

ಬೆಂಗಳೂರು: ಹಾಲಿನ ದರವನ್ನು ನಾಲ್ಕೈದು ಬಾರಿ ಏರಿಕೆ ಮಾಡಿದರೂ ರೈತರಿಗೆ ಮಾತ್ರ ಪ್ರೋತ್ಸಾಹ ಧನವನ್ನು ಇನ್ನು ನೀಡಿಲ್ಲ. ಸರ್ಕಾರ ಕೂಡಲೇ ಹೈನುಗಾರರಿಗೆ ಹಾಲಿನ ಪ್ರೋತ್ಸಾಹಧನ್ನು ಬಿಡುಗಡೆ(Demand for release of milk incentive funds) ಮಾಡಬೇಕೆಂದು ನಿಖಿಲ್ ಕುಮಾರಸ್ವಾಮಿ(Nikhil Kumaraswamy) ಆಗ್ರಹಿಸಿದ್ದಾರೆ.
ನಾವು ಕೃಷಿಕರ ಪರ, ರೈತಪರ ಎಂದು ಕೊಚ್ಚಿಕೊಳ್ಳುವ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳೇ ಆಗಿದೆ. ಇನ್ನು ಪ್ರಚಾರ ಜಾಸ್ತಿ, ಕೆಲಸ ಕಮ್ಮಿ. ಇದು ಸರ್ಕಾರದ ನೀತಿ ಎಂದು ಕಿಡಿಕಾರಿದರು.
ಆರು ತಿಂಗಳಿಂದ ರಾಜ್ಯದ ರೈತರ ಹಾಲಿನ ಪ್ರೋತ್ಸಾಹ ಧನ ಬಿಡುಗಡೆ ಮಾಡದ ರೈತ ವಿರೋಧಿ ಕಾಂಗ್ರೆಸ್ ಸರ್ಕಾರ ಬರೋಬ್ಬರಿ 656 ಕೋಟಿ ರೂ. ಹಣವನ್ನು ಬಾಕಿ ಉಳಿಸಿಕೊಂಡಿರುವುದು ರೈತರ ಬಗೆಗೆ ಈ ಸರ್ಕಾರಕ್ಕಿರುವ ಅಸಡ್ಡೆತನವನ್ನು ಸಾಕ್ಷೀಕರಿಸುತ್ತಿದೆ ಎಂದು ಚಾಟಿ ಬೀಸಿದ್ದಾರೆ.
ನಿಮ್ಮ ಬಣ್ಣ ಬಣ್ಣದ ಮಾತುಗಳಿಂದ ಅನ್ನದಾತರಿಗೆ ಯಾವುದೇ ಉಪಯೋಗವಿಲ್ಲ. ಹಾಲಿನ ದರವನ್ನು ನಾಲ್ಕೈದು ಬಾರಿ ಏರಿಕೆ ಮಾಡಿದರೂ ರೈತರಿಗೆ ಮಾತ್ರ ಪ್ರೋತ್ಸಾಹ ಧನವನ್ನು ಇನ್ನು ನೀಡಿಲ್ಲ. ಕೂಡಲೇ ಹೈನುಗಾರರಿಗೆ ಹಾಲಿನ ಪ್ರೋತ್ಸಾಹಧನ್ನು ಬಿಡುಗಡೆ ಮಾಡಿ ಎಂದು ನಿಖಿಲ್ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.