600 ಮೆಟ್ಟಿಲು ಹತ್ತಿ ದೇವಿಯ ಹರಕೆ ತೀರಿಸಿದ ಭಕ್ತ, ಕೆಲವೇ ನಿಮಿಷಗಳಲ್ಲಿ ಮರಳಿ ಬಾರದ ಲೋಕಕ್ಕೆ ತೆರಳಿದ!

ucchangi
ಉಚ್ಚಂಗಿದುರ್ಗ
Published on

ವಿಜಯಪುರ: ಆತ ಆರುನೂರು ಮೆಟ್ಟಿಲು ಹತ್ತಿ ದೇವಿಯ ಹರಕೆ ತೀರಿಸಿ ಬಳಿಕ ಮರಳಿ ಬಾರದ ಲೋಕಕ್ಕೆ ತೆರಳಿದ ಅತ್ಯಪರೂಪದ ವಿದ್ಯಮಾನವೊಂದು ಜರುಗಿದೆ. ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗದ ಗುಡ್ಡದ ಮೇಲೆ ಇಂಥದ್ದೊಂದು ಘಟನೆ ನಡೆದಿದೆ.

ಹರಕೆ ತೀರಿಸಿ ದೈವಾಧೀನನಾದ ಭಕ್ತನ ಹೆಸರು ಹುಚ್ಚಪ್ಪ (60). ಇವರು ದಾವಣಗೆರೆ ನಗರದ ನಿವಾಸಿ. ಪತ್ನಿಸಮೇತ ಉಚ್ಚಂಗೆಮ್ಮನ ದರ್ಶನಕ್ಕೆ ಬಂದಿದ್ದಾಗ ಈ ದುರಂತ ಸಂಭವಿಸಿದೆ.
ಆರುನೂರು ಮೆಟ್ಟಿಲು ಹತ್ತಿ, ಹರಕೆ ತೀರಿಸಿ ಮರಳುವಾಗ ಅಸ್ವಸ್ಥಗೊಂಡು ಎದೆನೋವು ಕಾಣಿಸಿಕೊಂಡಿತ್ತು.

ಕೂಡಲೇ ಸ್ಥಳೀಯರು ಡೋಲಿಯಲ್ಲಿ ಅವರನ್ನು ಕೆಳಕ್ಕೆ ಕರೆದೊಯ್ದು ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದ್ದಾರೆ. ಆದರೆ ಅವರು ಮಾರ್ಗಮಧ್ಯೆ ಹೃದಯಾಘಾತದಿಂದಾಗಿ ಕೊನೆಯುಸಿರೆಳೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net