ಇಂದು ಆರ್​ಸಿಬಿ-ಮುಂಬೈ ಇಂಡಿಯನ್ಸ್​ ಮುಖಾಮುಖಿ; ಗೆಲುವಿನ ಹಳಿಗೆ ಮರಳುವ ತವಕದಲ್ಲಿ ಪ್ಲೆಸಿಸ್​ ಪಡೆ

web rcb vs mi
Published on

ಮುಂಬೈ: ಸತತ 3 ಸೋಲಿನಿಂದ ಕಂಗೆಟ್ಟಿರುವ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮತ್ತು ಸತತ 3 ಸೋಲಿನ ಬಳಿಕ ಗೆಲುವಿನ ಖಾತೆ ತೆರೆದಿರುವ ಮುಂಬೈ ಇಂಡಿಯನ್ಸ್​ ತಂಡಗಳು ಐಪಿಎಲ್​-17ರಲ್ಲಿ ಗುರುವಾರ ಮುಖಾಮುಖಿ ಆಗಲಿವೆ. ಹಾಲಿ ಆವೃತ್ತಿಯ 25ನೇ ಪಂದ್ಯದಲ್ಲಿ ಆರ್​ಸಿಬಿ ತಂಡ ಗೆಲುವಿನ ಹಳಿಗೆ ಮರಳುವ ಹಂಬಲದಲ್ಲಿದ್ದರೆ, ಆತಿಥೇಯ ಮುಂಬೈ ತಂಡ ಗೆಲುವಿನ ಲಯ ಕಾಯ್ದುಕೊಳ್ಳುವ ತವಕದಲ್ಲಿದೆ.

ಇದುವರೆಗೆ ಆಡಿರುವ 5 ಪಂದ್ಯಗಳಲ್ಲಿ 4ರಲ್ಲಿ ಸೋತಿರುವ ಆರ್​ಸಿಬಿ ತಂಡ 175ಕ್ಕಿಂತ ಹೆಚ್ಚಿನ ಮೊತ್ತವನ್ನು ರಸಿಕೊಳ್ಳಲು ಅಥವಾ ಬೆನ್ನಟ್ಟಲಾಗದೆ ಪರದಾಡುತ್ತಿದೆ. ಬೌಲಿಂಗ್​ ಸುಧಾರಣೆ ಕಂಡಾಗ ಬ್ಯಾಟಿಂಗ್​ ಕೈಕೊಡುತ್ತಿದೆ. ಬ್ಯಾಟರ್​ಗಳು ಮಿಂಚಿದಾದ ಬೌಲರ್​ಗಳು ನಿರಾಸೆ ಮೂಡಿಸುತ್ತಿದ್ದಾರೆ. ಜತೆಗೆ ಫೀಲ್ಡಿಂಗ್​ನಲ್ಲೂ ಕೆಲ ಕ್ಯಾಚ್​ ಕೈಚೆಲ್ಲಿರುವುದು ದುಬಾರಿಯಾಗಿದೆ. ಹೀಗಾಗಿ ಈ ಬಾರಿ ಹಾರ್ದಿಕ್​ ಪಾಂಡ್ಯ ಬಳಗವನ್ನು ಅದರದೇ ನೆಲದಲ್ಲಿ ಮಣಿಸಲು ್​ಾ ಡು ಪ್ಲೆಸಿಸ್​ ಪಡೆ ಸರ್ವಾಂಗೀಣ ನಿರ್ವಹಣೆ ತೋರುವುದು ಅಗತ್ಯವಾಗಿದೆ.

