ಮಂಗಳೂರು: ತಮ್ಮ ವಿವಿಧ ಬೇಡಿಕೆಗಳನ್ನು ಸರ್ಕಾರ ತಕ್ಷಣ ಈಡೇರಿಸಬೇಕು ಎಂದು ಅಂಗನವಾಡಿ ಕಾರ್ಯಕರ್ತೆಯರು ಆಗ್ರಹಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷೆ ಆಶಾಲತಾ ಎಂ.ವಿ., ಅಂಗನವಾಡಿ ಕೆಲಸದ ಜತೆಗೆ ಕಳೆದ 18 ವರ್ಷಗಳಿಂದ ಬಿಎಲ್‌ಒ ಕರ್ತವ್ಯವನ್ನು ನಿರ್ವಹಿಸಲು ಅಸಾಧ್ಯವಾಗಿದ್ದು, ನಮ್ಮನ್ನು ಕರ್ತವ್ಯದಿಂದ ಮುಕ್ತಗೊಳಿಸಿ ಇಲ್ಲವೇ ಸಿ ದರ್ಜೆ ನೌಕರರೆಂದು ಪರಿಗಣಿಸಿ ಎಂದರು.
ವಾರ್ಷಿಕವಾಗಿ ಬಿಎಲ್‌ಒ ಕೆಲಸಕ್ಕೆ 7000 ರೂ.ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಆದರೆ ಕೈಯಿಂದ ದುಡ್ಡು ಖರ್ಚು ಮಾಡಿ ಈ ಕೆಲಸ ನಿರ್ವಹಿಸುವ ಪರಿಸ್ಥಿತಿ ನಮ್ಮದಾಗಿದೆ ಎಂದವರು ಹೇಳಿದರು.
ಮುಖ್ಯ ಚುನಾವಣಾ ಇಲಾಖೆಯಿಂದ ಸಿ ದರ್ಜೆ ನೌಕರರನ್ನು ಬಿಎಲ್‌ಒ ಕರ್ತವ್ಯಕ್ಕೆ ನೇಮಿಸಬೇಕೆಂದು ಆದೇಶವಾಗಿದೆ. ಆದರೆ ಮಂಗಳೂರು ನಗರಕ್ಕೆ ಸಂಬಂಧಪಟ್ಟಂತೆ ವಿಧಾನಸಭಾ ಕ್ಷೇತ್ರದಿಂದಲೇ ಸಿ ದರ್ಜೆ ನೌಕರರ ಪಟ್ಟಿ ನಮ್ಮಿಂದಲೇ ಪಡೆದುಕೊಂಡಿದ್ದರೂ, ವಿಎ ಅವರು ಹೆಚ್ಚಿನ ಕಡೆಗಳಲ್ಲಿ ಸಿ ದರ್ಜೆ ನೌಕರ ಪಟ್ಟಿ ಕಡೆಗಣಿಸಿ ಒತ್ತಾಯ ಪೂರ್ವಕವಾಗಿ ಅಂಗನವಾಡಿ ಕಾರ್ಯಕರ್ತೆಯರಿಗೆ ಬಿಎಲ್‌ಒ ಕರ್ತವ್ಯದ ಆದೇಶ ನೀಡಿದ್ದಾರೆ. ಈ ಬಾರಿ ಅಂಗನವಾಡಿ ಕಾರ್ಯಕರ್ತೆಯರು ಬಿಎಲ್‌ಒ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಕೇಂದ್ರ ಸರ್ಕಾರದ ಯೋಜನೆಯಾದ ಪೋಷಣ್ ಮೂಲಕ ಲಾನುಭವಿಗಳಿಗೆ ಸವಲತ್ತು ಒದಗಿಸುವ ಕಾರ್ಯ ಹಲವು ವರ್ಷಗಳಿಂದ ಅಂಗನವಾಡಿ ಕಾರ್ಯಕರ್ತೆಯರು ನಿರ್ವಹಿಸುತ್ತಿದ್ದರೂ ಈವರೆಗೆ ಗೌರವಧನ ದೊರಕಿಲ್ಲ ಎಂದು ಅವರು ಹೇಳಿದರು ಇಲಾಖೆಯಿಂದ ನೀಡುವ ಮೊಟ್ಟೆಯ ಹಣವನ್ನು ಮುಂಗಡವಾಗಿ ನೀಡದೆ ಇರುವುದರಿಂದ ಲಾನುಭವಿಗಳಿಗೆ ಮೊಟ್ಟೆ ವಿತರಣೆ ಮಾಡಲು ಸಮಸ್ಯೆಯಾಗುತ್ತಿದೆ. ಇಲಾಖೆಯಿಂದ ಮೊಟ್ಟೆಯೊಂದಕ್ಕೆ 6 ರೂ.ನೀಡುತ್ತಿದ್ದು ಮೊಟ್ಟೆಯ ಬೆಲೆ 7 ರೂ.ಗಳಾಗಿದೆ. ಈ ಮೊತ್ತವನ್ನು ಕಾರ್ಯಕರ್ತೆಯರು ತಮ್ಮ ಕೈಯಿಂದ ಭರಿಸಿ ಲಾನುಭವಿಗಳಿಗೆ ಮೊಟ್ಟೆ ನೀಡಬೇಕಾದ ಪರಿಸ್ಥಿತಿ ಇದೆ. ಹಾಗಾಗಿ ಮುಂಗಡ ಹಣ ಹಾಕದೆ ಮೊಟ್ಟೆ ವಿತರಿಸದಿರಲು ನಿರ್ಧರಿಸಲಾಗಿದೆ ಎಂದು ಸಂಘದ ರಾಜ್ಯ ಕೋಶಾಕಾರಿ ವಿಶಾಲಾಕ್ಷಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕರಿಯರ ಸಂಘದ ಪದಾಕಾರಿಗಳಾದ ಸುಜಾತ ರೈಘಿ, ಸುಜಾತ ಶೆಟ್ಟಿ, ಭವಾನಿ, ಜಯಶ್ರೀ ಉಪಸ್ಥಿತರಿದ್ದರು.