ದೇವದುರ್ಗ: ಜಾಲಹಳ್ಳಿ ಸಮೀಪದ ಸೋಮನಮರಡಿ ಗ್ರಾಪಂ ಕಚೇರಿಯಲ್ಲಿ ಅಧ್ಯಕ್ಷೆ ಈರಮ್ಮ ಕರಿಯಪ್ಪ ನಾಯಕ ಅಧ್ಯಕ್ಷತೆಯಲ್ಲಿ ಶನಿವಾರ ಏರ್ಪಡಿಸಿದ್ದ ತುರ್ತು ಸಾಮಾನ್ಯ ಸಭೆಯಲ್ಲಿ ಗ್ರಾಪಂಯನ್ನು ಅರಕೇರಾ ತಾಲೂಕು ಕೇಂದ್ರದಿಂದ ಕೈಬಿಟ್ಟು ದೇವದುರ್ಗದಲ್ಲೇ ಮುಂದುವರಿಸಲು ನಿರ್ಣಯ ಕೈಗೊಳ್ಳಲಾಯಿತು.

ಪಂಚಾಯಿತಿ ವ್ಯಾಪ್ತಿಯ ಬಿ.ಆರ್.ಗುಂಡ, ಸಂಪತ್ತರಾಯನ ದೊಡ್ಡಿ, ಮ್ಯಾಕಲದೊಡ್ಡಿ, ಸೋಮನ ಮರಡಿ ಗ್ರಾಮ ಜಾಲಹಳ್ಳಿ ಹೋಬಳಿ ಕೇಂದ್ರದಿಂದ 5 ಕಿಮೀ ಅಂತರದಲ್ಲಿವೆ. ಇದರಿಂದ ಜನರಿಗೆ ಅನುಕೂಲಕವಾಗಿದೆ. ಅರಕೇರಾ 30 ಕಿಮೀ ದೂರವಿದ್ದು ಸಮರ್ಪಕವಾಗಿ ಸಾರಿಗೆ ಸೌಲಭ್ಯವಿಲ್ಲ. ಅಲ್ಲಿ ಪೊಲೀಸ್ ಠಾಣೆ, ಆಸ್ಪತ್ರೆ, ಬ್ಯಾಂಕ್, ಕಾಲೇಜುಗಳ ವ್ಯವಸ್ಥೆ ಇಲ್ಲ. ಇದರಿಂದ ತೀವ್ರ ಸಮಸ್ಯೆ ಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಮ್ಮ ಗ್ರಾಪಂ ಅರಕೇರಾ ತಾಲೂಕಿನಿಂದ ಕೈಬಿಟ್ಟು, ದೇವದುರ್ಗ ತಾಲೂಕಿನಲ್ಲಿ ಮುಂದುವರಿವಂತೆ ಒತ್ತಾಯಿಸಿ ಒಮ್ಮತದಿಂದ ನಿರ್ಣಯ ಕೈಗೊಂಡರು.
ಪಿಡಿಒ ಲಕ್ಷ್ಮೀ, ಉಪಾಧ್ಯಕ್ಷೆ ಪಾರ್ವತಿ ಹನುಮಂತ, ಸದಸ್ಯರಾದ ಲಕ್ಷ್ಮೀ ಬಸವರಾಜ ಯಾದವ್, ಸಾಬಣ್ಣ, ಸಣ್ಣ ಬಾವಸಾಬ್, ಸಿದ್ದಪ್ಪ, ಅಮರಮ್ಮ, ಮಹಾದೇವಮ್ಮ, ಅನ್ನಪೂರ್ಣ, ದುರುಗಯ್ಯ, ದುರ್ಗಮ್ಮ, ಜಂಬಣ್ಣ, ಅಮರೇಶ, ಗೌರಮ್ಮ, ಭೀಮಪ್ಪ ಮ್ಯಾಕಲದೊಡ್ಡಿ ಇದ್ದರು.