ಸರ್ಕಾರ ನಿಗಮಕ್ಕೆ ಅನುದಾನ ನೀಡಲಿ, ನದಾಫ್ ಪಿಂಜಾರ್ ಸಂಘದಿಂದ ಸಿಎಂಗೆ ಮನವಿ

IMG-20240723-WA0019-1.jpg
Published on

ಹುಬ್ಬಳ್ಳಿ: ನೂತನವಾಗಿ ಘೋಷಣೆಯಾಗಿರುವ ಪಿಂಜಾರ್ ನದಾಫ್ ನಿಗಮಕ್ಕೆ ಅನುದಾನ ನೀಡಬೇಕೆಂದು ಕರ್ನಾಟಕ ರಾಜ್ಯ ನದಾಫ್ ಪಿಂಜಾರ್ ಸಂಘ ಶಹರ ಹಾಗೂ ಗ್ರಾಮೀಣ ಘಟಕದ ವತಿಯಿಂದ ಸೋಮವಾರ ತಹಸೀಲ್ದಾರ್ ಮೂಲಕ ಸಿಎಂಗೆ ಮನವಿ ಸಲ್ಲಿಸಲಾಯಿತು.

ಹುಬ್ಬಳ್ಳಿ ತಾಲೂಕು ಆಡಳಿತ ಕಚೇರಿಯಲ್ಲಿ ತಹಸಿಲ್ದಾರ್ಗೆ ಮನವಿ ಸಲ್ಲಿಸಿದ ಸಂಘದ ಪದಾಧಿಕಾರಿಗಳು, ಸದಸ್ಯರು ಶೀಘ್ರ ಸಂಘದ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿದರು.

ಪಾಲಿಕೆ ಮಾಜಿ ಸದಸ್ಯ ಹಜರತ್ಅಲಿ ದೊಡ್ಡಮನಿ, ನದಾಫ್ ಪಿಂಜಾರ್ ಸಂಘದ ರಾಜ್ಯ ಉಪಾಧ್ಯಕ್ಷ ಎಂ.ಎಚ್. ಬೆಂಡಿಗೇರಿ, ಸಮಿತಿ ಸದಸ್ಯರಾದ ರಫೀಕ್ ಅಹ್ಮದ್ ದೊಡ್ಡಮನಿ, ಎಚ್.ಎಲ್. ನದಾಫ್, ದಾವಲಸಾಬ ನದಾಫ್, ಶಹರ ಘಟಕದ ಅಧ್ಯಕ್ಷ ಖುದಾನಸಾಬ ಗೂಗಲ್.

ಉಪಾಧ್ಯಕ್ಷ ಎಂ.ಎ. ನದಾಫ್, ದಿವಾನಸಾಬ್ ನದಾಫ್, ಕಾರ್ಯದರ್ಶಿ ಅಬ್ದುಲ್ ನಬಿ ನದಾಫ್, ಗ್ರಾಮೀಣ ಘಟಕದ ಉಪಾಧ್ಯಕ್ಷ ಹಜರತ್ಅಲಿ ನದಾಫ್, ಕಾರ್ಯದರ್ಶಿ ರಿಯಾಜ್ ಅಹ್ಮದ್ ದೊಡ್ಡಮನಿ, ಸಹ ಕಾರ್ಯದರ್ಶಿ ಖಾದರ್ಬಾಷಾ ಶಿಬಾರಗಟ್ಟಿ, ಮೆಹಬೂಬಸಾಬ್ ನದಾಫ್, ಮೌಲಾಸಾಬ್ ನದಾಫ್, ಬಾಲೆಸಾಬ್ ಪಿಂಜಾರ್, ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net