More

    ಪೊಳ್ಳು ಗ್ಯಾರಂಟಿಗೆ ಮಾರುಹೋಗಬೇಡಿ

    ನರಗುಂದ: ತಾಲೂಕಿನ ಕೊಣ್ಣೂರ ಗ್ರಾಮದಲ್ಲಿರುವ ಮಲಪ್ರಭಾ ನದಿಗೆ ಪಿ.ಸಿ. ಗದ್ದಿಗೌಡ್ರ ಅವರು ಸುಸಜ್ಜಿತ ಸೇತುವೆ ನಿರ್ಮಿಸಿಕೊಡುವ ಮೂಲಕ ನರಗುಂದ ಮತ್ತು ಬಾಗಲಕೋಟೆ ಮಾರ್ಗವಾಗಿ ಸಂಚರಿಸುವ ಮತದಾರರಿಗೆ ಅಂಬಿಗನಂತೆ ಹಗಲಿರುಳು ಕಾರ್ಯನಿರ್ವಹಿಸಿದ್ದಾರೆ. ಮತದಾರರು ಪೊಳ್ಳು ಗ್ಯಾರಂಟಿಗೆ ಮಾರುಹೋಗದೆ ಅಭಿವೃದ್ಧಿಗೆ ಬೆಂಬಲ ವ್ಯಕ್ತಪಡಿಸಬೇಕು ಎಂದು ಶಾಸಕ ಸಿ.ಸಿ.ಪಾಟೀಲ ಹೇಳಿದರು.

    ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಾಗಲಕೋಟೆ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡ್ರ ಪರವಾಗಿ ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಹಿರಂಗ ಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

    ಕೇಂದ್ರ ಸರ್ಕಾರ ಬಾಡಗಂಡಿಯಿಂದ ನರಗುಂದದವರೆಗಿನ ಹುಬ್ಬಳ್ಳಿ-ವಿಜಯಪುರ-218 ರಾಷ್ಟ್ರೀಯ ಹೆದ್ದಾರಿಯನ್ನು 324.79 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿಪಡಿಸುವುದು ಹಾಗೂ ವಿಸ್ತರಣೆ ಕಾಮಗಾರಿ ಪ್ರಗತಿ ಹಂತದಲ್ಲಿದೆ. ನರಗುಂದದಲ್ಲಿ 126 ಕೋಟಿ ರೂ. ವೆಚ್ಚದ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಭೂಮಿ ಸ್ವಾಧೀನಪಡಿಸಿಕೊಂಡು ಕಾಮಗಾರಿ ಪ್ರಾರಂಭಿಸಲಾಗಿದೆ. ಕೊಣ್ಣೂರಿನ ಮಲಪ್ರಭಾ ನದಿಯ ಬ್ರಿಜ್ ನಿರ್ಮಾಣಕ್ಕೆ 33 ಕೋಟಿ, ಕಿರು ಸೇತುವೆ ನಿರ್ಮಾಣಕ್ಕೆ 6.56 ಕೋಟಿ ರೂ.ಮಂಜೂರಾಗಿದ್ದು ಕಾಮಗಾರಿ ಮುಕ್ತಾಯ ಹಂತದಲ್ಲಿದೆ ಎಂದರು.

    ಕೇಂದ್ರದ ಸೇತು ಬಂಧ ಯೋಜನೆಯಡಿ ನರಗುಂದ ಮತಕ್ಷೇತ್ರದ ಮಲ್ಲಾಪೂರ, ಹೊಳೆಆಲೂರ, ಲಖಮಾಪೂರ, ರಾಂಪೂರ ರೈಲ್ವೆ ಸ್ಟೇಷನ್ ವ್ಯಾಪ್ತಿಯಲ್ಲಿ ಒಟ್ಟು 4 ಮೇಲ್ಸೆತುವೆ ಕಾಮಗಾರಿಗಳು ಮಂಜೂರಾಗಿವೆ. ಸಾಕಷ್ಟು ಗ್ರಾಮೀಣ ರಸ್ತೆಗಳನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಭಿವೃದ್ಧಿಪಡಿಸಿರುವುದರಿಂದ ಮತದಾರರು ಮತ್ತೊಮ್ಮೆ ಬಿಜೆಪಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು.

    ವಕೀಲ ಎಸ್.ಆರ್. ಪಾಟೀಲ, ಪುರಸಭೆ ಸದಸ್ಯ ರಾಚನಗೌಡ ಪಾಟೀಲ ಮಾತನಾಡಿದರು. ಚಂಬಣ್ಣ ವಾಳದ, ಚಂದ್ರು ಪವಾರ, ಬಿ.ಬಿ. ಐನಾಪೂರ, ಬಿಜೆಪಿ ನರಗುಂದ ಮಂಡಲ ಅಧ್ಯಕ್ಷ ಅಜ್ಜುಗೌಡ ಪಾಟೀಲ, ಸಂಗಣ್ಣ ಕಳಸಾ, ಸರಸ್ವತಿ ಕುಂದಾಪೂರ, ಪುರಸಭೆ ಸದಸ್ಯ ಸುನೀಲ ಕುಷ್ಟಗಿ. ಪ್ರಕಾಶ ಪಟ್ಟಣಶೆಟ್ಟಿ, ಪ್ರಶಾಂತ ಜೋಶಿ, ದಾದಾಸಾಹೇಬ ನಾಯ್ಕರ್, ಕೇದಾರಪ್ಪ, ಪಕ್ಕೀರಗೌಡ ಅಣ್ಣಿಗೇರಿ, ಪಂಚಣ್ಣ ಬೆಳವಟಗಿ, ಬಸ್ಸು ಪಾಟೀಲ, ಭಾವನಾ ಪಾಟೀಲ, ಮಹಾದೇವಿ ಗುಗ್ಗರಿ, ಸುರೇಶ ಯಾದವ, ವಿರೇಶ ಶಿರುಂದಮಠ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts