ಪ್ರಿಯಾಂಕ, ದೀಪಿಕಾ ಯಾರೂ ಅಲ್ಲ…OTTಯಲ್ಲಿ ಹೆಚ್ಚು ಪೇಮೆಂಟ್​​ ಪಡೆಯುವ ನಟಿ ಈಕೆ ಅನ್ನೋದು ಶಾಕಿಂಗ್​..!

heroine
Published on

ಮನರಂಜನೆಯ ವೆಚ್ಚವೂ OTT ಬಂದ್ಮೇಲೆ ಕಡಿಮೆಯಾದಂತಿದೆ. ಜನ ಹೆಚ್ಚಾಗಿ, ಸಿನಿಮಾಗಳು, ವೆಬ್ ಸರಣಿಗಳನ್ನು OTT ಯಲ್ಲೇ ವೀಕ್ಷಿಸುತ್ತಾರೆ. ಕೊರೊನಾ ಬಂದಾಗಿನಿಂತಲೂ ಒಟಿಟಿ ಪ್ಲಾಟ್​​ಫಾರ್ಮ್​​ಗಳ ಬೇಡಿ ದುಪ್ಪಟಾಯ್ತು. OTT ಪ್ಲ್ಯಾಟ್​​ಫಾರ್ಮ್​ನಲ್ಲಿ ಬೇಡಿಕೆ ಹೆಚ್ಚಾಗಿದ್ದು ಮಾತ್ರವಲ್ಲ ಇದೀಗ ಬಹುತೇಕ ಜನರು ootಯಲ್ಲಿ ಬಂದ್ಮೇಲೆ ಸಿನಿಮಾ ನೋಡೋಣ ಅಂತ್ಹೇಳಿ ಸುಮ್ಮನಾಗ್ತಿದ್ದಾರೆ.

ಅಮೆಜಾನ್ ಪ್ರೈಮ್ ವಿಡಿಯೋ, ಡಿಸ್ನಿ+ ಹಾಟ್‌ಸ್ಟಾರ್, ನೆಟ್‌ಫ್ಲಿಕ್ಸ್, ಜಿ5, ಆಹಾ ಮುಂತಾದ OTT ಪ್ಲಾಟ್‌ಫಾರ್ಮ್‌ಗಳ ಮೂಲಕ ಅನೇಕ ಸೆಲೆಬ್ರಿಟಿಗಳು ಪ್ರೇಕ್ಷಕರನ್ನ ತಲುಪಿದ್ದಾರೆ.

ನಾಯಕಿಯರಲ್ಲಿ ಯಾರು ಹೆಚ್ಚು OTT ಸಂಭಾವನೆ ಪಡೆಯುತ್ತಿದ್ದಾರೆ ಗೊತ್ತಾ?
ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ, ಕರೀನಾ ಕಪೂರ್ ಅವರಂತಹ ಜನಪ್ರಿಯ ಸೆಲೆಬ್ರಿಟಿಗಳು ಈ ಪಟ್ಟಿಯಲ್ಲಿದ್ದು.. ತೆಲುಗು ಜನರಿಗೆ ಚಿರಪರಿಚಿತರಾಗಿರುವ ಸಮಂತಾ ಒಟಿಟಿ ಸಂಭಾವನೆಯಲ್ಲಿ ದೇಶದಲ್ಲೇ ಅಗ್ರ ಸ್ಥಾನದಲ್ಲಿದ್ದಾರೆ. ಸಮಂತಾ 'ದಿ ಫ್ಯಾಮಿಲಿ ಮ್ಯಾನ್ 2' ಸರಣಿಯೊಂದಿಗೆ OTT ಪಾದಾರ್ಪಣೆ ಮಾಡಿದರು. ಅವರು ಈ ವೇದಿಕೆಗಳಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಾಯಕಿಯಾಗಿದ್ದಾರೆ.
ಸಮಂತಾ ಪ್ರತಿ ಪ್ರದರ್ಶನಕ್ಕೆ ರೂ.10 ಕೋಟಿ ಸಂಗ್ರಹಿಸುತ್ತಿದ್ದಾರೆ. ದಿ ಫ್ಯಾಮಿಲಿ ಮ್ಯಾನ್ 2' ಚಿತ್ರಕ್ಕಾಗಿ ಸ್ಯಾಮ್ ರೂ. 4 ಕೋಟಿ ತೆಗೆದುಕೊಂಡಿದ್ದಾರೆ. ಶ್ರೀಲಂಕಾದ ತಮಿಳು ಲಿಬರೇಶನ್ ಫೈಟರ್ ಆಗಿ ಅದ್ಭುತ ಪಾತ್ರವನ್ನು ನಿರ್ವಹಿಸಿದ್ದಾರೆ. ರಾಜಿ ಪಾತ್ರದಲ್ಲಿ ಅವರ ಅಭಿನಯವು ಪ್ರೇಕ್ಷಕರು ಮತ್ತು ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಯಿತು.

ಸಮಂತಾ, 'ಸಿಟಾಡೆಲ್ ಇಂಡಿಯಾ' ಸರಣಿಯಲ್ಲಿ ಮತ್ತೆ ನಟಿಸಲು ಸಿದ್ಧರಾಗಿದ್ದಾರೆ. ಸಮಂತಾ ಅವರ ಸಂಭಾವನೆ OTT ಯಲ್ಲಿ ಗಮನಾರ್ಹವಾಗಿ ಹೆಚ್ಚಾಗಿದೆ.

ಟಾಪ್ ಹೀರೋಯಿನ್ ಎಂದು ಗುರುತಿಸಿಕೊಂಡಿರುವ ಸಮಂತಾ ಈಗ ಕೆಲ ದಿನಗಳ ಕಾಲ ನಟನೆಗೆ ಬ್ರೇಕ್ ಹಾಕಿದ್ದಾರೆ. ಇತ್ತೀಚಿನ ದಿನಗಳಲ್ಲಿ ಆಕೆಗೆ ದೊಡ್ಡ ಹಿಟ್ ಸಿನಿಮಾಗಳು ಬಂದಿರಲಿಲ್ಲ. ಶಕುಂತಲಂ ಸೋತರೆ, ವಿಜಯ್ ದೇವರಕೊಂಡ ಜೊತೆಗಿನ ಖುಷಿಯಲ್ಲಿ ನಟಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net