

ನವದೆಹಲಿ: ಕರೊನಾ ಸೋಂಕಿತರ ಸಂಖ್ಯೆ ಸಾವಿರಕ್ಕಿಂತಲೂ ಹೆಚ್ಚಾಗಿದೆ. ಆದರೆ ಕ್ವಾರಂಟೈನ್ನಲ್ಲಿ ಇರುವವರ ಸಂಖ್ಯೆ ಲಕ್ಷವನ್ನೂ ಮೀರಿದೆ.
ಕರೊನಾ ಸೋಂಕಿತರ ಸಂಪರ್ಕಕ್ಕೆ ಹೋದವರು, ಲಾಕ್ಡೌನ್ಗೂ ಮೊದಲು ಫ್ಲೈಟ್, ರೈಲು, ಬಸ್ಗಳಲ್ಲಿ ಪ್ರಯಾಣ ಮಾಡಿದವರನ್ನು ಕಡ್ಡಾಯವಾಗಿ 14ದಿನಗಳ ಕ್ವಾರಂಟೈನ್ಗೆ ಒಳಪಡಿಸಲಾಗಿದೆ. ಸೋಂಕಿತರ ಸಂಖ್ಯೆ ಹೆಚ್ಚಿದಷ್ಟೂ ಈ ಕ್ವಾರಂಟೈನ್ಗೆ ಹೋಗುವವರ ಸಂಖ್ಯೆಯೂ ಅಧಿಕವಾಗುತ್ತಿದೆ.
ದೆಹಲಿ ಸೇರಿ ಅನೇಕ ಕಡೆಗಳಲ್ಲಿ ಕ್ವಾರಂಟೈನ್ಗೆ ಸ್ಥಳವೇ ಸಾಕಾಗುತ್ತಿಲ್ಲ. ಒಂದಷ್ಟು ಹೋಟೆಲ್ಗಳ ಮಾಲೀಕರು ಅನುಕೂಲ ಕಲ್ಪಿಸಿಕೊಟ್ಟಿದ್ದಾರೆ.
ಈಗ ದೆಹಲಿಯ ಜವಾಹಾರ್ಲಾಲ್ ನೆಹರೂ ಸ್ಟೇಡಿಯಂನ್ನು ಕ್ವಾರಂಟೈನ್ ವ್ಯವಸ್ಥೆಗೆ ಬಳಸಿಕೊಳ್ಳಲು ಅಲ್ಲಿನ ಸರ್ಕಾರ ನಿರ್ಧರಿಸಿದೆ. ಭಾರತೀಯ ಕ್ರೀಡಾ ಪ್ರಾಧಿಕಾರವು ಜವಾಹಾರ್ ಲಾಲ್ ನೆಹರೂ ಕ್ರೀಡಾಂಗಣವನ್ನು ಸರ್ಕಾರಕ್ಕೆ ಹಸ್ತಾಂತರ ಮಾಡಿದೆ. ಇಲ್ಲಿ ಕರೊನಾ ರೋಗಿಗಳನ್ನು ಪ್ರತ್ಯೇಕವಾಗಿಟ್ಟು ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡುವ ಬಗ್ಗೆಯೂ ಚಿಂತಿಸಲಾಗುತ್ತಿದೆ ಎನ್ನಲಾಗಿದೆ.
ಭಾರತದಲ್ಲಿ ಕರೊನಾ ಸೋಂಕಿತರ ಸಂಖ್ಯೆ 1250ಕ್ಕೆ ತಲುಪಿದ್ದು, 36 ಮಂದಿ ಮೃತಪಟ್ಟಿದ್ದಾರೆ. (ಏಜೆನ್ಸೀಸ್)