ಹೆರಿಗೆ ವಾರ್ಡ್​ಗೆ ಪ್ರವೇಶ ನಿರಾಕರಿಸಿದ ವೈದ್ಯರು; ಆಸ್ಪತ್ರೆ ಕಾರಿಡಾರ್​ನಲ್ಲೇ ಮಗುವಿಗೆ ಜನ್ಮ

gurugram Hospital
Published on

ಗುರುಗ್ರಾಮ: ಗರ್ಭಿಣಿ ಮಹಿಳೆಗೆ ವೈದ್ಯರು ಹೆರಿಗೆ ವಾರ್ಡ್​ನೊಳಗೆ ಪ್ರವೇಶ ನಿರಾಕರಿಸಿದ ಕಾರಣ ಆಕೆ ಆಸ್ಪತ್ರೆಯ ಕಾರಿಡಾರ್​ನಲ್ಲೇ ಮಗುವಿಗೆ ಜನ್ಮ ನೀಡಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ.

ಘಟನೆಯೂ ಗುರುಗ್ರಾಮದ ಸೆಕ್ಟರ್​ 10ನಲ್ಲಿರುವ ಸಿವಿಲ್​ ಆಸ್ಪತ್ರೆಯಲ್ಲಿ ನಡೆದಿದ್ದು, ಮಹಿಳೆ ಸಂತಿ ನರೇಂದರ್​(25) ಎಂದು ತಿಳಿದು ಬಂದಿದೆ. ತಾಯಿ ಹಾಗೂ ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಸರ್ಕಾರಿ ಆಸ್ಪತ್ರೆ ಸಿಬ್ಬಂದಿಯ ಅಮಾನವೀಯ ಕೃತ್ಯದ ಕುರಿತು ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಈ ಕುರಿತು ಕಠಿಣ ಕ್ರಮ ಜರುಗಿಸುವಂತೆ ಮಹಿಳೆಯ ಕುಟುಂಬಸ್ಥರು ಆಗ್ರಹಿಸಿದ್ದಾರೆ.

ಒಳ ಬಿಡದ ವೈದ್ಯರು

ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಮಹಿಳೆಯ ಪತಿ ನರೇಂದರ್​ ನಾವು ಉತ್ತರ ಪ್ರದೇಶದಿಂದ ನೌಕರಿ ಅರಸಿ ಗುರುಗ್ರಾಮಕ್ಕೆ ಬಂದಿದ್ದು, ಇಲ್ಲಿನ ಫ್ಯಾಕ್ಟರಿ ಒಂದರಲ್ಲಿ ಕೆಲಸ ಮಾಡುತ್ತಿದ್ದೇವೆ. ನನ್ನ ಹೆಂಡತಿ ಸಂತಿಗೆ ಹೆರಿಗೆ ನೋವು ಕಾಣಿಸಿಕೊಂಡ ಕಾರಣ ಆಕೆ ಆಸ್ಪತ್ರೆಗೆ ಶುಕ್ರವಾರ ದಾಖಲಾಗಿದ್ದಾಳೆ.

Baby Birth
ಸಾಂದರ್ಭಿಕ ಚಿತ್ರ

ವೈದ್ಯರು ಹೇಳಿದ ಎಲ್ಲಾ ಪರೀಕ್ಷಗೆಳನ್ನು ಮಾಡಿಸಿದ ಬಳಿಕ ಹೆರಿಗೆ ರೂಮ್​ ಬಳಿ ತೆರಳಿದ್ದೆವು. ಆಗ ವೈದ್ಯರು ಆಕೆಯನ್ನು ಒಳ ಬಿಡದೆ ಎಷ್ಟು ಬಾರಿ ಬರುತ್ತೀರ ಎಂದು ನಮ್ಮ ಮೇಲೆ ಕೂಗಾಡಲು ಶುರು ಮಾಡಿದ್ದರು. ಬಳಿಕ ನನ್ನ ಹೆಂಡತಿ ಹೆರಿಗೆ ನೋವನ್ನು ತಾಳಲಾರದೆ ಕಾರಿಡಾರ್​ನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು.

ತನಿಖೆ ಪ್ರಗತಿಯಲ್ಲಿದೆ

ನಾನು ಕೂಡಲ್ಲೇ ಅಲ್ಲಿದ್ದ ಅಲಾರಾಮ್​ ಅನನ್ಉ ಒತ್ತಿದೆ. ಸ್ಥಳಕ್ಕೆ ಬಂದ ಆಸ್ಪತ್ರೆ ಸಿಬ್ಬಂದಿ ಆಕೆಯನ್ನು ಪೋಸ್ಟ್​ ಮಾರ್ಟಮ್​ ರೂಮಿಗೆ ಕರೆದೊಯ್ದು ಚಿಕಿತ್ಸೆ ನೀಡಿದ್ದರು. ಮಗುವನ್ನು ನೆಲದ ಮೇಲೆ ಹಾಗೆ ಮಲಗಿಸಿ ಅಮಾನವೀಯತೆ ಮೆರೆದಿದ್ದಾರೆ ಎಂದು ಮಹಿಳೆ ಸಂತಿಯ ಪತಿ ನರೇಂದರ್​ ಆರೋಪಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಪ್ರದಾನ ವೈದ್ಯಾಧಿಕಾರಿ ನರೇಶ್​ ಗಾರ್ಗ್​ ಘಟನೆಯ ಬಗ್ಗೆ ನಮಗೆ ಮಾಹಿತಿ ನೀಡಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net