

ಪುತ್ತೂರು ಗ್ರಾಮಾಂತರ: ಕರೊನಾ ಸಂದರ್ಭ ಸ್ಥಗಿತಗೊಳಿಸಿದ್ದ ಕುಂಬ್ರ- ಪುತ್ತೂರು ಸಿಟಿ ಬಸ್ ವ್ಯವಸ್ಥೆ ಮರು ಆರಂಭಿಸುವಂತೆ ಆಗ್ರಹಿಸಿ ಕುಂಬ್ರ ವರ್ತಕ ಸಂಘದ ವತಿಯಿಂದ ಕೆಎಸ್ಸಾರ್ಟಿಸಿ ಪುತ್ತೂರು ಡಿಪೋ ಮ್ಯಾನೇಜರ್‌ಗೆ ಶನಿವಾರ ಮನವಿ ನೀಡಲಾಯಿತು.
ಈ ಮೊದಲು ಇದ್ದ ಸಿಟಿ ಬಸ್ ಬಳಿಕ ಬೇಡಿಕೆಗೆ ಅನುಗುಣವಾಗಿ ಕೌಡಿಚ್ಚಾರು ತನಕ ವಿಸ್ತರಿಸಲಾಗಿದ್ದು, ಕೆಲವು ದಿನಗಳ ತನಕ ಬಸ್ ಸಂಚಾರ ನಡೆದಿತ್ತು. ಆದರೆ ಕರೊನಾ ಬಳಿಕ ಬಸ್ ಸಂಚಾರ ಸ್ಥಗಿತಗೊಂಡಿದ್ದು, ಕುಂಬ್ರ, ಕೊಲತ್ತಡ್ಕ, ಪರ್ಪುಂಜ, ಸಂಟ್ಯಾರು, ಸಂಪ್ಯ ಭಾಗದ ವಿದ್ಯಾರ್ಥಿಗಳಿಗೆ ಬಹಳಷ್ಟು ಕಷ್ಟವಾಗುತ್ತಿದೆ. ಕರೊನಾ ಸಂದರ್ಭದಲ್ಲಿ ಸ್ಥಗಿತಗೊಳಿಸಲಾಗಿದ್ದ ಕುಂಬ್ರ- ಪುತ್ತೂರು ನಡುವಣ ಕೆಎಸ್ಸಾರ್ಟಿಸಿ ಸಿಟಿ ಬಸ್ ವ್ಯವಸ್ಥೆಯನ್ನು ಮತ್ತೆ ಆರಂಭಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮನವಿ ಸ್ವೀಕರಿಸಿದ ಅಧಿಕಾರಿಗಳು ಬಸ್ ಮರು ಆರಂಭಿಸುವ ಕುರಿತು ಭರವಸೆ ನೀಡಿದ್ದಾರೆ. ನಿಯೋಗದಲ್ಲಿ ಕುಂಬ್ರ ವರ್ತಕರ ಸಂಘದ ಸ್ಥಾಪಕಾಧ್ಯಕ್ಷ ಶ್ಯಾಮ್‌ಸುಂದರ್ ರೈ ಕೊಪ್ಪಳ, ಅಧ್ಯಕ್ಷ ಪಿ.ಕೆ.ಮಹಮ್ಮದ್ ಕೂಡುರಸ್ತೆ, ಮಾಜಿ ಅಧ್ಯಕ್ಷರಾದ ಮೆಲ್ವಿನ್ ಮೊಂತೆರೊ, ನಾರಾಯಣ ಪೂಜಾರಿ ಕುರಿಕ್ಕಾರ, ದಿವಾಕರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಭವ್ಯಾ ರೈ ಇದ್ದರು.