ಅರಣ್ಯ ಅತಿಕ್ರಮಣದಾರರಿಗೆ ಪಹಣಿ ಪತ್ರಿಕೆ ನೀಡಲು ಆಗ್ರಹ

17 MND 1
Published on

ಮುಂಡಗೋಡ: ಅರಣ್ಯ ಅತಿಕ್ರಮಣ ಹಾಗೂ ಹಂಗಾಮಿ ಲಾಗಣಿದಾರರಿಗೆ ಕಂದಾಯ ಇಲಾಖೆಯಿಂದ ಪಹಣಿ ಪತ್ರಿಕೆ ವಿತರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘ ಮತ್ತು ಹಸಿರು ಸೇನೆಯಿಂದ ಮಂಗಳವಾರ ಪ್ರತಿಭಟನಾ ಮೆರವಣಗೆ ನಡೆಸಲಾಯಿತು.

ಅರಣ್ಯ ಅತಿಕ್ರಮಣ ಹಾಗೂ ಹಂಗಾಮಿ ಲಾಗಣಿದಾರರಿಗೆ ಕಂದಾಯ ಇಲಾಖೆಯಿಂದ ಪಹಣಿ ಪತ್ರಿಕೆ ವಿತರಿಸಬೇಕು. ಅತಿಕ್ರಮಣ ಭೂಮಿ ಜಿಪಿಎಸ್ ಮಾಡದೆ ಉಳಿದಿರುವುದನ್ನು ಜಿಪಿಎಸ್ ಮಾಡಿ ಕೊಡಬೇಕು. ಗೋವಿನಜೋಳಕ್ಕೆ ಬೆಲೆ ನಿಗಧಿ ಪಡಿಸಬೇಕು. ರೈತರ ಎಲ್ಲ ರೀತಿಯ ಸಾಲ ಮನ್ನಾ ಮಾಡಬೇಕು, ರೈತರಿಗೆ ಬೆಳೆವಿಮೆ ನೀಡಬೇಕು. ಬರಗಾಲ ಘೋಷಣೆ ಮಾಡಿದ ಹಿನ್ನ್ನೆಲೆಯಲ್ಲಿ ಒಂದು ಎಕರೆಗೆ ಐವತ್ತು ಸಾವಿರ ರೂ. ಪರಿಹಾರ ಘೋಷಣೆ ಮಾಡಬೇಕು. ಕಬ್ಬಿಗೆ ಪ್ರತಿ ಟನ್‌ಗೆ ನಾಲ್ಕು ಸಾವಿರ ರೂ. ಬೆಲೆ ನಿಗದಿ ಪಡಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ತಹಸೀಲ್ದಾರ್ ಶಂಕರ ಗೌಡಿ ಮುಖಾಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು. ಚಿದಾನಂದ ಹರಿಜನ, ರವಿ ಜಿ.ಟಿ., ಭೀಮಸಿ ವಾಲ್ಮೀಕಿ, ಗೋವಿಂದಪ್ಪ ಬೇಂಡ್ಲಗಟ್ಟಿ, ಅಮರೇಶ ಹರಿಜನ, ಹನ್ಮಂತಪ್ಪ ಆರೆಗೋಪ್ಪ, ಗೀತಾ ಚವ್ಹಾಣ,ಮಾರ್ಟೀನ್ ಬಳ್ಳಾರಿ, ಮಂಜುನಾಥ ಭಟ್, ಆನಂದ ಪೂಜಾರಿ, ರಾಜು ಕುಂದರಗಿ, ದತ್ತಾತ್ರೆಯ ಭಟ್, ಭೀಮಣ್ಣ ಲಮಾಣಿ, ಶಾಂತಪ್ಪ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net