More

    ಜ್ವಾಲಾಮುಖಿ ಸ್ಫೋಟ; 11 ಜನ ಸಾವು, 12 ಪರ್ವತಾರೋಹಿಗಳು ಕಾಣೆ

    ನವದೆಹಲಿ: ಮೌಂಟ್ ಮರಾಪಿ ಜ್ವಾಲಾಮುಖಿ ಸ್ಫೋಟಗೊಂಡ ಒಂದು ದಿನದ ನಂತರ ಸೋಮವಾರ 11 ಪರ್ವತಾರೋಹಿಗಳ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇಂಡೋನೇಷ್ಯಾದ ರಕ್ಷಕರು ಇನ್ನೂ 12 ಮಂದಿ ನಾಪತ್ತೆಯಾಗಿದ್ದಾರೆ.

    ಶನಿವಾರ ಸುಮಾರು 75 ಪರ್ವತಾರೋಹಿಗಳು 2,900 ಮೀಟರ್ ಎತ್ತರದ ಪರ್ವತ ಹತ್ತಲು ಪ್ರಾರಂಭಿಸಿದ್ದರು. ದಿಢೀ‌ರ್ ಜ್ವಾಲಾಮುಖಿ ಸ್ಫೋಟಗೊಂಡು ದಟ್ಟ ಹೊಗೆ ಆವರಿಸಿದ್ದರಿಂದ ಅವರು ಸಿಲುಕಿಕೊಂಡಿದ್ದರು. ಈ ಪೈಕಿ ಎಂಟು ಮಂದಿಗೆ ಸುಟ್ಟ ಗಾಯಗಳಾಗಿವೆ. ಓರ್ವನ ಕೈ,ಕಾಲುಗಳು ಮುರಿದಿವೆ. ಗಾಯಾಳುಗಳನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಪಡಂಗ್‌ನ ಸ್ಥಳೀಯ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯ ಅಧಿಕಾರಿ ಹ್ಯಾರಿ ಅಗಸ್ಟಿಯನ್ ಹೇಳಿದರು.

    ಪಶ್ಚಿಮ ಸುಮಾತ್ರಾದಲ್ಲಿ ಜ್ವಾಲಾಮುಖಿ ಸ್ಫೋಟಗೊಂಡಿದ್ದ ವೇಳೆ 75 ಜನರು ಆ ಪ್ರದೇಶದಲ್ಲಿ ಇದ್ದರು. ಜ್ವಾಲಾಮುಖಿ ಸ್ಫೋಟದ ಬಳಿಕ ರಕ್ಷಣಾ ತಂಡಗಳು ಧಾವಿಸಿದ್ದು, ಅದರಲ್ಲಿ 14 ಜನರನ್ನು ಸುರಕ್ಷಿತವಾಗಿ ಕರೆತಂದಿದ್ದೇವೆ. ಮೊದಲು ನಾಪತ್ತೆಯಾಗಿದ್ದವರಲ್ಲಿ ಮೂವರನ್ನು ಜೀವಂತವಾಗಿ ಪತ್ತೆ ಮಾಡಿದ್ದೇವೆ. 11 ಜನರು ಶವವಾಗಿ ಪತ್ತೆಯಾಗಿದ್ದಾರೆ. ಇನ್ನೂ ಕಾರ್ಯಾಚರಣೆ ಮುಂದುವರಿಸಲಾಗುತ್ತಿದೆ ಎಂದು ರಕ್ಷಣಾ ಏಜೆನ್ಸಿಯ ಮುಖ್ಯಸ್ಥ ಅಬ್ದುಲ್ ಮಲಿಕ್ ತಿಳಿಸಿದ್ದಾರೆ.

    ಹಠಾತ್ ಸ್ಫೋಟಗೊಂಡಿದ್ದರಿಂದ ಆಕಾಶದಲ್ಲಿ 3,000 ಮೀಟರ್ ಎತ್ತರದವರೆಗೂ ಬೂದಿ ಹಾರಿದ್ದು, ದಟ್ಟ ಪದರ ಆವರಿಸಿದೆ. ಬೂದಿ ಆವರಿಸಿದ ಮೋಡಗಳು ಹಲವಾರು ಕಿಲೋಮೀಟರ್‌ಗಳವರೆಗೆ ಹರಡಿಕೊಂಡಿರುವುದು ಕಂಡುಬಂದಿದೆ. ಪಟ್ಟಣಗಳು ಹಾಗೂ ಗ್ರಾಮಗಳು ಜ್ವಾಲಾಮುಖಿಯ ಅವಶೇಷಗಳಿಂದ ಮುಚ್ಚಿಹೋಗಿವೆ. ರಕ್ಷಣಾ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ. ಪೊಲೀಸ್‌ ಮತ್ತು ಸೈನಿಕರು ಸೇರಿದಂತೆ ಸುಮಾರು 168 ರಕ್ಷಕರು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಎಲ್ಲಾ ಆರೋಹಿಗಳನ್ನು ರಕ್ಷಿಸಲು ನಿಯೋಜಿಸಲಾಗಿದೆ.

    ಮೌಂಟ್ ಮರಾಪಿ ಸುಮಾರು 2,891 ಅಡಿ ಎತ್ತರದಲ್ಲಿದ್ದು, ಇದೇ ರೀತಿಯ 127 ಸಕ್ರಿಯ ಜ್ವಾಲಾಮುಖಿಗಳು ಈ ಪ್ರದೇಶದಲ್ಲಿದೆ. ಶಿಖರದ 3 ಕಿಲೋಮೀಟರ್ (1.8 ಮೈಲುಗಳು) ಒಳಗೆ ಪರ್ವತಾರೋಹಿಗಳು ಅಥವಾ ಗ್ರಾಮಸ್ಥರನ್ನು ನಿಷೇಧಿಸುತ್ತದೆ ಎಂದು ಜ್ವಾಲಾಮುಖಿ ಮತ್ತು ಭೂವಿಜ್ಞಾನದ ಕೇಂದ್ರದ ಮುಖ್ಯಸ್ಥ ಹೆಂಡ್ರಾ ಗುಣವಾನ್ ಹೇಳಿದ್ದಾರೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts