

ದೇವನಹಳ್ಳಿ: ರಾತ್ರಿ ಪಾಳಯದ ಕೆಲಸ ಮುಗಿಸಿ ಇಂದು(ಬುಧವಾರ) ಬೆಳಗ್ಗೆ ಮನೆಗೆ ಬಂದ ಪೊಲೀಸ್ ಹೆಡ್ ಕಾನ್ಸ್ಟೇಬಲ್ವೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯಲ್ಲಿ ಸಂಭವಿಸಿದೆ.
ಹೆಬ್ಬಾಳ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ವಿರೂಪಾಕ್ಷ ಗೌಡಶ್ರೀ(39) ಮೃತರು. ಮಂಗಳವಾರ ರಾತ್ರಿ ಕೆಲಸಕ್ಕೆ ತೆರಳಿದ್ದ ವಿರೂಪಾಕ್ಷ ಗೌಡರು, ಬುಧವಾರ ಬೆಳಗ್ಗೆ ಮನೆಗೆ ಆಗಮಿಸಿದ್ದರು. ಬಂದ ಕೆಲವೇ ಕ್ಷಣದಲ್ಲಿ ಎದೆನೋವಿನಿಂದ ಮನೆಯ ಹಾಲ್ನಲ್ಲೇ ಕುಸಿದು ಬಿದ್ದರು.
ಕೂಡಲೇ ಕುಟುಂಬಸ್ಥರು ವಿರೂಪಾಕ್ಷ ಗೌಡರನ್ನು ಆಸ್ವತ್ರೆಗೆ ಕರೆದೊಯ್ದರಾದರು ಪ್ರಯೋಜನವಾಗಲಿಲ್ಲ. ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ. ಮೃತರಿಗೆ ಪತ್ನಿ ಮತ್ತು ಮೂವರು ಮಕ್ಕಳಿದ್ದಾರೆ.