

Rashi Bhavishya: ಬೆಳಕಿನ ಹಬ್ಬ ದೀಪಾವಳಿಯು ಪ್ರತಿಯೊಬ್ಬರ ಜೀವನದಲ್ಲೂ ನವ ಉಲ್ಲಾಸ, ಹೊಸ ಭರವಸೆ ಹಾಗೂ ಸುಖ-ಸಮೃದ್ಧಿಯನ್ನು ಹೊತ್ತು ತರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ದೀಪಾವಳಿಯ ಶುಭ ವೇಳೆಯಲ್ಲಿ ಗ್ರಹ-ನಕ್ಷತ್ರಗಳ ಚಲನೆಯಲ್ಲಿ ಮಹತ್ವದ ಬದಲಾವಣೆಗಳಾಗುವುದರಿಂದ ಈ ಹಬ್ಬದಿಂದ ಮುಂದಿನ ದೀಪಾವಳಿಯವರೆಗಿನ ಒಂದು ವರ್ಷದ ಅವಧಿಯು ದ್ವಾದಶ ರಾಶಿಗಳ ಮೇಲೆ ಗಣನೀಯ ಪ್ರಭಾವ ಬೀರುತ್ತದೆ. ಉದ್ಯೋಗ, ವ್ಯವಹಾರ, ಆರ್ಥಿಕ ಸ್ಥಿತಿ, ಆರೋಗ್ಯ ಹಾಗೂ ಕುಟುಂಬ ಜೀವನದಲ್ಲಿ ಈ ವರ್ಷ ನಿಮಗೆ ಯಶಸ್ಸು ಕಾದಿದೆಯೇ ಅಥವಾ ವಹಿಸಬೇಕಾದ ಮುನ್ನೆಚ್ಚರಿಕೆಗಳೇನು? ಈ ದೀಪಾವಳಿಯಿಂದ ಮುಂದಿನ ದೀಪಾವಳಿಯವರೆಗಿನ ನಿಮ್ಮ ಸಂಪೂರ್ಣ ವಾರ್ಷಿಕ ರಾಶಿ ಭವಿಷ್ಯದ ವಿವರವಾದ ನೋಟ ಇಲ್ಲಿದೆ.
ಈ ದೀಪಾವಳಿಯಿಂದ ಮುಂದಿನ ವರ್ಷದ ದೀಪಾವಳಿಯವರೆಗೆ ಮೇಷ ರಾಶಿಗೆ ಮಹಾ ಪಲ್ಲಟಗಳ ವರ್ಷ. ಈ ಅವಧಿಯಲ್ಲಿ ಮೂರು ಪ್ರಮುಖ ಗ್ರಹಗಳು ಸ್ಥಾನ ಬದಲಾಯಿಸುತ್ತವೆ ಮತ್ತು ಎರಡು ಗ್ರಹಗಳು ವಕ್ರಿಯಾಗುತ್ತವೆ. ಗುರು ಪ್ರಸ್ತುತ ಕರ್ಕಾಟಕ ರಾಶಿಯಲ್ಲಿ ಉಚ್ಚ ಸ್ಥಿತಿಯಲ್ಲಿ ಚತುರ್ಥ ಭಾವದಲ್ಲಿ ಸ್ಥಿತನಾಗಿ ನಿಮಗೆ ಗೃಹ ನಿರ್ಮಾಣ ಯೋಗ, ವಾಹನ ಖರೀದಿ, ಮಾತೃ ಸೌಖ್ಯ, ವಿದ್ಯೆಯಲ್ಲಿ ಯಶಸ್ಸು, ಕೃಷಿ ಭೂಮಿ ಲಾಭ, ಮನಸ್ಸಿಗೆ ನೆಮ್ಮದಿ, ಕುಟುಂಬದಲ್ಲಿ ಶುಭ ಕಾರ್ಯಗಳು, ಗೃಹ ಪ್ರವೇಶ, ನೂತನ ವಾಹನ ಖರೀದಿ ಸಾಧ್ಯತೆಗಳಿವೆ. ಅಕ್ಟೋಬರ್ ತಿಂಗಳಿನಿಂದ ಗುರು ಸಿಂಹರಾಶಿಗೆ ಪ್ರವೇಶ ಮಾಡುತ್ತಾನೆ. ಮೇಷ ರಾಶಿಯವರಿಗೆ ಪಂಚಮ ಸ್ಥಾನ, ಪೂರ್ವ ಪುಣ್ಯ ಸ್ಥಾನ, ಕುಲದೇವತಾ ಅನುಗ್ರಹಿಸುವ ಸ್ಥಾನ, ಸಂತಾನ ಭಾಗ್ಯ, ಪ್ರೀತಿ, ವಿವಾಹಯೋಗ, ಸಿನೆಮಾ-ಸಂಗೀತ ಕ್ಷೇತ್ರದಲ್ಲಿರುವವರಿಗೆ ಹಠಾತ್ ಲಾಭ, ವಿದ್ಯಾರ್ಥಿಗಳಿಗೆ ಉನ್ನತ ವಿದ್ಯೆ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಜಯ, ಬುದ್ಧಿ ಶಕ್ತಿ ಹೆಚ್ಚಳ, ಹೊಸ ಆಲೋಚನೆಗಳು ಹೊಳೆಯುತ್ತವೆ. ಡಿಸೆಂಬರ್ 13ರಿಂದ ಗುರು ವಕ್ರಿಯಾಗಿ ಚಲಿಸುವ ಕಾಲ. ಹಳೆಯ ಪ್ರೀತಿ ಮರಳಿ ಪಡೆಯುವಿರಿ. ಹಳೆಯ ಹೂಡಿಕೆಗಳ ಸಮಸ್ಯೆಗಳು ಕಾಡುತ್ತವೆ. ಮಕ್ಕಳ ಆರೋಗ್ಯದಲ್ಲಿ ಎಚ್ಚರ ಅಗತ್ಯ. ಹೊಸ ನಿರ್ಧಾರಗಳು ಬೇಡ. ಹಳೆಯ ಯೋಜನೆಗಳನ್ನು ಪೂರ್ಣಗೊಳಿಸಿ. ಗುರುಗಳ ಮಾರ್ಗದರ್ಶನ ಪಡೆದು ಮುಂದುವರಿಯಿರಿ. ಪ್ರಸ್ತುತ ನೀವು ಸಾಡೇ ಸಾತಿಯಲ್ಲಿ ಪ್ರಯಾಣಿಸುತ್ತಿರುವಿರಿ, ಶನೇಶ್ಚರನು ನಿಮ್ಮ ರಾಶಿಗೆ ವ್ಯಯಭಾವದಲ್ಲಿ ಸಂಚರಿಸುತ್ತಿದ್ದಾನೆ. ಖರ್ಚು ಹೆಚ್ಚು, ನಿದ್ರಾಭಂಗ, ಕನಸಿನಲ್ಲಿ ಭಯ, ವಿದೇಶಯೋಗ, ಆಸ್ಪತ್ರೆ-ಆಶ್ರಮ ದರ್ಶನ, ಯಾತ್ರೆ ಯೋಗಗಳು ಶುಭ, ವಿದೇಶದಲ್ಲಿ ಕೆಲಸ ಸಿಗುತ್ತದೆ, ಆದರೆ ವೀಸಾ ವಿಳಂಬವಾಗುವ ಸಾಧ್ಯತೆಯಿದೆ. ಹಳೆಯ ಸಾಲ ವಸೂಲಿ, ಹಳೆಯ ಬಿಲ್, ಕೋರ್ಟ್ನಲ್ಲಿರುವ ಕೇಸುಗಳು ವಾಪಸ್ಸು ಬರುತ್ತವೆ. ಸಂಬಳ- ಆದಾಯದಲ್ಲಿ ಹೆಚ್ಚಳ. ಆದರೆ ಕೆಲಸದಲ್ಲಿ ಒತ್ತಡವಿರುತ್ತದೆ. ತಾಳ್ಮೆಯಿಂದ ಕಾರ್ಯನಿರ್ವಹಿಸಿ, ಹೆಚ್ಚು ದಾನ-ಧರ್ಮದ ಕಡೆ ಗಮನ ನೀಡಿ. ನಿಯಮ ಮೀರಬೇಡಿ, ಕಾನೂನು ಪಾಲಿಸಿ. ರಾಹು ಡಿಸೆಂಬರ್ 5ರಂದು ಕುಂಭದಿಂದ ಮಕರಕ್ಕೆ ನಿಮ್ಮ ಕರ್ಮಸ್ಥಾನ ಪ್ರವೇಶ ಮಾಡುತ್ತಾನೆ. ವೃತ್ತಿಯಲ್ಲಿ ದೊಡ್ಡ ಹುದ್ದೆ, ಬಡ್ತಿ, ಸರ್ಕಾರಿ ಕೆಲಸ, ರಾಜಕೀಯ ಲಾಭ, ವಿದೇಶಿ ಕಂಪನಿಗಳ ಸಂಪರ್ಕ-ನೆರವು, ಕೆಲಸದ ಒತ್ತಡ ವಿಪರೀತ, ಶತ್ರುಗಳು ಹೆಚ್ಚಾಗುವರು. ನಿಯಮ ಮತ್ತು ಕಾನೂನು ಮೀರಬೇಡಿ. ಇದೇ ಸಮಯದಲ್ಲಿ ಕೇತು ಚತುರ್ಥಭಾವದಲ್ಲಿ ಪ್ರಯಾಣ, ಕರ್ಕಾಟಕ ರಾಶಿಯಲ್ಲಿ ಪ್ರವೇಶ. ಗೃಹ ಬದಲಾವಣೆ. ತಾಯಿ ಆರೋಗ್ಯದಲ್ಲಿ ಎಚ್ಚರ ವಹಿಸಿ. ಮನಸ್ಸಿನಲ್ಲಿ ವೈರಾಗ್ಯ ಉಂಟಾಗುವುದು. ಆಧ್ಯಾತ್ಮದಲ್ಲಿ ಆಸಕ್ತಿ ಹೆಚ್ಚು. ಧ್ಯಾನದಿಂದ ಶಾಂತಿ ಸಿಗುತ್ತದೆ. ಹಳೆಯ ಮನೆ ರಿಪೇರಿ ಮಾಡುವ ಸಮಯ. ಮನೆಯಿಂದ ದೂರ ಪ್ರಯಾಣ ಬೆಳೆಸಿ ದುಡಿದು, ದುಡಿದಿದ್ದನ್ನು ಖರ್ಚು ಮಾಡುವ ಸಮಯ.
ಪರಿಹಾರ: ಶನಿವಾರ ಎಳ್ಳೆಣ್ಣೆ ದೀಪ ಹಚ್ಚಿ, ಹನುಮಾನ್ ಚಾಲೀಸಾ ಪಠಿಸಿ. ಶ್ರೀ ಶಂಕರಾಚಾರ್ಯರು ರಚಿಸಿದ ಭೈರವಾಷ್ಟಕ ನಿತ್ಯ ಪಠಿಸಿದರೆ ಕಷ್ಟಗಳು ದೂರಾಗುವುದು.
ಅದೃಷ್ಟ ಬಣ್ಣ: ಕೆಂಪು,
ಸಂಖ್ಯೆ: 9
ದಿನ: ಮಂಗಳವಾರ
ರತ್ನ: ಹವಳ.
ವೃಷಭ ರಾಶಿಯವರಿಗೆ ಲಾಭ-ಭಾಗ್ಯದ ವರ್ಷ. ಗುರು ಅಕ್ಟೋಬರ್ 31ರವರೆಗೆ ತೃತೀಯಾ ಕರ್ಕಾಟಕ ರಾಶಿಯಲ್ಲಿ ಉಚ್ಚನಾಗಿದ್ದು, ಸಹೋದರರಿಂದ ಸಹಾಯ, ಸಣ್ಣ ಪ್ರಯಾಣ, ಬರವಣಿಗೆ, ಸಂಗೀತ, ಧೈರ್ಯ ಸಾಹಸಗಳು ಹೆಚ್ಚಳವಾಗುತ್ತವೆ. ನೂತನ ವಾಹನ ಖರೀದಿ, ಗೃಹ ಆರಂಭ, ಮಕ್ಕಳಿಂದ ಸಂತೋಷ. ಅಕ್ಟೋಬರ್ 31ರ ನಂತರ ಗುರು ಅತಿಚಾರ ಚಲನೆಯಿಂದ ಸಿಂಹ ಪ್ರವೇಶ. ಚತುರ್ಥದಲ್ಲಿ ಸಂಚಾರ ಮಾಡುತ್ತಾನೆ. ಮನೆ, ವಾಹನ, ಕೃಷಿ ಭೂಮಿ, ಮಾತೃ ಸೌಖ್ಯ, ಗೃಹ ಪ್ರವೇಶ, ವಾಹನ ಪೂಜೆ, ಮನಸ್ಸಿಗೆ ನೆಮ್ಮದಿಯೋಗ ಬರುತ್ತದೆ. ಡಿಸೆಂಬರ್- ಜನವರಿಯಲ್ಲಿ ಗುರು ವಕ್ರತ್ವ ಪಡೆದು ಗೃಹ ನಿರ್ವಣದಲ್ಲಿ ವಿಳಂಬ, ಹಳೆಯ ಆಸ್ತಿ ವಿವಾದಗಳು ಮರುಕಳಿಸುವಿಕೆ, ಹೊಸ ನಿರ್ಧಾರಗಳನ್ನು ಕೈಬಿಡಿ. ಆದರೆ ಲಾಭ ಸ್ಥಾನ ಮೀನ ರಾಶಿಯಲ್ಲಿ ಶನೇಶ್ಚರನು ಸ್ಥಿತನಾಗಿ ಅತ್ಯಂತ ಶುಭ. ನಿಮಗೆ ಯೋಗ ಕಾರಕನಾಗಿರುತ್ತಾನೆ. ಧನಲಾಭ, ಹಿರಿಯ ಸಹೋದರರಿಂದ ಸಹಾಯ, ನಿಮ್ಮ ಯೋಜನೆಗಳು ಕೈಗೂಡುವ ಉತ್ತಮ ಸಮಯ. ಕಬ್ಬಿಣ, ಎಣ್ಣೆ, ಕಪ್ಪು ವಸ್ತುಗಳ ವ್ಯಾಪಾರದಿಂದ ಲಾಭ. ಜುಲೈ ತಿಂಗಳಿನಿಂದ ಶನಿ ವಕ್ರತ್ವ ಪಡೆದು, ಹಣ ವಿಳಂಬ, ಹಳೆಯ ಸಾಲ ವಸೂಲಿ. ರಾಹು ದಶಮದ ಕುಂಭದಲ್ಲಿ ಸಂಚಾರ. ತಾಂತ್ರಿಕ ಹುದ್ದೆಯಲ್ಲಿ ಲಾಭ, ವಿದೇಶಿ ಕಂಪನಿಗಳ ಸಂಪರ್ಕದಿಂದ ಉದ್ಯೋಗ ಲಾಭ, ಹೂಡಿಕೆಯಲ್ಲಿ ಗಳಿಕೆ, ಆದರೆ ನವಮ- ಮಕರದಲ್ಲಿ ರಾಹುವಿನ ಸಂಚಾರ. ಭಾಗ್ಯೋದಯ, ತಂದೆಯಿಂದ ಸಹಾಯ, ವಿದೇಶ ಯಾತ್ರೆ. ವಿದೇಶಿ ವಿದ್ಯೆ, ಗುರುಗಳ ಕೃಪೆ, ಧಾರ್ವಿುಕ ಯಾತ್ರೆ ನಡೆಸುವಿರಿ. ಕೇತು ಚತುರ್ಥದಿಂದ ತೃತೀಯಾ ಸಂಚಾರದಲ್ಲಿ ಧೈರ್ಯ ಕಡಿಮೆ, ಸಹೋದರರಲ್ಲಿ ಭಿನ್ನಾಭಿಪ್ರಾಯ, ಆದರೆ ಆಧ್ಯಾತ್ಮದಲ್ಲಿ ಆಸಕ್ತಿ ಹೆಚ್ಚಾಗುವುದು, ಧ್ಯಾನದಿಂದ ಶಾಂತಿ, ಏಕಾಂತವಾಸದಲ್ಲಿ ಆಸಕ್ತಿ. ಒಟ್ಟಾರೆ ಲಾಭದ ವರ್ಷ. ಮಾತಿನಲ್ಲಿ ಎಚ್ಚರ. ಕುಟುಂಬದಲ್ಲಿ ಶುಭಕಾರ್ಯ. ಹಣಕಾಸು ಉತ್ತಮ.
ಪರಿಹಾರ: ವಿಷ್ಣು ಸಹಸ್ರನಾಮ, ಶುಕ್ರವಾರ ಲಕ್ಷ್ಮಿ ಪೂಜೆ, ಬಿಳಿ ವಸ್ತ್ರದಾನ, ಅನ್ನ ದಾನ.
ಅದೃಷ್ಟ ಸಂಖ್ಯೆ: 6
ದಿನ: ಶುಕ್ರವಾರ
ರತ್ನ: ವಜ್ರ
ದೇವರು: ಲಕ್ಷ್ಮಿ.
ಮಿಥುನ ರಾಶಿಗೆ ಹಣ-ಧೈರ್ಯದ ವರ್ಷ. ಗುರು ದ್ವಿತೀಯದಲ್ಲಿ ಜೂನ್ನಿಂದ ಅಕ್ಟೋಬರ್ವರೆಗೆ ಕರ್ಕಾಟಕ ರಾಶಿಯಲ್ಲಿ ಉಚ್ಚ. ಹಣಕಾಸು ಬಲ, ಕುಟುಂಬದಲ್ಲಿ ಶುಭ ಕಾರ್ಯ. ಮಾತಿನಿಂದ ಲಾಭ. ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಳ. ಚಿನ್ನ ಕೊಳ್ಳುವ ಯೋಗ. ವಾಕ್ಸಿದ್ಧಿ. ವಿವಾಹಯೋಗ. ಅಕ್ಟೋಬರ್ ನಂತರ ಗುರು ತೃತೀಯಾ- ಸಿಂಹರಾಶಿಯಲ್ಲಿ ಅತಿಚಾರ- ಧೈರ್ಯ, ಬರವಣಿಗೆ, ಸಂಗೀತ ಕಛೇರಿ, ಸಹೋದರರಿಂದ ನೆರವು, ಸಮೀಪ ಪ್ರಯಾಣದಿಂದ ಲಾಭ, ಬರಹಗಾರರಿಗೆ ಶುಭ, ಪುಸ್ತಕ ಪ್ರಕಟಣೆ, ಜಾಲತಾಣಗಳಿಂದ ಕೀರ್ತಿ ಮತ್ತು ಲಾಭ. ಡಿಸೆಂಬರ್ 13ರಿಂದ ಜನವರಿ 25ರವರೆಗೆ ಗುರು ವಕ್ರಿ- ಹಳೆಯ ಒಪ್ಪಂದ ವಾಪಸ್, ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ. ಶನೇಶ್ಚರನು ದಶಮದಲ್ಲಿ ಅಂದರೆ ಮೀನ ರಾಶಿಯಲ್ಲಿ ಅದು ನಿಮ್ಮ ವೃತ್ತಿ ಸ್ಥಾನ, 30 ವರ್ಷಕ್ಕೊಮ್ಮೆ ಬರುವ ಸ್ಥಾನ, ನಿಮ್ಮ ಜೀವನದಲ್ಲಿ ನೀವು ಮಾಡಿದ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳ (ಕರ್ಮಗಳ) ಆಧ್ಯಾತ್ಮಿಕ ಪರಾಮರ್ಶೆ ಅಥವಾ ಲೆಕ್ಕಾಚಾರಗಳ ಸಂಪೂರ್ಣ ಮೌಲ್ಯಮಾಪನ ಮಾಡುವ ಸಮಯ. ಶನೇಶ್ಚರನು ಲೆಕ್ಕ ಕೇಳುತ್ತಾನೆ. ಜುಲೈನಿಂದ ಡಿಸೆಂಬರ್ವರೆಗೆ ಶನಿ ವಕ್ರಿ. ಹಳೆಯ ನಿಮ್ಮ ಉನ್ನತ ಅಧಿಕಾರಿ ವಾಪಸ್ಸು, ಕೆಲಸ ಬದಲಾವಣೆ ವಿಳಂಬ, ಬಡ್ತಿಯಲ್ಲಿ ವಿಳಂಬ, ಆದರೆ ಕೆಲಸ ಹೋಗುವುದಿಲ್ಲ. ಶನಿ ಹತ್ತರಲ್ಲಿ ಇದ್ದರೆ ಕೆಲಸ ಭದ್ರ. ರಾಹು ಡಿಸೆಂಬರ್ ನಂತರ ಅಷ್ಟಮದಲ್ಲಿ ಮಕರ ಸಂಚಾರ, ಗುಪ್ತ ಹಣ, ಇನ್ಸುರೆನ್ಸ್, ಆಸ್ತಿ ವಿವಾದದಿಂದ ಧನಲಾಭ. ಅಪಘಾತದಿಂದ ಎಚ್ಚರವಿರಬೇಕು. ಶಸ್ತ್ರಚಿಕಿತ್ಸೆ ಭಯ. ವಾಹನದಲ್ಲಿ ಎಚ್ಚರ. ಆರೋಗ್ಯದಲ್ಲಿ ಕಾಳಜಿ ವಹಿಸಬೇಕು. ಎಣ್ಣೆಯಿಂದ, ಬೆಂಕಿಯಿಂದ ದೂರವಿರಬೇಕು. ಕೇತು ದ್ವಿತೀಯದಲ್ಲಿ ಸಂಚಾರ, ಮಾತಿನಲ್ಲಿ ಕಹಿ, ಕುಟುಂಬದಲ್ಲಿ ವಿವಾದ, ಹಣಕಾಸು ವಿವಾದ, ಕಣ್ಣು ನೋವು, ಒಟ್ಟಾರೆ ಧನ ಲಾಭ, ಆದರೆ ಉಳಿಯುವುದಿಲ್ಲ, ಕೆಲಸದಲ್ಲಿ ಪರೀಕ್ಷೆ, ಮಾತಿನಲ್ಲಿ ತಾಳ್ಮೆ ಅಗತ್ಯ.
