ಕೃಷಿ ಸಚಿವರ ರಾಜೀನಾಮೆಗೆ ಆಗ್ರಹ

CTD STRIKE-----
Published on

ಚಿತ್ರದುರ್ಗ: ಯೂರಿಯಾ ಗೊಬ್ಬರ ಕೊರತೆ ಖಂಡಿಸಿ ರಾಜ್ಯರೈತ ಸಂಘ ಹಾಗೂ ಹಸಿರು ಸೇನೆ(ವಾಸುದೇವ ಮೇಟಿ ಬಣ)ನೇತೃತ್ವದಲ್ಲಿ ರೈತರು ನ ಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಪ್ರವಾಸಿ ಮಂದಿರದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ನಡೆಸಿ ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಮಳೆಯಾಗಿದೆ. ಬೆಳೆಗಳಿಗೆ ಯೂರಿಯಾ ಅನಿವಾರ್ಯವಾಗಿದ್ದರೂ ಗೊಬ್ಬರ ನೀಡದೆ ಸತಾಯಿಸಲಾಗುತ್ತಿದೆ ಎಂದು ರಾಜ್ಯಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಮರ್ಪಕ ಯೂರಿಯಾ ಪೂರೈಸಲಾಗದೆ ರೈತರ ಜೀವನದ ಜತೆ ಚೆಲ್ಲಾಟವಾಡುತ್ತಿರುವ ಕೃಷಿ ಸಚಿವ ಚೆಲುವರಾಯಸ್ವಾಮಿ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.

ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮೀಕಾಂತ ಲಿಂಗಾವರಹಟ್ಟಿ, ಲೋಲಾಕ್ಷಮ್ಮ, ಬಸವರಾಜ್, ಮಾರುತಿ ಸಿರಿಗೆರೆ, ನಿಜಲಿಂಗಪ್ಪ, ತಿಪ್ಪೇಸ್ವಾಮಿ, ಶಿವ ಮೂರ್ತಿ, ರಂಗಸ್ವಾಮಿ, ನಾಗರಾಜ್, ಸೈಯ್ಯದ್ ಮಮಾರ‌್ತಾಜ್, ವೆಂಕಟೇಶ್, ರಾಜಕುಮಾರ್, ಮಂಜುನಾಥ್, ಹನುಮಂತಪ್ಪ, ಅಂಜಿನಪ್ಪ ಮತ್ತಿತರರು ಪ್ರತಿಭಟನೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net