ಮತ್ತೊಂದೆಡೆ ಮುಂಬೈ ಹಾರ್ದಿಕ್​ ಪಾಂಡ್ಯ ನಾಯಕತ್ವದಲ್ಲಿ ಆಡಿದ ಮೊದಲ 3 ಪಂದ್ಯಗಳ ಸೋಲಿನ ಬಳಿಕ ಡೆಲ್ಲಿ ವಿರುದ್ಧ ಕೊನೆಗೂ ಗೆಲುವಿನ ಸವಿ ಕಂಡಿದೆ. ಆದರೆ ಇದೂ ಹೆಚ್ಚು ಖುಷಿ ಪಡಲಾರದಂಥ ಗೆಲುವಾಗಿದೆ. ಕೊನೇ ಓವರ್​ನ ನಿರ್ಣಾಯಕ ಆಟವೇ ಮುಂಬೈಗೆ ಗೆಲುವಿನ ಲಕ್​ ತಂದುಕೊಟ್ಟಿತು. ಪ್ರಮುಖವಾಗಿ ಮುಂಬೈ ಬೌಲಿಂಗ್​ ವಿಭಾಗ ಸುಧಾರಣೆ ಕಾಣುವುದು ಅಗತ್ಯವಾಗಿದೆ.

ವಿರಾಟ್​ ಕೊಹ್ಲಿ ಅವಲಂಬನೆ

ಬೌಲಿಂಗ್​ ವಿಭಾಗದಲ್ಲಿ ಹೆಚ್ಚು ದುರ್ಬಲವಾಗಿರುವ ಆರ್​ಸಿಬಿ, ಬ್ಯಾಟಿಂಗ್​ನಲ್ಲೂ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ ಅವರೊಬ್ಬರನ್ನೇ ಹೆಚ್ಚು ಅವಲಂಬಿಸುವಂತಾಗಿದೆ. ವಿದೇಶಿ ಬ್ಯಾಟರ್​ಗಳಾದ ನಾಯಕ ್​ಾ ಡು ಪ್ಲೆಸಿಸ್​, ಗ್ಲೆನ್​ ಮ್ಯಾಕ್ಸ್​ವೆಲ್​, ಕ್ಯಾಮರಾನ್​ ಗ್ರೀನ್​ ದೊಡ್ಡ ಇನಿಂಗ್ಸ್​ ಆಡದಿರುವುದು ಆರ್​ಸಿಬಿಗೆ ಹಿನ್ನಡೆ ತಂದಿದೆ. ಕೊಹ್ಲಿ 5 ಪಂದ್ಯಗಳಲ್ಲಿ 1 ಶತಕ, 2 ಅರ್ಧಶತಕ ಸಹಿತ 316 ರನ್​ ಬಾರಿಸಿದ್ದಾರೆ. ಏಕದಿನ ವಿಶ್ವಕಪ್​ನಲ್ಲಿ ವಾಂಖೆಡೆಯಲ್ಲಿ ನಡೆದ ಸೆಮಿೈನಲ್​ನಲ್ಲಿ 50ನೇ ಏಕದಿನ ಶತಕ ಸಿಡಿಸಿ ಮಿಂಚಿದ್ದ ಕೊಹ್ಲಿ ಅದೇ ತಾಣದಲ್ಲಿ ಮತ್ತೆ ರನ್​ಮಳೆ ಹರಿಸುವ ಹುರುಪಿನಲ್ಲಿದ್ದಾರೆ.

ವಿಶ್ವಾಸ ವೃದ್ಧಿಸಿಕೊಂಡ ಮುಂಬೈ

ತಂಡದೊಳಗಿನ ಬಿಕ್ಕಟ್ಟಿನ ವರದಿಗಳ ನಡುವೆ ಟೂರ್ನಿಯಲ್ಲಿ ಕೊನೆಗೂ ಗೆಲುವಿನ ಖಾತೆ ತೆರೆದಿರುವುದು ಮುಂಬೈ ತಂಡದ ಆತ್ಮವಿಶ್ವಾಸವನ್ನು ವೃದ್ಧಿಸಲಿದೆ. ತಂಡದ ಪ್ರಮುಖ ಬ್ಯಾಟರ್​ಗಳೆಲ್ಲ ಉತ್ತಮ ಲಯದಲ್ಲಿದ್ದಾರೆ. ರೋಹಿತ್​&ಕಿಶನ್​ ಕಳೆದ ಪಂದ್ಯದಲ್ಲಿ ಭರ್ಜರಿ ಆರಂಭವನ್ನೇ ಒದಗಿಸಿದ್ದಾರೆ. ವಿಶ್ವ ನಂ. 1 ಟಿ20 ಬ್ಯಾಟರ್​ ಸೂರ್ಯಕುಮಾರ್​ ಪುನರಾಗಮನದ ಪಂದ್ಯದಲ್ಲಿ ಖಾತೆ ತೆರೆಯದೆ ನಿರಾಸೆ ಮೂಡಿಸಿದರೂ, ಶ್ರೀ ಲಯ ಕಂಡುಕೊಳ್ಳುವ ನಿರೀೆ ಇದೆ. ರೊಮಾರಿಯೊ ಶೆರ್ಡ್​ ಆಲ್ರೌಂಡ್​ ಆಟ ಮುಂಬೈಗೆ ಹೆಚ್ಚಿನ ಸಮತೋಲನ ತಂದಿದೆ. ಆದರೆ ಬೌಲಿಂಗ್​ನಲ್ಲಿ ಇನ್ನೂ ಸಂಟಿತ ನಿರ್ವಹಣೆ ಬೇಕಾಗಿದೆ. ಕಳೆದ ಪಂದ್ಯದಲ್ಲಿ ಮೊಹಮದ್​ ನಬಿ ಆಡಿಸುವ ಮೂಲಕ ಮುಂಬೈ ಸ್ಪಿನ್​ ವಿಭಾಗವನ್ನೂ ಬಲಪಡಿಸಿಕೊಂಡಿದೆ.

ಮುಖಾಮುಖಿ: 32

ಆರ್​ಸಿಬಿ: 14

ಮುಂಬೈ: 18

ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಜಿಯೋಸಿನಿಮಾ.

ಬುಮ್ರಾ-ಕೊಹ್ಲಿ ಮುಖಾಮುಖಿ ಕುತೂಹಲ

ಉತ್ತಮ ಲಯದಲ್ಲಿರುವ ವಿರಾಟ್​ ಕೊಹ್ಲಿ ಮತ್ತು ವೇಗಿ ಜಸ್​ಪ್ರೀತ್​ ಬುಮ್ರಾ ಮುಖಾಮುಖಿ ಪಂದ್ಯದ ಪ್ರಮುಖ ಆಕರ್ಷಣೆ ಎನಿಸಿದೆ. ಇದುವರೆಗೆ 15 ಇನಿಂಗ್ಸ್​ಗಳಲ್ಲಿ ಕೊಹ್ಲಿಗೆ 92 ಎಸೆತಗಳನ್ನು ಎಸೆದಿರುವ ಬುಮ್ರಾ 4 ಬಾರಿ ಔಟ್​ ಮಾಡಿದ್ದಾರೆ. ಐಪಿಎಲ್​ನಲ್ಲಿ ಬುಮ್ರಾ ಅವರ ಮೊದಲ ಮತ್ತು 100ನೇ ವಿಕೆಟ್​ ಕೊಹ್ಲಿ ಆಗಿದ್ದಾರೆ. ಬುಮ್ರಾ ಎದುರು ಕೊಹ್ಲಿ 35ರ ಸರಾಸರಿಯಲ್ಲಿ 140 ರನ್​ ಬಾರಿಸಿದ್ದಾರೆ.

*4: ವಿರಾಟ್​ ಕೊಹ್ಲಿ ಇನ್ನು 4 ಸಿಕ್ಸರ್​ ಸಿಡಿಸಿದರೆ ಐಪಿಎಲ್​ನಲ್ಲಿ 250 ಸಿಕ್ಸರ್​ ಪೂರೈಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net