ಹೈದರಾಬಾದ್: ಜೂ.ಎನ್ಟಿಆರ್ ಅವರ ಮುಂಬರುವ ಪ್ಯಾನ್ ಇಂಡಿಯಾ ಚಿತ್ರ ‘ದೇವರ’. ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿದೆ. ಈ ಚಿತ್ರ ಸೆ. 27 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದ್ದು, ಹಾಡುಗಳು ಈಗಾಗಲೇ ಜನಪ್ರಿಯವಾಗಿವೆ.
ಇದನ್ನೂ ಓದಿ: ಪ್ಯಾರಾಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಹೊಕಾಟೊ.. ಪ್ರಧಾನಿ ಮೋದಿ ಶ್ಲಾಘನೆ
ಎನ್‌ಟಿಆರ್ ಅವರ ಆರ್‌ಆರ್‌ಆರ್‌ನ ಮುಂದಿನ ಚಿತ್ರ ಇದಾಗಿರುವುದರಿಂದ ದೇವರ ಮೇಲೆ ಭಾರಿ ನಿರೀಕ್ಷೆ ಹುಟ್ಟುಹಾಕಿದೆ. ಮಾಹಿತಿ ಪ್ರಕಾರ ಈ ಸಿನಿಮಾ ಮೊದಲ ದಿನವೇ ಭರ್ಜರಿ ಓಪನಿಂಗ್ ಪಡೆದು ದಾಖಲೆ ಸೃಷ್ಟಿಸುವುದು ಖಚಿತ ಎನ್ನುತ್ತಾರೆ ಅಭಿಮಾನಿಗಳು.
ಈ ನಡುವೆ ಉತ್ತರ ಅಮೆರಿಕಾದಲ್ಲಿ ಈಗಾಗಲೇ ದೇವರ ಚಿತ್ರಕ್ಕಾಗಿ ಮುಂಗಡ ಬುಕ್ಕಿಂಗ್ ಪ್ರಾರಂಭವಾಗಿದೆ. ವಿಶೇಷ ಪ್ರೀಮಿಯರ್ ಶೋಗಳಿಗೆ ಬುಕ್ಕಿಂಗ್ ನಡೆಯುತ್ತಿದೆ. ಈ ಚಿತ್ರಕ್ಕಾಗಿ ಅತ್ಯಂತ ವೇಗವಾಗಿ 15000 ಕ್ಕೂ ಹೆಚ್ಚು ಟಿಕೆಟ್ ಬುಕ್ ಮಾಡಲಾಗಿದೆ. ಇದುವರೆಗೆ ಯಾವುದೇ ಭಾರತೀಯ ಸಿನಿಮಾದ ಟಿಕೆಟ್‌ಗಳು ಇಷ್ಟು ವೇಗವಾಗಿ ಬುಕ್ ಆಗಿಲ್ಲ ಎನ್ನಲಾಗುತ್ತಿದೆ. ಇದರ ಟ್ರೇಲರ್ ಮುಂಬೈನಲ್ಲಿ ಭರ್ಜರಿಯಾಗಿ ರಿಲೀಸ್ ಆಗಲಿದ್ದು, ನಂತರ ಮುಂಗಡ ಬುಕ್ಕಿಂಗ್ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆ ಇದೆ. ಹಾಗೇನಾದರೂ ಆದಲ್ಲಿ ದೇವರ ಚಿತ್ರ ಮೊದಲ ದಿನವೇ ವಿಶ್ವಾದ್ಯಂತ 100 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ ಎನ್ನಲಾಗುತ್ತಿದೆ.
ಮುಂಬೈನಿಂದ ಫ್ರಾಂಕ್‌ಫರ್ಟ್‌ಗೆ ಹೊರಟಿದ್ದ ವಿಮಾನ ಟರ್ಕಿಯಲ್ಲಿ ಲ್ಯಾಂಡ್: ಕಾರಣ ಇದೇ ನೋಡಿ..