ಸಮಾಜದ ಅಭಿವೃದ್ಧಿ ಬ್ರಾಹ್ಮಣರ ಗುರಿ: ಶರತ್ ಕೃಷ್ಣ ಪಡುವೆಟ್ನಾಯ ಅಭಿಮತ

Bel_Anual Day
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಬೆಳ್ತಂಗಡಿ ಚಿತ್ಪಾವನ ಬ್ರಾಹ್ಮಣರ ಸಂಘದ ವಾರ್ಷಿಕೋತ್ಸವ ಭಾನುವಾರ ಉಜಿರೆ ಶ್ರೀ ರಾಮಕೃಷ್ಣ ಸಭಾಭವನದಲ್ಲಿ ಜರುಗಿತು.

ಮುಖ್ಯ ಅತಿಥಿ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶೀಯ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಮಾತನಾಡಿ, ರಾಷ್ಟ್ರ ನಿರ್ಮಾಣದಲ್ಲಿ ಬ್ರಾಹ್ಮಣ ಪಾತ್ರ ಹಿರಿದು. ಸ್ವಾತಂತ್ರೃ ಹೋರಾಟ, ಸಾಹಸಿ ಪ್ರವೃತ್ತಿಯಲ್ಲಿ ಬ್ರಾಹ್ಮಣರ ಕಾರ್ಯ ಉಲ್ಲೇಖನೀಯ. ನಾಯಕತ್ವ ಗುಣ ಹೊಂದಿರುವ ಅವರು ವೈದಿಕ ಪರಂಪರೆ ಜತೆ ಕಲೆ, ಉದ್ಯಮ, ಕೃಷಿಯಲ್ಲೂ ಅಗ್ರಗಣ್ಯರು. ಬ್ರಾಹ್ಮಣರ ಒಗ್ಗಟ್ಟು ಉತ್ತಮವಾಗಿದ್ದು, ಅವರಲ್ಲಿ ಲಾಬಿ ಮಾಡುವ ಉದ್ದೇಶ ಇಲ್ಲ. ಸಮಾಜದ ಅಭಿವೃದ್ಧಿಯೇ ಅವರ ಗುರಿ ಎಂದು ಹೇಳಿದರು.

ಸಂಘದ ಅಧ್ಯಕ್ಷ ತ್ರಿವಿಕ್ರಮ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವೈದಿಕ ಕಾಳಾಜೆ ಗೋಪಾಲ ಕೃಷ್ಣ ಚಿಪ್ಲೂಣ್ಕರ್ ಕಾರ್ಯಕ್ರಮ ಉದ್ಘಾಟಿಸಿದರು. ಉಪನ್ಯಾಸಕ ಅಜಿತ್ ಹೆಬ್ಬಾರ್ ಹೊಸಮಠ, ಕವಯಿತ್ರಿ ಭಾರತಿ ತಾಮನ್ಕರ್, ಕಾರ್ಯದರ್ಶಿ ನಾರಾಯಣ ಡಕೆ ಉಪಸ್ಥಿತರಿದ್ದರು.

ಹಿರಿಯ ವೈದ್ಯ ಶ್ರೀನಿವಾಸ್ ಡೋಂಗ್ರೆ, ಸಮಾಜ ಸೇವಕ ಗಣೇಶ ವಿ.ಗೋಖಲೆ, ವೈದಿಕ ನಾರಾಯಣ ಗೋಖಲೆ ಅವರನ್ನು ಸನ್ಮಾನಿಸಲಾಯಿತು. ಉಪಾಧ್ಯಕ್ಷ ವರದ ಶಂಕರ್ ದಾಮಲೆ ಸ್ವಾಗತಿಸಿದರು. ಖಜಾಂಚಿ ವಾಸುದೇವ ಗೋಖಲೆ ಆಯವ್ಯಯ ಮಂಡಿಸಿದರು.

ರಶ್ಮಿ ಪಟವರ್ಧನ್, ಡಾ.ದೀಪಾಲಿ ಡೋಂಗ್ರೆ ಕಾರ್ಯಕ್ರಮ ನಿರೂಪಿಸಿದರು. ಪ್ರಭಾಕರ ಗೋಖಲೆ, ಪೂರ್ಣಾ ಗೋಖಲೆ, ಗೋಪು ಗೋಖಲೆ, ಶ್ರೀಕರ ಭಿಡೆ, ಡಾ.ಶಶಿಧರ ಡೋಂಗ್ರೆ, ದಿವ್ಯಾ ಡೋಂಗ್ರೆ, ವಿವೇಕ್ ಕೇಳ್ಕರ್, ಡಾ.ಸಂದೀಪ್ ಪಟವರ್ಧನ್, ಚಂದ್ರಕಾಂತ ಗೋರೆ, ಉಷಾ ಮೆಹೆಂದಳೆ, ಅತಿಥಿ, ಸನ್ಮಾನಿತರನ್ನು ಪರಿಚಯಿಸಿದರು. ಸದಸ್ಯ ಪ್ರಹ್ಲಾದ ಡಕೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net