

ವಿಜಯವಾಣಿ ಸುದ್ದಿಜಾಲ ಉಪ್ಪಿನಂಗಡಿ
ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘಕ್ಕೆ ಬಿಜಾಪುರ ಜಿಲ್ಲೆಯ ವಿಜಯಪುರ ಸಹಕಾರಿ ಸಂಘದ ನಿಯೋಗ ಭೇಟಿ ನೀಡಿ ಅಧ್ಯಯನ ನಡೆಸಿದ್ದು, ಮೆಚ್ಚುಗೆ ವ್ಯಕ್ತಪಡಿಸಿದೆ.
ವಿಜಯಪುರ ಸಹಕಾರಿ ಸಂಘದ ಅಧ್ಯಕ್ಷ ಸಂಬಾಜಿ ಸಿದ್ದೋಬಾ ಮಿಸಾಲೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಡಿ ಬಿರಾದಾರ್ ನೇತೃತ್ವದ ನಿಯೋಗ ಅಧ್ಯಯನ ನಡೆಸಿದ್ದು, ಉಪ್ಪಿನಂಗಡಿ ಸಹಕಾರಿ ಸಂಘದ ಅಧ್ಯಕ್ಷ ಕೆ.ವಿ.ಪ್ರಸಾದ್, ಮುಖ್ಯಕಾರ್ಯನಿರ್ವಹಣಾಧಿಕಾರಿ ಶೋಭಾ, ಮಾಜಿ ಅಧ್ಯಕ್ಷ ಯಶವಂತ ಜಿ., ನಿರ್ದೇಶಕರಾದ ಸಚಿನ್ ಎಂ., ಶ್ಯಾಮಲಾ ಶೆಣೈ, ಜಗದೀಶ್ ರಾವ್ ಮಣಿಕ್ಕಳ, ರಾಮ ನಾಯ್ಕ ಮಾಹಿತಿ ನೀಡಿದರು.
ಉಪ್ಪಿನಂಗಡಿ ಸಹಕಾರಿ ಸಂಘದಲ್ಲಿರುವ ಸಮಗ್ರ ಬ್ಯಾಂಕಿಂಗ್ ವ್ಯವಸ್ಥೆ, ರಸಗೊಬ್ಬರ ಮಾರಾಟ ವ್ಯವಸ್ಥೆ, ಕೃಷಿ ಸಲಕರಣೆಗಳ ವ್ಯಾಪಾರ, ದಿನಸಿ ವಸ್ತುಗಳ ಮಾರಾಟ ಮಳಿಗೆ, ಪಡಿತರ ವಿತರಣೆ, ಬ್ಯಾಂಕಿಂಗ್ ಶಾಖಾ ಕಚೇರಿಗಳ ಕಾರ್ಯನಿರ್ವಹಣೆ ಕುರಿತು ವಿಜಯಪುರ ಸಹಕಾರಿ ಸಂಘದ ನಿಯೋಗ ಮೆಚ್ಚುಗೆ ವ್ಯಕ್ತಪಡಿಸಿತು.