ಕುಂದಾಪುರ: ಸರ್ಕಾರಿ ದಾಖಲೆಗಳಲ್ಲಿ ಇದುವರೆಗೂ ಗುರುತಿಸಲ್ಪಡದ ರಾಜ್ಯದಲ್ಲಿ 4-5 ಲಕ್ಷದಷ್ಟು, ಉಡುಪಿ ಜಿಲ್ಲೆಯಲ್ಲಿ ಸುಮಾರು 25 ಸಾವಿರ ಜನಸಂಖ್ಯೆ ಹೊಂದಿರುವ ವೈಶ್ಯವಾಣಿ ಸಮಾಜವನ್ನು ಪ್ರವರ್ಗ 2ಡಿ ಕೆಟಗರಿಯಲ್ಲಿ ದಾಖಲು ಮಾಡುವಂತೆ ರಾಜ್ಯ ಸರ್ಕಾರ ಹೊರಡಿಸಿದ್ದ ನಿರ್ಣಯಗಳನ್ನು ಗಜೆಟ್ ನೋಟಿಫಿಕೇಶನ್ ಮಾಡುವಂತೆ ವೈಶ್ಯವಾಣಿ ಸಮಾಜದ ಮುಖಂಡ ಸುಭಾಶ್ಚಂದ್ರ ಶೇಟ್ ಆಗ್ರಹಿಸಿದ್ದಾರೆ.

ಕುಂದಾಪುರ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವೈಶ್ಯವಾಣಿ ಸಮಾಜ ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದಿದೆ. ಈ ತನಕ ಸರ್ಕಾರದ ದಾಖಲೆಗಳಲ್ಲಿ ವೈಶ್ಯವಾಣಿ ಜಾತಿ ನಮೂದಿಸಿಲ್ಲ. ಕಳೆದ ವರ್ಷ ಸರ್ಕಾರ ವೈಶ್ಯವಾಣಿ ಸಮುದಾಯವನ್ನು ಹಿಂದುಳಿದ ವರ್ಗಗಳಿಗೆ ಸೇರ್ಪಡೆಗೊಳಿಸಿ 2023ರಲ್ಲಿ ಹೊರಡಿಸಿದ ಸರ್ಕಾರಿ ಆದೇಶ ಜಾರಿಗೆ ಬಾರದಿರುವುದರಿಂದ ವೈಶ್ಯವಾಣಿ ಸಮುದಾಯದ ವಿದ್ಯಾರ್ಥಿ, ಅಭ್ಯರ್ಥಿಗಳಿಗೆ ಸೂಕ್ತ ಜಾತಿ ಪ್ರಮಾಣ ಪತ್ರ ಸಿಗದೇ ಮೀಸಲಾತಿ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಸರ್ಕಾರದ ಸವಲತ್ತು ಪಡೆಯಲು ಸಮಸ್ಯೆಯಾಗಿದೆ. ಸರ್ಕಾರ, ವಿರೋಧ ಪಕ್ಷ ತಾರತಮ್ಯ ತೋರದೆ ಹಿಂದಿನ ಜಾತಿಗಣತಿ ಆಯೋಗ ನೀಡಿದ ಶಿಫಾರಸು ಜಾರಿಗೊಳಿಸಿ ಪ್ರವರ್ಗ 2ಡಿ ಅಡಿಯಲ್ಲಿ ಪರಿಗಣಿಸಿ ಸಾಮಾಜಿಕ ನ್ಯಾಯ ದೊರಕಿಸಿಕೊಡಬೇಕು ಎಂದರು. ವೈಶ್ಯವಾಣಿ ಸಮುದಾಯದ ಪ್ರಮುಖರಾದ ಕೆ.ರಾಘವೇಂದ್ರ ನಾಯಕ್, ಗಜೇಂದ್ರ ಶೇಟ್ ಇದ್ದರು.
ವೈಶ್ಯವಾಣಿ ಸಮುದಾಯವನ್ನು ಹಿಂದುಳಿದ ವರ್ಗಗಳಿಗೆ ಸೇರ್ಪಡೆಗೊಳಿಸುವಂತೆ ಸರ್ಕಾರ ಆದೇಶ ಹೊರಡಿಸಿದ್ದರೂ ಗಜೆಟ್ ನೋಟಿಫೀಕೇಶನ್ ಇದುವರೆಗೂ ಆಗಿಲ್ಲ. ಈ ಬಗ್ಗೆ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕೆ.ಜಯಪ್ರಕಾಶ ಹೆಗ್ಡೆ ಅವರನ್ನು ಭೇಟಿ ಮಾಡಿ ಅಹವಾಲು ಸಲ್ಲಿಸಲಾಗಿದ್ದು, ಸ್ಥಳೀಯ ಶಾಸಕರು, ಸಂಸದರನ್ನು ಭೇಟಿ ಮಾಡಿ ಶೀಘ್ರವೇ ಗಜೆಟ್ ನೋಟಿಫಿಕೇಶನ್ ಹೊರಡಿಸುವಂತೆ ಮನವಿ ಮಾಡಲಾಗುವುದು
ಸುಭಾಶ್ಚಂದ್ರ ಶೇಟ್, ವೈಶ್ಯವಾಣಿ ಸಮಾಜದ ಮುಖಂಡhttps://www.vijayavani.net/life-experience-is-the-greatest-wisdom