More

    ಹುಲಿ ಬೇಟೆಯಾಡಿ ಹಲ್ಲನ್ನು ಕುತ್ತಿಗೆಗೆ ಹಾಕಿಕೊಂಡಿದ್ದೇನೆ: ಶಾಸಕ ಹೇಳಿಕೆ ವೈರಲ್​!

    ಮಹಾರಾಷ್ಟ್ರ: 37 ವರ್ಷಗಳ ಹಿಂದೆ ಹುಲಿಯನ್ನು ಬೇಟೆಯಾಡಿ ಅದರ ಹಲ್ಲುಗಳನ್ನು ಕುತ್ತಿಗೆಗೆ ಹಾಕಿಕೊಂಡಿರುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ ಶಾಸಕರೊಬ್ಬರು ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ:IPL 2024: ಬಹುನಿರೀಕ್ಷಿತ ಐಪಿಎಲ್ ಪಂದ್ಯಗಳಿಗೆ ದಿನಗಣನೆ! ಈ ನಗರದಲ್ಲಿ ನಡೆಯಲಿದೆ ಉದ್ಘಾಟನಾ ಸಮಾರಂಭ, ಇಲ್ಲಿವೆ 21 ದಿನಗಳ ವೇಳಾಪಟ್ಟಿ

    ಮಹಾರಾಷ್ಟ್ರದ ವಿದರ್ಭ ಪ್ರದೇಶದ ಬುಲ್ಧಾನಾ ಕ್ಷೇತ್ರದ ಶಾಸಕ ಸಂಜಯ್ ಗಾಯಕ್‌ವಾಡ್ ಅವರ ಹೇಳಿಕೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವಿಡಿಯೊದಲ್ಲಿ ವ್ಯಕ್ತಿಯೊಬ್ಬರು ಕುತ್ತಿಗೆಯಲ್ಲಿ ಹುಲಿ ಹಲ್ಲಿರುವ ಬಗ್ಗೆ ಶಾಸಕರನ್ನು ಪ್ರಶ್ನಿಸುತ್ತಾರೆ. ಅದಕ್ಕುತ್ತರಿಸಿದ ಅವರು, ‘ಇದು ಹುಲಿ ಹಲ್ಲು. 1987ರಲ್ಲಿ ಹುಲಿಯನ್ನು ಕೊಂದು ಅದರ ಹಲ್ಲನ್ನು ಕುತ್ತಿಗೆಗೆ ಹಾಕಿಕೊಂಡೆ’ಎಂದು ಹೇಳಿದ್ದಾರೆ.

    ಸೋಮವಾರ, ಛತ್ರಪತಿ ಶಿವಾಜಿ ಜನ್ಮ ಜಯಂತಿ ಕಾರ್ಯಕ್ರಮದ ಸಂದರ್ಭ ವಿಡಿಯೋ ಚಿತ್ರೀಕರಣವಾಗಿರುವ ಸಾಧ್ಯತೆ ಇದ್ದು, ಶಿವಸೇನಾ(ಯುಬಿಟಿ) ಮುಖವಾಣಿ ಸಾಮ್ನಾದ ಸಾಮಾಜಿಕ ಮಾಧ್ಯಮ ಖಾತೆಯಲ್ಲೂ ಪೋಸ್ಟ್ ಮಾಡಲಾಗಿದೆ.

    1987ರ ಹಿಂದೆಯೇ ದೇಶದಲ್ಲಿ ಹುಲಿ ಬೇಟೆಯನ್ನು ಕ್ರಿಮಿನಲ್ ಅಪರಾಧ ಎಂದು ಪರಿಗಣಿಸಲಾಗಿತ್ತು. ಸ್ಪಷ್ಟನೆ ಕೇಳಲು ಶಾಸಕ ಗಾಯಕ್ವಾಡ್ ಅವರಿಗೆ ಕರೆ ಮಾಡಿದರೆ ಅವರು ಕರೆ ಸ್ವೀಕರಿಸಿಲ್ಲ. ವಿಡಿಯೋದಲ್ಲಿ ಗಾಯಕ್ವಾಡ್ ಅವರ ಕುತ್ತಿಗೆಯ ಸುತ್ತ ಹುಲಿಯ ದೇಹದ ಭಾಗದ ಬಗ್ಗೆ ಕೇಳಲಾಗಿದೆ.

    ಈ ಹಿಂದೆ ಬಿಗ್ ಬಾಸ್’ ಕನ್ನಡ ಸೀಸನ್ 10ರಲ್ಲಿ ಸ್ಪರ್ಧಿ ವರ್ತೂರು ಸಂತೋಷ್ ರನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದರು. ಹುಲಿ ಉಗುರಿನಿಂದ ಮಾಡಿದಂತಹ ಚಿನ್ನದ ಸರವನ್ನು ಸಂತೋಷ್ ಧರಿಸಿದ್ದರು ಎಂಬ ಆರೋಪದ ಮೇಲೆ ಅವರನ್ನು ಬಂಧಿಸಲಾಗಿತ್ತು. ಬೆಂಗಳೂರು ದಕ್ಷಿಣ ರಾಮೋಹಳ್ಳಿ ಅರಣ್ಯಾಧಿಕಾರಿಗಳು ಸಂತೋಷ್ ವಿರುದ್ಧ ಸುಮೊಟೋ ಕೇಸ್ ದಾಖಲಾಗಿತ್ತು.

    ರಂಗೇರಿದ ಲೋಕ ಅಖಾಡ: ಪಶ್ಚಿಮ ಬಂಗಾಳಕ್ಕೆ ಮಾರ್ಚ್​ 6ಕ್ಕೆ ಮೋದಿ, ಫೆ.28 ಅಮಿತ್ ಶಾ ಭೇಟಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts