ದಂತ ಚಿಕಿತ್ಸೆ ಮತ್ತು ತಪ್ಪು ಕಲ್ಪನೆಗಳು

Dental
Published on

4. ಅಡುಗೆಸೋಡಾ ಬಳಸಿ ಉಜ್ಜುವುದರಿಂದ ಹಲ್ಲುಗಳು ಬಿಳಿಯಾಗುತ್ತವೆ

ಅಡುಗೆಸೋಡಾ (baking soda) ಒಂದು ಬಗೆಯಲ್ಲಿ ಉಜ್ಜಿ ಸವೆಸುವ ಶಕ್ತಿ ಹೊಂದಿದೆ. ಇದು ಅಲ್ಪಾವಧಿಯಲ್ಲಿ ಹಲ್ಲುಗಳನ್ನು ಬಿಳಿಯಾಗಿಸುತ್ತದೆ. ಆದರೆ ಪದೇಪದೆ ಬಳಸುವುದರಿಂದ ಹಲ್ಲಿನ ಮೇಲಿನ ಪದರ ಸವೆದು ಸೂಕ್ಷ್ಮತೆ ಉಂಟಾಗುತ್ತದೆ ಮತ್ತು ಅಧಿಕವಾಗಿ ಬಳಸುವುದರಿಂದ ಹಲ್ಲುಗಳು ಕ್ರಮೇಣ ಮತ್ತಷ್ಟು ಹಳದಿಯಾಗಿ ಕಾಣಬಹುದು. ಅಲ್ಲದೆ ವಸಡಿನ ಮೇಲೂ ದುಷ್ಪರಿಣಾಮವನ್ನು ಉಂಟುಮಾಡುತ್ತದೆ. ಆದ್ದರಿಂದ ಇದನ್ನು ಉಪಯೋಗಿಸದೆ ಇರುವುದೇ ಉತ್ತಮ.

5. ಗರ್ಭಾವಸ್ಥೆಯಲ್ಲಿ ದಂತಚಿಕಿತ್ಸೆ ಮಾಡಿಸಬಾರದು

ಎರಡನೇ ತ್ರೖೆಮಾಸಿಕವು ಯಾವುದೇ ರೀತಿಯ ದಂತಚಿಕಿತ್ಸೆ ಪಡೆಯಲು ಸೂಕ್ತವಾಗಿದ್ದು ರೂಟ್ ಕೆನಾಲ್​ನಂತಹ ತುರ್ತು ಚಿಕಿತ್ಸೆಯನ್ನೂ ಪಡೆಯಬಹುದು. ಅಲ್ಲದೆ ಬಾಯಿಯ ಆರೋಗ್ಯವನ್ನು ಕಾಪಾಡಲು ಗರ್ಭಧಾರಣೆಯ ಯಾವುದೇ ಹಂತದಲ್ಲಿಯೂ ಸ್ಕೇಲಿಂಗ್ ಮಾಡಿಸಬಹುದು. ಮಹಿಳೆಯರಲ್ಲಿ ಹಾಮೋನ್​ಗಳ ಏರುಪೇರು ಹೆಚ್ಚಿರುವುದರಿಂದ ಸಾಮಾನ್ಯ ವಸಡಿನ ತೊಂದರೆಗಳು ಹೆಚ್ಚಾಗಿರುತ್ತದೆ. ಆದ್ದರಿಂದ ಗರ್ಭಿಣಿಯರು ನಿಯತವಾಗಿ ದಂತವೈದ್ಯರನ್ನು ಕಾಣುವುದು ಅಥವ ಗರ್ಭ ಧರಿಸುವ ಮೊದಲೇ ದಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಸೂಕ್ತ.

6. ಬಾಣಂತಿಯರು ಹಲ್ಲುಜ್ಜುವುದರಿಂದ ಹಲ್ಲುಗಳು ಸಡಿಲಗೊಳ್ಳುತ್ತವೆ

ಬಾಣಂತಿಯರು ಹಲ್ಲುಗಳನ್ನು ಉಜ್ಜದಿರಲು ಯಾವುದೇ ವೈಜ್ಞಾನಿಕ ಕಾರಣಗಳಿಲ್ಲ ಮತ್ತು ಹಲ್ಲುಗಳನ್ನು ಶುಚಿಗೊಳಿಸದಿದ್ದರೆ ಬಾಯಿಯ ಆರೋಗ್ಯ ಹಾಳಾಗುತ್ತದೆ. ಆದ್ದರಿಂದ ನಿತ್ಯ ಎರಡು ಬಾರಿ ಹಲ್ಲುಗಳನ್ನು ಶುಚಿಗೊಳಿಸುವುದರೊಂದಿಗೆ ನಾಲಿಗೆ ಮತ್ತು ವಸಡನ್ನು ಶುಚಿಯಾಗಿಟ್ಟುಕೊಳ್ಳಬೇಕು.

7. ಹಲ್ಲುನೋವು ಇದ್ದರೆ ಮಾತ್ರ ದಂತವೈದ್ಯರನ್ನು ಕಾಣಬೇಕು.

ಯಾವುದೇ ಸಮಸ್ಯೆ ಇಲ್ಲದಿದ್ದರೂ ಆರು ತಿಂಗಳಿಗೊಮ್ಮೆಯಾದರೂ ದಂತವೈದ್ಯರನ್ನು ಕಾಣುವುದು ಉತ್ತಮ. ಆರಂಭದ ಸ್ಥಿತಿಯಲ್ಲಿ ದಂತ ಸಮಸ್ಯೆಗಳನ್ನು ಸುಲಭ ಮತ್ತು ಸರಳ ಚಿಕಿತ್ಸೆಯ ಮೂಲಕ ಸರಿಪಡಿಸಬಹುದು. ಇದರಿಂದ ಸಮಯ ಹಾಗು ಹಣದ ಉಳಿತಾಯವಾಗುತ್ತದೆ. ಮುಖ್ಯವಾಗಿ ಆರಂಭದ ಹಂತದಲ್ಲಿ ನೋವು ಇರುವುದಿಲ್ಲ.

8. ಹಾಲುಹಲ್ಲುಗಳು ಬಿದ್ದು ಹುಟ್ಟುವುದರಿಂದ ಚಿಕಿತ್ಸೆಯ ಅಗತ್ಯವಿಲ್ಲ.

ಮಕ್ಕಳ ಹಾಲುಹಲ್ಲುಗಳು ಹೇಗಿದ್ದರೂ ಬಿದ್ದು ಹೊಸ ಹಲ್ಲುಗಳು ಬರುತ್ತವೆ, ಅದಕ್ಕಾಗಿ ಹಣ ಮತ್ತು ಸಮಯದ ವ್ಯರ್ಥ ಮಾಡುವುದು ಬೇಡ ಎಂದು ಪಾಲಕರು ಚಿಕಿತ್ಸೆಯನ್ನು ಮುಂದೂಡುತ್ತಾರೆ ಅಥವಾ ನಿರ್ಲಕ್ಷಿಸುತ್ತಾರೆ. ಆದರೆ ಹಾಲುಹಲ್ಲುಗಳನ್ನು ಅವಧಿಗೂ ಮುನ್ನ ಕಳೆದುಕೊಂಡರೆ ಶಾಶ್ವತ ಹಲ್ಲುಗಳಿಗೆ ಸಮಸ್ಯೆಯಾಗಬಹುದು. ವಕ್ರದಂತ ಸಮಸ್ಯೆಯೂ ಆಗಬಹುದು.

ಪ್ರಶ್ನೋತ್ತರ

ನನಗೆ ಕೆಟ್ಟ ಉಸಿರಾಟದ ಸಮಸ್ಯೆ ಇದೆ. ಆ ಕಾರಣದಿಂದ ನಾನು ಯಾರ ಮುಂದೆಯೂ ಮಾತನಾಡಲು ಸಾಧ್ಯವಾಗುವುದಿಲ್ಲ ಪರಿಹಾರ ತಿಳಿಸಿ.

| ಮೋಹನ್ ರಾಜ್

ಬಾಯಿಯ ದುರ್ವಾಸನೆ ಕುರಿತು ಈ ಅಂಕಣದಲ್ಲಿ ಮೊದಲೇ ತಿಳಿಸಲಾಗಿದೆ. ಇದಕ್ಕೆ ಹಲವು ಕಾರಣಗಳು. ಯಾವ ಕಾರಣದಿಂದ ಎಂದು ತಿಳಿದು ಅದಕ್ಕೆ ತಕ್ಕ ಚಿಕಿತ್ಸೆ ಪಡೆಯಬೇಕು. ಹೆಚ್ಚು ನೀರು ಕುಡಿಯುವುದು, ಸರಿಯಾದ ಕ್ರಮದಲ್ಲಿ ಹಲ್ಲುಗಳನ್ನು ಶುಚಿಗೊಳಿಸುವುದು ಮತ್ತು ದಂತವೈದ್ಯರ ಬಳಿ ಒಮ್ಮೆ ಸ್ಕೇಲಿಂಗ್ ಮಾಡಿಸಿಕೊಳ್ಳುವುದು ಉತ್ತಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net