ಪರಿಹಾರ: ಪ್ರತಿ ದಿನ ವಿಷ್ಣು ಸಹಸ್ರನಾಮ, ಬುಧವಾರ ಗಣಪತಿ ಪೂಜೆ, ಹಸಿರು ವಸ್ತ್ರದಾನ, ಹೆಸರುಕಾಳು ದಾನ.
ಅದೃಷ್ಟ ಬಣ್ಣ: ಹಸಿರು
ಸಂಖ್ಯೆ: 5
ದಿನ: ಬುಧವಾರ
ರತ್ನ: ಪಚ್ಚೆ
ಸಿಂಹ ರಾಶಿಯವರಿಗೆ 2026ರ ದೀಪಾವಳಿಯಿಂದ 2027ರ ದೀಪಾವಳಿವರೆಗಿನ ಅವಧಿಯು ವ್ಯಯದಿಂದ ರಾಜಯೋಗಕ್ಕೆ ದಾರಿ ತೋರಿಸುವ ವರ್ಷ. ಗುರು ಹನ್ನೆರಡನೇ ಮನೆಯಲ್ಲಿ ಅ. 31ರವರೆಗೆ ಉಚ್ಚನಾಗಿ ಸಂಚರಿಸುವ ಕಾಲ. ವಿದೇಶಯೋಗ ಪ್ರಬಲ, ವಿದೇಶದಲ್ಲಿ ಕೆಲಸ, ವಿದೇಶಿ ಕಂಪನಿ, ಆಸ್ಪತ್ರೆ, ಆಶ್ರಮದಲ್ಲಿ ಸೇವೆ. ಆಧ್ಯಾತ್ಮದಲ್ಲಿ ಉನ್ನತಿ, ಧ್ಯಾನ, ಯಾತ್ರೆ ಯೋಗ. ಆದರೆ ಖರ್ಚು ವಿಪರೀತ. ಆಸ್ಪತ್ರೆ ಖರ್ಚು, ನಿದ್ರಾಭಂಗ, ಕನಸಿನಲ್ಲಿ ಭಯ. ಅಕ್ಟೋಬರ್ ನಂತರ ನಿಮ್ಮ ರಾಶಿಗೆ ಗುರು ಅತಿಚಾರ ಪ್ರವೇಶ ಮಾಡುತ್ತಾನೆ. 12 ವರ್ಷದ ನಂತರ ನಿಮ್ಮ ರಾಶಿಗೆ ಗುರು, ರಾಜಯೋಗ, ಪ್ರತಿಷ್ಠೆ, ವಿವಾಹ, ಮಕ್ಕಳು, ಹೊಸ ಕೆಲಸ, ಕೆಲಸದಲ್ಲಿ ಬಡ್ತಿ, ಪ್ರಶಸ್ತಿ ಎಲ್ಲವೂ ನವೆಂಬರ್ ನಂತರ ಲಭ್ಯ. ಡಿಸೆಂಬರ್- ಜನವರಿ ಗುರು ಸಿಂಹ ರಾಶಿಯಲ್ಲಿ ವಕ್ರಿ. ಹಳೆಯ ನಿರ್ಧಾರಗಳು ವಾಪಸ್, ಆರೋಗ್ಯದಲ್ಲಿ ತೂಕ ಹೆಚ್ಚಳ, ಅಹಂಕಾರ ಬೇಡ, ತಾಳ್ಮೆ ಅಗತ್ಯ. ಹಣಕಾಸಿನ ವಿಚಾರದಲ್ಲಿ ಎಚ್ಚರ ವಹಿಸಿ. ವೆಚ್ಚ ಅಧಿಕವಾಗುವ ಸಮಯ, ಆರೋಗ್ಯದ ಕಡೆ ಹೆಚ್ಚು ಗಮನವಿರಬೇಕು. ಆಸ್ತಿ ವಿಚಾರದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ. ಕೆಲಸ- ಕಾರ್ಯಗಳಿಗಾಗಿ ಅಲೆದಾಡುವ ಸಮಯ. ನಿಮ್ಮ ಸ್ವಂತದವರಿಂದಲೇ ನಿಮ್ಮ ಮೇಲೆ ಅಪವಾದ - ದೂರವಾಗುವ ಸಂಭವ. ಸರ್ಕಾರದಿಂದ ತೊಂದರೆ, ಇತ್ಯಾದಿ ಫಲಗಳನ್ನು ಅನುಭವಿಸುವಿರಿ. ಶನೇಶ್ಚರನು ಕಂಟಕ ಶನಿಯಾಗಿ ಅಷ್ಟಮದಲ್ಲಿ ಅಂದರೆ ಮೀನರಾಶಿಯಲ್ಲಿ ಸಂಚಾರ. ಸಾಲ, ಅಪಘಾತ, ಶಸ್ತ್ರಚಿಕಿತ್ಸೆ, ಮಾನಸಿಕ ಒತ್ತಡ, ಡಿಸೆಂಬರ್ವರೆಗೆ ಶನಿ ವಕ್ರಿ. ಹಳೆಯ ರೋಗ ವಾಪಸ್, ಭಯ-ಭೀತಿ. ಹಳೆಯ ಸಾಲಗಾರರು ನಿಮ್ಮ ಮುಂದೆ ಪ್ರತ್ಯಕ್ಷ. ಗೋವುಗಳ ಬಗ್ಗೆ ಎಚ್ಚರವಹಿಸಿ. ಕತ್ತು ಮತ್ತು ಹೊಟ್ಟೆಭಾಗದ ಬಗ್ಗೆ ಹೆಚ್ಚು ಗಮನ ಹರಿಸಿ, ಖರ್ಚು-ವೆಚ್ಚದಲ್ಲಿ ಶಿಸ್ತು ಪಾಲನೆ ಅಗತ್ಯ. ತೊಂದರೆಗಳಿಂದ ಹೊರಬರುವ ಸಾಧ್ಯತೆ ಕಡಿಮೆ. ನೂತನ ಕೆಲಸ ಕಾರ್ಯಗಳಲ್ಲಿ ಅಡೆತಡೆಗಳು. ನಾನಾ ಕಾರ್ಯಗಳಲ್ಲಿ ವಿರೋಧ. ಧನಕ್ಷಯ. ದೇಹಬಾಧೆ. ಮನಃಕ್ಲೇಶ. ಪ್ರಯಾಣಗಳು, ವೃತ್ತಿ- ವ್ಯಾಪಾರದಲ್ಲಿ ಜಾಗರೂಕತೆಯಿಂದ ಕಾರ್ಯ ನಿರ್ವಹಿಸಿ.
