Virendra Sachdeva: ಯಮುನೆಯಲ್ಲಿ ಸ್ನಾನ ಮಾಡಿ ಆಸ್ಪತ್ರೆ ಪಾಲಾದ ಬಿಜೆಪಿ ಮುಖ್ಯಸ್ಥ!

veerendra
Published on

ನವದೆಹಲಿ: ಎರಡು ದಿನಗಳ ಹಿಂದೆ ಯಮುನಾ ನದಿಯಲ್ಲಿ ಸ್ನಾನ ಮಾಡಿದ್ದ ಬಿಜೆಪಿ ಮುಖ್ಯಸ್ಥ ವೀರೇಂದ್ರ ಸಚ್‌ದೇವ(Virendra Sachdeva) ಶನಿವಾರ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಯಮುನಾ ನದಿ ನೀರು ದುರ್ವಾಸನೆ ಬೀರುತ್ತಿದ್ದು, ಕೇಜ್ರಿವಾಲ್ ಸರ್ಕಾರ ನೀರು ಶುದ್ಧೀಕರಣ ಮಾಡಿಸಲು ವಿಫಲವಾಗಿದೆ. ಈ ವಿಷಯದಲ್ಲಿ ಸರ್ಕಾರ ಭ್ರಷ್ಟಾಚಾರ ನಡೆಸಿದೆ ಎಂದು ಆರೋಪಿಸಿ ವೀರೇಂದ್ರ ಸಚ್‌ದೇವ ಕಲುಷಿತ ನೀರಿಗಿಳಿದು ಸ್ನಾನ ಮಾಡಿದ್ದರು.

ಯಮುನಾ ನದಿಯ ನೀರಿನಲ್ಲಿ ಸ್ನಾನ ಮಾಡಿದ ನಂತರ ವೀರೇಂದ್ರ ಸಚ್‌ದೇವ್ ಅವರಿಗೆ ಉಸಿರಾಟದ ತೊಂದರೆ ಮತ್ತು ಚರ್ಮದ ಮೇಲೆ ಗುಳ್ಳೆಗಳು ಕಾಣಿಸಿಕೊಂಡವು ಎಂದು ದೆಹಲಿ ಬಿಜೆಪಿ ಹೇಳಿಕೆಯಲ್ಲಿ ತಿಳಿಸಿದೆ.

ಇದರಿಂದ ಅಲರ್ಜಿಯಾಗಿ ಅವರ ಚರ್ಮದ ಮೇಲೆ ಗುಳ್ಳೆಗಳಾಗಿದ್ದವು. ಇದೇ ಕಾರಣದಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪಕ್ಷದ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಬಿಜೆಪಿ ಹೇಳಿದೆ.

ಅವರನ್ನು ಆರ್‌ಎಂಎಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯಕೀಯ ಪರೀಕ್ಷೆಯ ನಂತರ ವೈದ್ಯರು ಮೂರು ದಿನಗಳ ಕಾಲ ಔಷಧಿ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ ಎಂದು ಅದು ಹೇಳಿದೆ.

2025 ರ ವೇಳೆಗೆ ಯಮುನಾ ನೀರನ್ನು ಸ್ವಚ್ಛಗೊಳಿಸುವ ಭರವಸೆಯನ್ನು ಕೇಜ್ರಿವಾಲ್ ಸರ್ಕಾರ ನೀಡಿದ್ದು, ಅದನ್ನು ಈಡೇರಿಸಲಿಲ್ಲ. ಅದರ ಪರಿಣಾಮಗಳನ್ನು ಈಗ ಅನುಭವಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net