ತೆಲಂಗಾಣ: ರಾಜಮೌಳಿ ನಿರ್ದೇಶನದ ಆರ್ಆರ್ಆರ್ ಸಿನಿಮಾ ಬಳಿಕ ಜೂನಿಯರ್ ಎನ್ಟಿಆರ್ ಅಂತರಾಷ್ಟ್ರೀಯ ಸ್ಟಾರ್ ಆಗಿ ಬದಲಾಗಿದ್ದು, ಸಿನಿಮಾಗಳ ಬಗ್ಗೆ ನಿರೀಕ್ಷೆಗಳು ಸಹ ನೂರುಪಟ್ಟಾಗಿವೆ. ಇಂದು ಅವರ ಬಹುನಿರೀಕ್ಷಿತ ‘ದೇವರ’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಅಭಿಮಾನಿಗಳಿಗೆ ಸಖತ್ ಟ್ರೀಟ್ ನೀಡಿದ್ದಾರೆ.
ಇದನ್ನೂ ಓದಿ: ಮಣಿಪುರದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರ; ಐದು ದಿನ ಇಂಟರ್ನೆಟ್ ಸ್ಥಗಿತ, ಕರ್ಫ್ಯೂ ಜಾರಿ
ಇಂದು ಯೂಟ್ಯೂಬ್‌ನಲ್ಲಿ ಬಿಡುಗಡೆಯಾದ ಸಿನಿಮಾದ ಟ್ರೇಲರ್ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕೆಲವೇ ಕ್ಷಣಗಳಲ್ಲಿ ಲಕ್ಷಗಟ್ಟಲೆ ವೀವ್ಸ್ ಪಡೆದಿದ್ದು, ಭಾರತೀಯ ಚಿತ್ರರಂಗದಲ್ಲಿ ವಿನೂತನ ದಾಖಲೆ ಬರೆಯುವತ್ತ ಹೆಜ್ಜೆ ಹಾಕುತ್ತಿದೆ.
ಮುಂಬೈನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ತೆಲುಗು, ತಮಿಳು, ಹಿಂದಿ, ಕನ್ನಡ ಹಾಗೂ ಮಲಯಾಳಂ ಭಾಷೆಯ ಟ್ರೇಲರ್ ಬಿಡುಗಡೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಜೂನಿಯರ್ ಎನ್ಟಿಆರ್, ಜಾಹ್ನವಿ ಕಪೂರ್ ಗಮನ ಸೆಳೆದರು.
Bow down to the conqueror of fear! 🔥🔥https://t.co/Av5H4vliq5#DevaraTrailer #Devara pic.twitter.com/Rsa6o3ROep
— Devara (@DevaraMovie) September 10, 2024
ಜೂ.ಎನ್ಟಿಆರ್ ಎದುರು ನಾಯಕಿಯಾಗಿ ಬಾಲಿವುಡ್ನ ಯುವನಟಿ ಜಾನ್ಹವಿ ಕಪೂರ್ ನಟಿಸುತ್ತಿದ್ದಾರೆ. ಸಿನಿಮಾವನ್ನು ಕೊರಟಾಲ ಶಿವ ನಿರ್ದೇಶಿಸುತ್ತಿದ್ದು, ಸಿನಿಮಾದಲ್ಲಿ ಬಾಲಿವುಡ್ ನಟ ಸೈಫ್ ಅಲಿ ಖಾನ್ ಹಾಗೂ ನಟ ಶ್ರೀಕಾಂತ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಯುವಸುಧಾ ಆರ್ಟ್ಸ್ ಮತ್ತು ಎನ್ಟಿಆರ್ ಆರ್ಟ್ಸ್ ನಡಿ ಸುಧಾಕರ್ ಮಿಕ್ಕಿಲಿನೇನಿ ಮತ್ತು ಹರಿಕೃಷ್ಣ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಇನ್ನೂ 300 ಕೋಟಿ ರೂಪಾಯಿ ಬಜೆಟ್‌ನ ಈ ಚಿತ್ರವನ್ನ ಕೊರಟಾಲ ಶಿವ ಡೈರೆಕ್ಷನ್ ಮಾಡಿದ್ದಾರೆ. 2021 ರಲ್ಲಿಯೇ ಅನೌನ್ಸ್ ಆಗಿರೋ ಈ ಚಿತ್ರದ ಕೆಸ 2023 ರಲ್ಲಿ ಶುರು ಆಗಿದೆ. 2024 ಮಧ್ಯೆದಲ್ಲಿಯೇ ಚಿತ್ರವನ್ನು ಒಂದಲ್ಲ, ಎರಡು ಭಾಗದಲ್ಲಿಯೇ ಮಾಡುತ್ತಿದ್ದೇವೆ ಅಂತ ಸಿನಿಮಾ ತಂಡವೇ ಅಧಿಕೃತವಾಗಿಯೇ ಹೇಳಿಕೊಂಡಿದೆ. 2024ರ ಸೆಪ್ಟೆಂಬರ್ 27ರಂದು ಐದು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಚಿತ್ರವಾಗಿ ದೇವರ ಸಿನಿಮಾ ಬಿಡುಗಡೆಯಾಗಲಿದೆ.