ರಾಹು ಡಿಸೆಂಬರ್ವರೆಗೆ ಸಪ್ತಮ-ಕುಂಭದಲ್ಲಿ ಸಂಚಾರ. ದಾಂಪತ್ಯ ಜೀವನದಲ್ಲಿ ಎಚ್ಚರ. ಪಾಲುದಾರಿಕೆಯಲ್ಲಿ ಎಚ್ಚರ. ಕೋರ್ಟ್ ಕೇಸುಗಳು, ಡಿಸೆಂಬರ್ ನಂತರ ರಾಹು ಮಕರ ಪ್ರವೇಶ. ಷಷ್ಠ ಭಾವ, ಶತ್ರು ನಾಶ, ರೋಗ ಮುಕ್ತಿ, ಸಾಲ ತೀರುವಿಕೆ. ಸ್ಪರ್ಧೆಗಳಲ್ಲಿ ಗೆಲುವು ಸಾಧನೆ, ಕೋರ್ಟ್ ಕೇಸುಗಳಲ್ಲಿ ಗೆಲುವು. ಕೇತು ದ್ವಾದಶ, ಅಂದರೆ ಕಟಕ ರಾಶಿಯಲ್ಲಿ ಸಂಚಾರ- ನಿದ್ರಾಭಂಗ, ವಿದೇಶಯೋಗ, ಆಧ್ಯಾತ್ಮ ಜೀವನ. ನವೆಂಬರ್ ನಂತರ ಉತ್ತಮ ಸಮಯ, ತಾಳ್ಮೆಯಿಂದಿರಿ.
ಪರಿಹಾರ: ಪ್ರತಿ ದಿನ ಸೂರ್ಯ ನಮಸ್ಕಾರ, ಭಾನುವಾರ ಸೂರ್ಯನ ಆರಾಧನೆ, ಕಾಲಭೈರವ ಅಷ್ಟೋತ್ತರ ಪೂಜೆ - ಅಮಾವಾಸ್ಯೆ- ಅಷ್ಟಮಿ ದಿನಗಳಲ್ಲಿ ಕೂಷ್ಮಾಂಡ ದೀಪ, ಕೆಂಪು ವಸ್ತ್ರ ದಾನ.
ಅದೃಷ್ಟ ಬಣ್ಣ: ಕೇಸರಿ
ಸಂಖ್ಯೆ: 1
ದಿನ: ಭಾನುವಾರ
ರತ್ನ: ಮಾಣಿಕ್ಯ
ದೇವತೆ: ಸೂರ್ಯ
ಕಟಕ ರಾಶಿಗೆ 2026ರ ದೀಪಾವಳಿಯಿಂದ 2027ರ ದೀಪಾವಳಿವರೆಗೆ ರಾಜಯೋಗದ ವರ್ಷ, ಸುವರ್ಣ ವರ್ಷ. ಗುರು ಅಕ್ಟೋಬರ್ 31ರವರೆಗೆ ನಿಮ್ಮ ರಾಶಿಯಲ್ಲಿ ಉಚ್ಚನಾಗಿರುತ್ತಾನೆ. 12 ವರ್ಷಕ್ಕೊಮ್ಮೆ ಬರುವ ಮಹಾಯೋಗ. ವಿವಾಹ, ಮಕ್ಕಳು, ಮನೆ, ವಿದ್ಯೆ, ಹೆಸರು, ಪ್ರಶಸ್ತಿ, ವಿದೇಶಯೋಗ, ನೂತನ ಕಾರ್ಯಾರಂಭ, ಸಂಬಳದಲ್ಲಿ ಹೆಚ್ಚಳ ಎಲ್ಲವೂ ಲಭ್ಯವಾಗುತ್ತದೆ. ಇದು ನಿಮ್ಮ ಜೀವನದ ಅತ್ಯುತ್ತಮ ಸಮಯ, ಕೇಳಿದ್ದೆಲ್ಲ ಸಿಗುವ ಸಮಯ. ಅಕ್ಟೋಬರ್ ನಂತರ ಗುರು ಎರಡನೇ ಮನೆಗೆ ಸಿಂಹರಾಶಿಗೆ ಅತಿಚಾರ ಪ್ರವೇಶ ಮಾಡುತ್ತಾನೆ. ಇದು ಹಣದ ಮನೆ, ಕುಟುಂಬದ ಮನೆ, ಹಣಕಾಸು ಬಲ, ಕುಟುಂಬದಲ್ಲಿ ಶುಭಕಾರ್ಯ, ಮಾತಿನಿಂದ ಲಾಭ, ಬ್ಯಾಂಕ್ ಖಾತೆಯಲ್ಲಿ ಧನದ ಶೇಖರಣೆ, ಆಭರಣ ಕೊಳ್ಳುವ ಯೋಗ, ವಾಕ್ಸಿದ್ಧಿಯಾಗುವ ಕಾಲ. ಡಿಸೆಂಬರ್- ಜನವರಿ ತಿಂಗಳಲ್ಲಿ ಗುರು ವಕ್ರಿಯಾಗುತ್ತಾನೆ, ಅಂದರೆ ಹಿನ್ನಡೆ ಸಾಧಿಸುತ್ತಾನೆ. ಹಣಕಾಸು ವಿಳಂಬ, ಹಳೆಯ ಸಾಲ ವಾಪಸ್ಸು ಮಾಡುವುದು. ಹಳೆಯ ಕುಟುಂಬದ ವಿವಾದಗಳು ಮರುಕಳಿಸುವಿಕೆ. ಹೊಸ ಹೂಡಿಕೆಗಳು ಬೇಡ. ಶನೀಶ್ವರನು 2028ರವರೆಗೆ ಮೀನ ರಾಶಿಯಲ್ಲಿ ಸಂಚರಿಸುತ್ತಾನೆ. ಭಾಗ್ಯಸ್ಥಾನದಲ್ಲಿ ಶನೇಶ್ಚರನ ಸಂಚಾರ, ಭಾಗ್ಯ ವಿಳಂಬ, ಗುರುಗಳಿಂದ ಪರೀಕ್ಷೆ, ತಂದೆಯ ಆರೋಗ್ಯದಲ್ಲಿ ಎಚ್ಚರ, ವಿದೇಶ ಯಾತ್ರೆ ವಿಳಂಬ, ಡಿಸೆಂಬರ್ರವರೆಗೆ ಶನೇಶ್ಚರನು ವಕ್ರಿ, ಭಾಗ್ಯದಲ್ಲಿ ಮತ್ತಷ್ಟು ವಿಳಂಬ.
ಹಳೆಯ ಕೆಲಸಗಳು ವಾಪಸಾಗುವ ಸಂಭವ. ದೇವಾಲಯಗಳ ಜೀಣೋದ್ಧಾರ ಕಾರ್ಯಗಳನ್ನು ಕೈಗೊಳ್ಳುವುದು. ತಂದೆಗೆ ಆಯುರ್ವೃದ್ಧಿಯು. ಸಂಪ್ರದಾಯದ ಧರ್ವಚರಣೆಯಿಂದ ವಿಮುಖರಾಗಿರುವಿರಿ. ಧ್ಯಾನ-ಯೋಗದಲ್ಲಿ ಆಸಕ್ತಿ ಹೆಚ್ಚು. ನಿಮ್ಮ ಕಾರ್ಯ ನಿಮಿತ್ತವಾಗಿ ದೈವ ಕೈಂಕರ್ಯ ಮಾಡುವಿರಿ. ಪರರ ಕಲ್ಯಾಣಕ್ಕಾಗಿ ಮನಸ್ಸಿನಲ್ಲಿ ಇಚ್ಛೆಯುಳ್ಳವರಾಗುವಿರಿ. ಕಾರ್ವಿುಕ ನಾಯಕರಿಗೆ ಯಶಸ್ಸು-ಕೀರ್ತಿ, ಕಬ್ಬಿಣ-ಎಣ್ಣೆ ವ್ಯಾಪಾರಿಗಳಿಗೆ ಉತ್ತಮ ಸಮಯ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭ. ಕೆಲವು ಸಮಯಗಳಲ್ಲಿ ಧಾರ್ವಿುಕ ವಿಚಾರಗಳಲ್ಲಿ ನಿರಾಸಕ್ತಿ ಇತ್ಯಾದಿ ಫಲಗಳು. ರಾಹು ಡಿಸೆಂಬರ್ವರೆಗೆ ಅಷ್ಟಮದಲ್ಲಿ ಸಂಚಾರ. ಆಯುಷ್ಯದ ಭಯ, ಗುಪ್ತ ಧನ, ಇನ್ಸುರೆನ್ಸ್, ಅಪರೇಷನ್, ಅನಾರೋಗ್ಯ ಸಂಭವ, ಗುಪ್ತಾಂಗಗಳ ವಿಷಯದಲ್ಲಿ ಎಚ್ಚರ ವಹಿಸುವುದು ಸೂಕ್ತ. ಉದ್ಯೋಗದಲ್ಲಿ ವರ್ಗಾವಣೆ, ಉದ್ಯೋಗ ಮತ್ತು ವ್ಯಾಪಾರದಲ್ಲಿ ಚಿಂತೆ. ಗೃಹದಲ್ಲಿ ಕಳ್ಳತನ. ನಂತರ ರಾಹು ಮಕರ ರಾಶಿಯಲ್ಲಿ ಸಂಚಾರ. ದಾಂಪತ್ಯದಲ್ಲಿ ಹೊಸ ಒಪ್ಪಂದ, ಪಾಲುದಾರಿಕೆ ವ್ಯವಹಾರದಲ್ಲಿ ಲಾಭ. ವಿದೇಶದಲ್ಲಿ ಸಂಗಾತಿ. ಆದರೆ ಸಂಗಾತಿ ಆರೋಗ್ಯದಲ್ಲಿ ಎಚ್ಚರ. ಹಗರಣಗಳಲ್ಲಿ ಸಿಲುಕುವ ಸಾಧ್ಯತೆ. ಎಚ್ಚರದಿಂದ ಇರಬೇಕು. ಕೇತು 2ರಲ್ಲಿ ಸಿಂಹ ರಾಶಿಯಲ್ಲಿ ಸಂಚಾರ. ನಾಲಿಗೆಯಲ್ಲಿ ಬಾಯಿ ಹುಣ್ಣು. ಸಮಯಕ್ಕೆ ಸರಿಯಾಗಿ ಆಹಾರ ಸಿಗದಿರುವುದು. ಮಾತಿನಲ್ಲಿ, ಕುಟುಂಬದಲ್ಲಿ ಎಚ್ಚರವಾಗಿರಬೇಕು. ಕೇತು ಕಟಕರಾಶಿ ಸಂಚಾರ ಕಾಲದಲ್ಲಿ ತಲೆನೋವು, ನಿದ್ರಾಭಂಗ, ಆಧ್ಯಾತ್ಮದಲ್ಲಿ ಆಸಕ್ತಿ, ಒಡಹುಟ್ಟಿದವರಿಂದ ಮನೋಚಿಂತೆ. ಬೆಂಕಿಯಿಂದ ದೂರವಿರಿ. ತಾಳ್ಮೆಯಿಂದಿರಿ.
