More

    ಪ್ಯಾಂಥರ್ಸ್‌ ಎದುರು ಮುಗ್ಗರಿಸಿದ ಸ್ಟೀಲರ್ಸ್: ಅರ್ಜುನ್‌ ದೇಶ್ವಾಲ್‌ ಮಿಂಚು, ಜೈಪುರಕ್ಕೆ ಭರ್ಜರಿ ಜಯ

    ನೊಯ್ಡಾ: ಅರ್ಜುನ್‌ ದೇಶ್ವಾಲ್‌(14 ಅಂಕ) ಅವರ ಅದ್ಭುತ ರೈಡಿಂಗ್‌ನಿಂದ ಮಿಂಚಿದ ಜೈಪುರ ಪಿಂಕ್‌ ಪ್ಯಾಂಥರ್ಸ್‌ ಪ್ರೊ ಕಬಡ್ಡಿ ಲೀಗ್‌ 54ನೇ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್‌ ತಂಡವನ್ನು 9 ಅಂಕಗಳಿಂದ ಮಣಿಸಿತು. ನೊಯ್ಡಾ ಒಳಾಂಗಣ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಮೊದಲ ಪಂದ್ಯದಲ್ಲಿ ಪ್ಯಾಂಥರ್ಸ್‌ ತಂಡವು 45-34 ಅಂಕಗಳ ಅಂತರದಿಂದ ಸ್ಟೀಲರ್ಸ್‌ಗೆ ಆಘಾತ ನೀಡಿತು. ದೇಶ್ವಾಲ್‌ ಆಟಕ್ಕೆ ಸಾಥ್‌ ನೀಡಿದ ಡಿಫೆಂಡರ್‌ಗಳಾದ ರೇಜಾ ಹಾಗೂ ಅಂಕುಶ್‌ ಕ್ರಮವಾಗಿ 7 ಮತ್ತು 5 ಅಂಕಗಳ ಕೊಡುಗೆ ನೀಡಿದರು. ಸ್ಟೀಲರ್ಸ್‌ ಪರ ಚಂದ್ರನ್‌ ರಂಜೀತ್‌ 11 ಅಂಕ ಗಳಿಸಿ ತಂಡದ ಪೈಪೋಟಿಗೆ ಕಾರಣರಾದರು.

    ಒತ್ತಡ ತಗ್ಗಿಸುವ ವಿಶ್ವಾಸದಲ್ಲಿ ದ್ವಿತೀಯಾರ್ಧ ಆರಂಭಿಸಿದ ಹರಿಯಾಣ, ಟ್ಯಾಕಲ್‌ ವಿಭಾಗದಲ್ಲಿ ನಿಯಮಿತವಾಗಿ ಅಂಕ ಗಳಿಸುವ ಮೂಲಕ ಹಿನ್ನಡೆಯನ್ನು 21-23ಕ್ಕೆ ತಗ್ಗಿಸಿತು. ಈ ಹಂತದಲ್ಲಿ ಎಚ್ಚೆತ್ತುಕೊಂಡ ಜೈಪುರ ಆಟಗಾರರು ಸಂಘಟಿತ ಹೋರಾಟ ನೀಡಲು ಯತ್ನಿಸಿದರು. ಇದರ ಫಲವಾಗಿ ಮುನ್ನಡೆಯನ್ನು 26-23ಕ್ಕೆ ಹೆಚ್ಚಿಸಿಕೊಂಡರು. ಆದರೆ ನಂತರವೂ ಜೈಪುರ ಮೇಲುಗೈ ಸಾಧಿಸಿತು. ಆದರೆ 29ನೇ ನಿಮಿಷದಲ್ಲಿಜೈಪುರ ಪ್ಯಾಂಥರ್ಸ್‌ ತಂಡವನ್ನು ಆಲೌಟ್‌ ಮಾಡಿ ಮುಯ್ಯಿ ತೀರಿಸಿಕೊಂಡ ಹರಿಯಾಣ ಆಟಗಾರರು 28-29ರಲ್ಲಿ ಪ್ರತಿ ಹೋರಾಟ ಸಂಘಟಿಸುವಲ್ಲಿ ಸಫಲತೆ ಕಂಡರು.

    ಉಭಯ ತಂಡಗಳ ಅಂತರ 1ಕ್ಕೆ ಇಳಿದಾಗ ಮುನ್ನಡೆಗಾಗಿ ಉಭಯ ತಂಡಗಳು ಜಿದ್ದಾಜಿದ್ದಿನ ಹೋರಾಟ ನಡೆಸಿದವು. ಚಂದ್ರನ್‌ ರಂಜೀತ್‌ ಸಹ ವೈಯಕ್ತಿಕ ಅಂಕಗಳನ್ನು ಸೂಪರ್‌ 10 ಆಗಿ ಪರಿವರ್ತಿಸಿದರು. 30 ನಿಮಿಷಕ್ಕೆ ಕೇವಲ (30-29)1 ಅಂಕ ಮುನ್ನಡೆ ಸಾಧಿಸಿದ ಜೈಪುರ, ಬಳಿಕ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿತು. 35ನೇ ನಿಮಿಷದಲ್ಲಿ ಜೈದೀಪ್‌ ಮತ್ತು ವಿನಯ್‌ ಅವರನ್ನು ಔಟ್‌ ಮಾಡಿದ ಅರ್ಜುನ್‌, 2ನೇ ಬಾರಿ ಹರಿಯಾಣ ತಂಡವನ್ನು ಆಲೌಟ್‌ ಮಾಡಿ ಮುನ್ನಡೆಯನ್ನು 5 ಅಂಕಕ್ಕೆ ವಿಸ್ತರಿಸಿದರು. ಈ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡ ಜೈಪುರ ಗೆಲುವಿನ ಅಂತರವನ್ನು 9 ಅಂಕಗಳಿಗೆ ಹಿಗ್ಗಿಸಿ ವಿಜಯೋತ್ಸವ ಆಚರಿಸಿದರು. ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡವು ಪಂದ್ಯದ ಪ್ರಥಮಾರ್ಧಕ್ಕೆ 22 -16 ಅಂಕಗಳಿಂದ ಹರಿಯಾಣ ಸ್ಟೀಲರ್ಸ್‌ ವಿರುದ್ಧ ಮೇಲುಗೈ ಸಾಧಿಸಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts