More

    ಮನುಷ್ಯನ ಒಳಿತಿಗಾಗಿ ಬಸವಣ್ಣ ಕ್ರಾಂತಿ

    ಸಿಂಧನೂರು: ಸಮಾನತೆ ಹರಿಕಾರ, ವಿಶ್ವಗುರು ಬಸವಣ್ಣ ತತ್ವ-ಸಿದ್ಧಾಂತಗಳು ಸರ್ವ ಕಾಲಕ್ಕೂ ಪ್ರಸ್ತುತ ಎಂದು ವರದಾ ನರ್ಸಿಂಗ್ ಹೋಮ್ ವೈದ್ಯ ಡಾ.ವಿಶ್ವನಾಥ ರಡ್ಡಿ ಪಾಟೀಲ್ ಹೇಳಿದರು.

    ನಗರದ ಆರ್‌ಜಿಎಂ ಶಾಲಾ ಮೈದಾನದಲ್ಲಿ ಸಾಂಸ್ಕೃತಿಕ ನಾಯಕ ಬಸವಣ್ಣ ಜಯಂತಿ ಅಂಗವಾಗಿ ಆರು ದಿನಗಳ ಕಾಲ ಹಮ್ಮಿಕೊಂಡ ಪ್ರವಚನ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ಕಾಯಕದ ಮೂಲಕ ದೇವರನ್ನು ಕಾಣಬೇಕೆಂದು ಬಸವಣ್ಣ ಹೇಳಿದ ನುಡಿಮುತ್ತನ್ನು ಅರ್ಥೈಸಿಕೊಂಡು ಕರ್ತವ್ಯ ಪಾಲಿಸಿದರೆ ದೇಶವು ಎಲ್ಲ ವಿಧಗಳಲ್ಲೂ ಅಭಿವೃದ್ಧಿ ಹೊಂದುತ್ತದೆ. ಮನುಷ್ಯನ ಒಳತಿಗಾಗಿ ಬಸವಣ್ಣ ಕ್ರಾಂತಿ ಮಾಡಿದರು. ನಾವು ಅವರ ಅಭಿಮಾನಿಗಳಾದರಷ್ಟೇ ಸಾಲದು. ಅವರ ನಡೆ-ನುಡಿ ಪಾಲಿಸಬೇಕು ಎಂದರು.

    ಧಾರವಾಡ ಬಸವ ಯೋಗ ಮಂದಿರದ ಶರಣೆ ಅಕ್ಕನಾಗಲಾಂಬಿಕೆ ಮಾತಾಜಿ ಮಾತನಾಡಿ, ಅಸ್ಪಶ್ಯತೆ, ಲಿಂಗ ತಾರತಮ್ಯ, ಮೇಲು-ಕೀಳು ಎಂಬ ಜಾತಿ ವ್ಯವಸ್ಥೆ ಸರಿದಾರಿಗೆ ತರಲು ಬಸವಣ್ಣ ಶ್ರಮಿಸಿದ್ದರು. ವೈಚಾರಿಕತೆ ಮೂಲಕ ಸಾಮಾಜಿಕ ಕ್ರಾಂತಿ ಮಾಡಿದರು. ಸ್ತ್ರೀ ಸಮಾನತೆಗೆ ಹೆಚ್ಚಿನ ಒತ್ತು ನೀಡಿ, ಅನುಭವ ಮಂಟಪದಲ್ಲಿ ಸ್ಥಾನ ನೀಡಿದ್ದರು. ಇದಕ್ಕೆ ಅಕ್ಕಮಹಾದೇವಿಯೇ ಉದಾಹರಣೆ ಎಂದರು.

    ಒಳಬಳ್ಳಾರಿ ಸುವರ್ಣಗಿರಿ ವಿರಕ್ತಮಠದ ಬಸವಲಿಂಗ ಸ್ವಾಮೀಜಿ, ಆರ್‌ಜಿಎಂ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಚನ್ನನಗೌಡ ಆರ್.ಪಾಟೀಲ್, ಸ್ತ್ರೀ ರೋಗ ತಜ್ಞೆ ಡಾ.ವಿದ್ಯಾಶ್ರೀ ಎಂ.ಪಾಟೀಲ್, ವೀರಶೈವ ಲಿಂಗಾಯ ಸಮಾಜ ಅಧ್ಯಕ್ಷ ಪಂಪನಗೌಡ ತಾವರಗೇರಾ ಮಾತನಾಡಿದರು. ಪ್ರಮುಖರಾದ ಬಸವಲಿಂಗಪ್ಪ ಬಾದರ್ಲಿ, ಮಲ್ಲಿಕಾರ್ಜುನಸ್ವಾಮಿ, ಕೆರೇಗೌಡ ಪೊಲೀಸ್ ಪಾಟೀಲ್ ಕುರುಕುಂದಿ, ನಿಜಗುಣ ಹಡಪದ, ಸುಮಂಗಲಾ ಚಿಂಚರಕಿ, ಪುಟ್ಟರಾಜ ಮೋತಿ, ಗುಂಡಪ್ಪ ಬಳಿಗೇರ, ಶಂಬನಗೌಡ ನಿಡಿಗೋಳ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts