೆದಿದೆ. ಮೃತಪಟ್ಟವರನ್ನು ಬಸವರಾಜ್(40), ಪತ್ನಿ ಸರೋಜಮ್ಮ (35) ಹಾಗೂ ಚಾಲಕ ಕಲ್ಲವೀರಪ್ಪ ದೊಡ್ಡಮನಿ (44) ಎಂದು ಗುರುತಿಸಲಾಗಿದೆ.

CKK 7007 ನಂಬರಿನ ಮಾರುತಿ 800 ಕಾರು ಹಾವೇರಿಯಿಂದ ಬೆಂಗಳೂರಿಗೆ ತೆರೆಳುತಿತ್ತು. ಈ ವೇಳೆ ಕಾರಿನ ಟೈರ್​ ಸ್ಪೋಟಗೊಂಡು ಚಾಲಕನ ನಿಯಂತ್ರಣ ಕಳೆದುಕೊಂಡು ಡಿವೈಡರ್​ ಮೇಲೆ ಹಾರಿ ಬಿದ್ದಿದೆ. ಮೃತ ಕಲ್ಲವೀರಪ್ಪ ಅವರ ಒಬ್ಬ ಹಾಗೂ ಬಸವರಾಜ್ ಅವರ ಮೂವರು ಮಕ್ಕಳಿಗೆ ಗಂಭೀರ ಗಾಯವಾಗಿದೆ.

ಗಾಯಗೊಂಡಿರುವ ಮಕ್ಕಳಾದ ಜಯಂತ್, ವಿಸ್ಮಯ್, ಶೀತಲ್ ಹಾಗೂ ಸಮೀಕ್ಷಾರನ್ನು ತಾಲ್ಲೂಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಆಸ್ಪತ್ರೆಗೆ ಭೇಟಿ ನೀಡಿದ ಡಿವೈಎಸ್ಪಿ ರೋಷನ್ ಜಮೀರ್, ಸಿಪಿಐ ರಾಘವೇಂದ್ರ ಹಾಗೂ ಪಿಎಸ್ಐ ಪರಮೇಶ್ ಪರಿಶೀಲಿಸಿದರು. ಘಟನೆ ಸಂಬಂಧ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net