More

    ಬಾಲಿಯಲ್ಲಿ ಪ್ರಯಾಣಿಸಲು ಇನ್ನು ವೀಸಾ ಇಲ್ಲ; ಭಾರತೀಯರಿಗೆ ವೀಸಾ-ಮುಕ್ತ ಪ್ರವೇಶಕ್ಕೆ ಇಂಡೋನೇಷ್ಯಾ ನಿರ್ಧಾರ

    ಜಕಾರ್ತಾ( ಇಂಡೋನೇಷ್ಯಾ): ಭಾರತೀಯರಿಗೆ ವೀಸಾ ಮುಕ್ತ ಪ್ರವೇಶವನ್ನು ಅನುಮತಿಸುವ ದೇಶಗಳ ಪಟ್ಟಿಗೆ ಇಂಡೋನೇಷ್ಯಾ ಸಹ ಸೇರಿದೆ. ಶ್ರೀಲಂಕಾ, ಥೈಲ್ಯಾಂಡ್ ಮತ್ತು ವಿಯೆಟ್ನಾಂ ನಂತರ ಇಂಡೋನೇಷ್ಯಾ ಭಾರತೀಯರಿಗೆ ಈ ಪ್ರಯೋಜನವನ್ನು ಒದಗಿಸಲು ಸಿದ್ಧತೆ ನಡೆಸಿದೆ.

    ಇದನ್ನೂ ಓದಿ: ಗುಟ್ಕಾ ಜಾಹೀರಾತು ಪ್ರಕರಣ: ಮೂವರು ಬಾಲಿವುಡ್ ಸೂಪರ್‌ಸ್ಟಾರ್‌ಗಳಿಗೆ ಶೋಕಾಸ್ ನೋಟಿಸ್!
    ಇಂಡೋನೇಷ್ಯಾವು ಭಾರತ, ಚೀನಾ ಸೇರಿ 20 ದೇಶಗಳ ಪ್ರಯಾಣಿಕರಿಗೆ ವೀಸಾ ಮುಕ್ತ ಪ್ರವೇಶವನ್ನು ಅನುಮತಿಸುತ್ತದೆ. ಆ ದೇಶದ ಪ್ರವಾಸೋದ್ಯಮ ಸಚಿವಾಲಯವು ಒಂದು ತಿಂಗಳೊಳಗೆ ನಿರ್ಧಾರವನ್ನು ಅನುಮೋದಿಸುವುದಾಗಿ ಹೇಳಿದೆ.

    ಭಾರತ ಮತ್ತು ಚೀನಾದ ಜೊತೆಗೆ, ಇಂಡೋನೇಷ್ಯಾ ಯುನೈಟೆಡ್ ಸ್ಟೇಟ್ಸ್, ಆಸ್ಟ್ರೇಲಿಯಾ, ದಕ್ಷಿಣ ಕೊರಿಯಾ, ಜರ್ಮನಿ, ಬ್ರಿಟನ್ ಮತ್ತು ಫ್ರಾನ್ಸ್ ಸೇರಿದಂತೆ 20 ದೇಶಗಳ ನಾಗರಿಕರಿಗೆ ವೀಸಾ-ಮುಕ್ತ ಪ್ರವೇಶವನ್ನು ಪರಿಗಣಿಸುತ್ತಿದೆ. ಈ ಕ್ರಮವು ದೇಶಕ್ಕೆ ಹೆಚ್ಚಿನ ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವ ಮತ್ತು ಹೆಚ್ಚಿನ ವಿದೇಶಿ ವಿನಿಮಯವನ್ನು ಗಳಿಸುವ ಕ್ರಮದ ಭಾಗವಾಗಿದೆ.

    ಇಂಡೋನೇಷ್ಯಾದ ಪ್ರವಾಸೋದ್ಯಮ ಸಚಿವ ಸ್ಯಾಂಡಿಯಾಗ ಯುನೊ ಈ ಬಗ್ಗೆ ಸುಳಿವು ನೀಡಿದ್ದಾರೆ. ಈ ಹಿಂದೆ, ಇಂಡೋನೇಷ್ಯಾ ಕೂಡ ಗೋಲ್ಡನ್ ವೀಸಾವನ್ನು ಅನುಮೋದಿಸಿತ್ತು, ಇದು ವಿದೇಶಿ ಪ್ರವಾಸಿಗರು ದೇಶದಲ್ಲಿ ಹೆಚ್ಚು ಕಾಲ ಉಳಿಯಲು ಅನುವು ಮಾಡಿಕೊಡುತ್ತದೆ. ಕರೋನಾ ಹರಡುವ ಮೊದಲು 2019 ರಲ್ಲಿ ಇಂಡೋನೇಷ್ಯಾಕ್ಕೆ 1.6 ಕೋಟಿ ವಿದೇಶಿ ಪ್ರವಾಸಿಗರು ಭೇಟಿ ಕೊಟ್ಟಿದ್ದರು. ಜನವರಿ-ಅಕ್ಟೋಬರ್ 2023 ರ ಅವಧಿಯಲ್ಲಿ 94.9 ಲಕ್ಷ ಪ್ರವಾಸಿಗರು ತೆರಳಿದ್ದರು.

    ಇಂಡೋನೇಷ್ಯಾ ವಿಶ್ವ ಪ್ರವಾಸೋದ್ಯಮ ನಕ್ಷೆಯಲ್ಲಿ ನಿರ್ಣಾಯಕ ಸ್ಥಾನವನ್ನು ಹೊಂದಿರುವ ದೇಶವಾಗಿದೆ. ಪ್ರವಾಸಿಗರ ಸ್ವರ್ಗ ಎಂದು ಕರೆಯಲ್ಪಡುವ ಬಾಲಿ ದ್ವೀಪವು ಇಂಡೋನೇಷ್ಯಾದ ಪ್ರಮುಖ ಪ್ರವಾಸಿ ತಾಣವಾಗಿದೆ. ಸುಂದರವಾದ ಕಡಲತೀರಗಳು, ಪ್ರವಾಸಿ ಸಂಸ್ಕೃತಿ ಮತ್ತು ಆಹಾರವು ಬಾಲಿಗೆ ಪ್ರವಾಸಿಗರನ್ನು ಆಕರ್ಷಿಸುವ ಅಂಶಗಳಾಗಿವೆ.

    ಅಜ್ಜಿ ನಾನು ದೂರ ಹೋಗುವರೆಗೂ ನೋಡ್ತಾನೆ ಇದ್ದರು: ವಿನೋದ್​ ರಾಜ್​ ಪುತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts