More

    ಮಹಾರಾಷ್ಟ್ರದಲ್ಲಿ ದಾಖಲೆ ಮುರಿದ ಸಾಂಕ್ರಾಮಿಕ ರೋಗ: ಗಂಟೆಗೆ ಇಬ್ಬರಿಗೆ ಡೆಂಗ್ಯೂ!

    ಮುಂಬೈ: ಮಹಾರಾಷ್ಟ್ರದಲ್ಲಿ ಸೊಳ್ಳೆಗಳ ಸಂತತಿ ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗಗಳು ದಿನೇ ದಿನೆ ಅಟ್ಟಹಾಸ ಮೆರೆಯುತ್ತಿವೆ. ಈ ಬಾರಿ ಸೊಳ್ಳೆಗಳ ಕಡಿತದಿಂದ ಪ್ರತಿ ಗಂಟೆಗೆ ಸರಾಸರಿ 2 ಮಂದಿ ಡೆಂಗ್ಯೂಗೆ ತುತ್ತಾಗುತ್ತಿದ್ದಾರೆ. ಡೆಂಗ್ಯೂ ಸೋಂಕಿತ ರೋಗಿಗಳಲ್ಲಿ ಮಹಾರಾಷ್ಟ್ರ ಮೂರನೇ ಸ್ಥಾನದಲ್ಲಿದೆ.

    ಇದನ್ನೂ ಓದಿ: ಡರ್ಬನ್‌ನಲ್ಲಿ ಭಾರತ Vs ದಕ್ಷಿಣಾ ಆಫ್ರಿಕಾ ಟಿ20 ಸರಣಿ: ಬೌನ್ಸರ್‌ಗಳ ಭಯದಲ್ಲಿ ಭಾರತ – ಇಂದು ರಾತ್ರಿ 7.30ಕ್ಕೆ ಮೊದಲ ಪಂದ್ಯ

    ಸೊಳ್ಳೆಗಳ ಕಾಟದಿಂದ ಮುಂಬೈ ಸೇರಿದಂತೆ ರಾಜ್ಯದೆಲ್ಲೆಡೆ ಜನರ ಆರೋಗ್ಯದ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರಿದೆ. ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ ಜ.1 ರಿಂದ ನ.30 ರವರೆಗೆ 17531 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಉತ್ತರ ಪ್ರದೇಶ 33375 ಪ್ರಕರಣಗಳನ್ನು ಹೊಂದಿ ಪ್ರಥಮ ಸ್ಥಾನದಲ್ಲಿದ್ದರೆ, 19672 ಪ್ರಕರಣಗಳು ಬಿಹಾರದಲ್ಲಿ ವರದಿಯಾಗುವ ಮೂಲಕ 2 ನೇ ಸ್ಥಾನದಲ್ಲಿದೆ.

    ಮುಂಬೈ ಒಂದರಲ್ಲೇ 4000ಕ್ಕೂ ಹೆಚ್ಚು ಪ್ರಕರಣ: ದೇಶದಲ್ಲಿ ಒಟ್ಟು 234427 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದು, ಮಹಾರಾಷ್ಟ್ರದಲ್ಲಿ ಶೇ.7 ರಷ್ಟು ಪ್ರಕರಣಗಳು ಪತ್ತೆಯಾಗಿವೆ. ಮಹಾರಾಷ್ಟ್ರದಲ್ಲಿ 17 ಸಾವಿರ ಡೆಂಗ್ಯೂ ರೋಗಿಗಳಲ್ಲಿ 4300 ಕ್ಕೂ ಹೆಚ್ಚು ರೋಗಿಗಳು ಮುಂಬೈನಲ್ಲಿ ಪತ್ತೆಯಾಗಿದ್ದಾರೆ. ಬಿಎಂಸಿ ಆರೋಗ್ಯ ಇಲಾಖೆಯ ಮೂಲಗಳ ಪ್ರಕಾರ, ಸೊಳ್ಳೆಗಳ ಕಾಟದಿಂದ ಹಲವರು ರೋಗ ರುಜಿನಗಳಿಗೆ ತುತ್ತಾಗಿದ್ದಾರೆ.

    ಬಾಲಿಯಲ್ಲಿ ಪ್ರಯಾಣಿಸಲು ಇನ್ನು ವೀಸಾ ಇಲ್ಲ; ಭಾರತೀಯರಿಗೆ ವೀಸಾ-ಮುಕ್ತ ಪ್ರವೇಶಕ್ಕೆ ಇಂಡೋನೇಷ್ಯಾ ನಿರ್ಧಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts