ಪೊಲೀಸರ ಬಲೆಗೆ ಬಿದ್ದ ದೆಹಲಿಯ Lady Don ಜೋಯಾ ಖಾನ್​ ​; ₹1 ಕೋಟಿ ಮೌಲ್ಯದ ಹೆರಾಯಿನ್​​​ ವಶಕ್ಕೆ

Untitled design (1)
Published on

ನವದಹೆಲಿ: ಕುಖ್ಯಾತ ಡಾನ್ ಹಾಶಿಂ ಬಾಬಾ ಅವರ ಪತ್ನಿ ಮತ್ತು ಲೇಡಿ ಡಾನ್(Lady Don) ಜೋಯಾ ಖಾನ್​​ನನ್ನು ಮಾದಕವಸ್ತು ಪ್ರಕರಣದಲ್ಲಿ ವಿಶೇಷ ದಳ ಬಂಧಿಸಿದೆ. ಜೋಯಾ ಅವರಿಂದ ಸುಮಾರು 1 ಕೋಟಿ ರೂಪಾಯಿ ಮೌಲ್ಯದ 225 ಗ್ರಾಂ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ.

ಜೋಯಾ ಹಾಶಿಮ್ ಬಾಬಾ ಅವರ ಮೂರನೇ ಪತ್ನಿಯಾದ ಜೋಯಾ ಖಾನ್​​ ಅವರ ಗ್ಯಾಂಗ್ ಅನ್ನು ನಿರ್ವಹಿಸುತ್ತಿದ್ದರು. ವಿಶೇಷ ಘಟಕವು ಹಲವು ವರ್ಷಗಳಿಂದ ಅವರನ್ನು ಹುಡುಕುತ್ತಿತ್ತು. ಹಾಶಿಂ ಬಾಬಾ ವಿರುದ್ಧ ಕೊಲೆ, ದರೋಡೆ, ಸುಲಿಗೆ ಮತ್ತು ಶಸ್ತ್ರಾಸ್ತ್ರ ಕಾಯ್ದೆ ಸೇರಿದಂತೆ ಅನೇಕ ಪ್ರಕರಣಗಳು ದಾಖಲಾಗಿವೆ.

ಅಪರಿಚಿತ ವ್ಯಕ್ತಿಗೆ ಮಾದಕವಸ್ತುಗಳನ್ನು ತಲುಪಿಸುವ ಬಗ್ಗೆ ಸುಳಿವು ಸಿಕ್ಕಿತು, ಅದರ ನಂತರ ಜೋಯಾ ಖಾನ್ ಅವರನ್ನು ಬಂಧಿಸಲಾಯಿತು ಎಂದು ಪೊಲೀಸರ ತಿಳಿಸಿದ್ದಾರೆ. ತಿಹಾರ್ ಜೈಲಿನಲ್ಲಿರುವ ದೆಹಲಿಯ ಕುಖ್ಯಾತ ದರೋಡೆಕೋರ ಹಾಶಿಮ್ ಬಾಬಾನ ಎಲ್ಲಾ ಕಾನೂನುಬಾಹಿರ ಚಟುವಟಿಕೆಗಳನ್ನು ಜೋಯಾ ವರ್ಷಗಳ ಕಾಲ ಗ್ಯಾಂಗ್ ಅನ್ನು ನಡೆಸುತ್ತಿದ್ದಳು, ಆದರೆ ಅವಳು ಯಾವುದೇ ಪುರಾವೆಗಳು ಸಿಗಲಿಲ್ಲ ಎಂದು ಹೇಳಿದ್ದಾರೆ. ಪ್ರತಿ ಬಾರಿಯೂ ಪೊಲೀಸರಿಂದ ತಪ್ಪಿಸಿಕೊಳ್ಳುತ್ತಿದ್ದ ಜೋಯಾ ಈ ಬಾರಿ ಸಿಕ್ಕಿಬಿದಿದ್ದಾಳೆ.

ಜೋಯಾಳನ್ನು ಮದುವೆಯಾಗುವ ಮೊದಲು ಹಾಶಿಮ್ ಬಾಬಾ ಇನ್ನೂ ಎರಡು ವಿವಾಹಗಳನ್ನು ಮಾಡಿಕೊಂಡಿದ್ದಾರೆ. ಹಾಶಿಮ್ ಬಾಬಾಗೆ ಜೋಯಾ ಮೂರನೇ ಪತ್ನಿಯಾಗಿದ್ದಾರೆ. ಇದಕ್ಕೂ ಮೊದಲು ಜೋಯಾ 2014ರಲ್ಲಿ ವಿವಾಹವಾಗಿದ್ದಳು. ಪತಿಯಿಂದ ವಿಚ್ಛೇದನ ಪಡೆದ ನಂತರ ಹಾಶಿಮ್ ಬಾಬಾ ಅವರ ಸಂಪರ್ಕವಾಯಿತು.

ಜೋಯಾ ಜೈಲಿನಲ್ಲಿ ಹಾಶಿಮ್ ಬಾಬಾ ಅವರನ್ನು ನಿಯಮಿತವಾಗಿ ಭೇಟಿ ಮಾಡುತ್ತಿದ್ದಳು. ಈ ಮೀಟಿಂಗ್​​ ಗ್ಯಾಂಗ್‌ನ ಕಾರ್ಯಾಚರಣೆಗಳು, ಗುರಿಗಳು ಮತ್ತು ಸುಲಿಗೆಗೆ ಸಂಬಂಧಿಸಿದ್ದವು. ಬಾಬಾ ಜೋಯಾಗೆ ಸನ್ನೆಗಳ ಮೂಲಕ ಸಾಕಷ್ಟು ತರಬೇತಿ ನೀಡುತ್ತಿದ್ದ. ಜೋಯಾ ಜೈಲಿನ ಹೊರಗೆ ತನ್ನ ಪತಿ ಹಾಶಿಮ್ ಬಾಬಾ ಅವರ ಸಹಾಯಕರು ಮತ್ತು ಪರಾರಿಯಾಗಿದ್ದ ಅಪರಾಧಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಳು ಎಂದು ಮೂಲಗಳು ತಿಳಿಸಿವೆ.

ಈ ಹಿಂದೆ ಮಣಿಪುರದಲ್ಲಿ ಮೂವರನ್ನು ಬಂಧಿಸಿದ ನಂತರ ಅಂತಾರಾಜ್ಯ ಮಾದಕ ವಸ್ತು ಗ್ಯಾಂಗ್ ಅನ್ನು ಭೇದಿಸಲಾಗಿದೆ. ಅಲ್ಲದೆ ಅವರಿಂದ 10 ಕೆಜಿ ಹೆರಾಯಿನ್ ವಶಪಡಿಸಿಕೊಳ್ಳಲಾಗಿದ್ದು, ಇದರ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 50 ಕೋಟಿ ರೂಪಾಯಿಗೂ ಹೆಚ್ಚು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಣಿಪುರ ನಿವಾಸಿಗಳಾದ ಮಿತ್ರಲಾಲ್ ಖಟಿವಾಡಾ ಅಲಿಯಾಸ್ ಮನೋಜ್ (45), ಕೃಷ್ಣ ನ್ಯೋಪಾನಿ (21) ಮತ್ತು ಆಕಾಶ್ ಕರ್ಕಿ (25) ಅವರನ್ನು ಬಂಧಿಸುವ ಮೂಲಕ ದೆಹಲಿ ಪೊಲೀಸರ ವಿಶೇಷ ಘಟಕವು ಅಂತಾರಾಜ್ಯ ಮಾದಕವಸ್ತು ಗ್ಯಾಂಗ್ ಅನ್ನು ಭೇದಿಸಿರುವುದಾಗಿ ಹೇಳಿಕೊಂಡಿದೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net