ತೀವ್ರ ಕುತೂಹಲ ಮೂಡಿಸಿದ ಸಚಿವ ರಾಜನಾಥ್​ ಸಿಂಗ್​ ಕುರಿತ ರಕ್ಷಣಾ ಸಚಿವಾಲಯದ ಟ್ವೀಟ್​

Rajanath singh
Published on

ನವದೆಹಲಿ: ಭಾನುವಾರ ಬೆಳಗ್ಗೆ ಕೇಂದ್ರದ ರಕ್ಷಣಾ ಸಚಿವಾಲಯ ಮಾಡಿರುವ ಟ್ವೀಟ್ ತೀವ್ರ ಕುತೂಹಲ ಮೂಡಿಸಿದೆ.

ಇಂದು ಬೆಳಗ್ಗೆ 10 ಗಂಟೆಗೆ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಅವರು ಮಹತ್ವದ ಘೋಷಣೆ ಮಾಡಲಿದ್ದಾರೆ ಎಂದು ರಕ್ಷಣಾ ಇಲಾಖೆ ಟ್ವೀಟ್​ ಮಾಡಿದೆ.

ಯಾವ ವಿಚಾರ ಎಂಬುದರ ಬಗ್ಗೆ ಸುಳಿವು ನೀಡಿಲ್ಲ. ಆದರೆ ರಕ್ಷಣಾ ವಲಯಕ್ಕೆ ಸಂಬಂಧಿಸಿದಂತೆ ಏನಾದರೂ ಘೋಷಿಸಬಹುದು ಎನ್ನಲಾಗಿದೆ. ಆದರೆ, ಏನು ಹೇಳುತ್ತಾರೋ ಅದನ್ನು ತಿಳಿಯಲು 10 ಗಂಟೆಯವರೆಗೆ ಕಾಯಲೇಬೇಕಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net