ಬೆಂಗಳೂರಿನ ಮೂವರು ಪೊಲೀಸರ ಮೇಲೆ ಎಫ್​ಐಆರ್ ದಾಖಲಿಸಿದ ದೆಹಲಿ ಪೊಲೀಸರು; ಏನಿದು ಪ್ರಕರಣ?

Police
Published on

ಬೆಂಗಳೂರು: ಉದ್ಯಮಿಯಿಂದ ಹಣ ವಸೂಲಿ ಮಾಡಿದ ಆರೋಪದಡಿ ಬೆಂಗಳೂರಿನ ಮೂವರು ಪೊಲೀಸರ ವಿರುದ್ಧ ದೆಹಲಿಯ ಸೀಮಾಪುರಿ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ.

ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಉದ್ಯಮಿ ಪಂಕಜ್ ಸಿಂಗ್ ಎಂಬುವರಿಗೆ ನೊಟೀಸ್ ಕೊಡಲು ಬೆಂಗಳೂರಿನ ಮೂವರು ಪೊಲೀಸರು ದೆಹಲಿಗೆ ತೆರಳಿದ್ದರು. ಈ ವೇಳೆ ಪಂಕಜ್ ಸಿಂಗ್​ನಿಂದ ಚೆಕ್ ಹಾಗೂ ನಗದು 25 ಲಕ್ಷ ರೂ. ಹಣ ವಸೂಲಿ‌ಮಾಡಿದ್ದಾರೆ ಎಂದು ಉದ್ಯಮಿ ಸೀಮಾಪುರಿ ಠಾಣೆಗೆ ದೂರು ನೀಡಿದ್ದ.

ಉದ್ಯಮಿಯಿಂದ ಹಣ ವಸೂಲಿ ಮಾಡಿರುವ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಪುರಂ ಪೊಲೀಸ್ ಠಾಣೆಯ ಮುತ್ತುರಾಜ್, ಸತೀಶ್ ಹಾಗೂ ಬಸವರಾಜ್ ಪಾಟೀಲ್ ಎಂಬುವರ ಮೇಲೆ ಎಫ್​ಐಆರ್ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net