ಪರಿಹಾರ: ಶುಕ್ರವಾರ- ದುರ್ಗಾಪೂಜೆ, ಬಿಳಿ ವಸ್ತ್ರ ದಾನ.
ಅದೃಷ್ಟ ಬಣ್ಣ: ಬಿಳಿ
ಅದೃಷ್ಟ ಸಂಖ್ಯೆ: 2
ದಿನ: ಸೋಮವಾರ
ದೇವರು: ಶಿವ
ಕನ್ಯಾ ರಾಶಿಗೆ ಗುರು ಲಾಭದಿಂದ ವ್ಯಯಕ್ಕೆ ಪಥ ಸಂಚಲನ ಮಾಡುವ ವರ್ಷ. ಗುರು ಅಕ್ಟೋಬರ್ವರೆಗೆ ಹನ್ನೊಂದನೇ, ಲಾಭ ಸ್ಥಾನದಲ್ಲಿ ಅಂದರೆ ಕಟಕ ರಾಶಿಯಲ್ಲಿ ಉಚ್ಚನಾಗಿರುತ್ತಾನೆ. ಲಾಭ ಸ್ಥಾನದಲ್ಲಿ ಉಚ್ಚಗುರು, ಅತ್ಯಂತ ಶುಭ, ಧನಲಾಭ, ಹಿರಿಯ ಸಹೋದರ- ಸಹೋದರಿಯರಿಂದ ಸಹಾಯ, ನಿಮ್ಮ ಆಸೆಗಳು ಪೂರ್ಣವಾಗುವ ಸಮಯ, ಮಕ್ಕಳಿಂದ ಸಂತೋಷ, ಷೇರು ಮಾರುಕಟ್ಟೆಯಲ್ಲಿ ಲಾಭ, ನೂತನ ಗೃಹ- ವಾಹನ ಪಡೆಯುವಿರಿ, ಈ ಅವಧಿಯಲ್ಲಿ ನಿಮ್ಮ ಆಕಾಂಕ್ಷೆಗಳೆಲ್ಲವೂ ಪೂರ್ಣಗೊಳ್ಳುವುದು, ಎಲ್ಲ ಕಾರ್ಯಗಳಲ್ಲೂ ಜಯ ಸಾಧಿಸುವಿರಿ. ಅಕ್ಟೋಬರ್ ನಂತರ ಗುರು ಹನ್ನೆರಡನೇ ಮನೆ ಸಿಂಹರಾಶಿಯಲ್ಲಿ ಅತಿಚಾರ ಪ್ರವೇಶ. ಖರ್ಚು-ವೆಚ್ಚದಲ್ಲಿ ಹೆಚ್ಚಳ, ವಿದೇಶ ಯೋಗ, ಆಸ್ಪತ್ರೆ ದರ್ಶನ, ಆಶ್ರಮ ದರ್ಶನ, ನಿದ್ರಾ ಭಂಗ. ಡಿಸೆಂಬರ್- ಜನವರಿ ಗುರು ವಕ್ರಿ. ಹಣಕಾಸು ವಿಳಂಬ, ಹಳೆಯ ಖರ್ಚು ಮರುಕಳಿಸುವಿಕೆ, ಲಾಭದ ಗುರು. ಉದ್ಯೋಗದಲ್ಲಿ ಬಡ್ತಿ, ಸರ್ಕಾರದಿಂದ ಗೌರವ, ದಾನ-ಧರ್ಮ ಕಾರ್ಯಗಳಲ್ಲಿ ಹೆಚ್ಚು ಆಸಕ್ತಿ, ಕೀರ್ತಿ ಹಾಗೂ ಜ್ಞಾನ ಸಂಪಾದನೆ, ವಸ್ತ್ರ-ಆಭರಣಗಳ ಖರೀದಿ, ಬ್ಯಾಂಕ್ ಖಾತೆಯಲ್ಲಿ ಅಧಿಕ ಉಳಿತಾಯ, ಆರೋಗ್ಯದಲ್ಲಿ ಉತ್ತಮ ಬೆಳವಣಿಗೆ, ವ್ಯವಸಾಯ ಭೂಮಿ ಖರೀದಿ ಇತ್ಯಾದಿ. ಶನೇಶ್ಚರನು ಸಪ್ತಮ ಸ್ಥಾನ, ಮೀನ ರಾಶಿಯಲ್ಲಿ ಸಂಚಾರ, 30 ವರ್ಷಕ್ಕೊಮ್ಮೆ ಈ ಸಂಚಾರ, ದಾಂಪತ್ಯದಲ್ಲಿ ಪರೀಕ್ಷೆ, ಸಂಗಾತಿಯ ಆರೋಗ್ಯ, ಪಾಲುದಾರಿಕೆ ವ್ಯಾಪಾರದಲ್ಲಿ ಭಿನ್ನಾಭಿಪ್ರಾಯ, ವಿಚ್ಛೇದನ ಯೋಚನೆ- ಕೋರ್ಟ್ ಕೇಸ್. ಡಿಸೆಂಬರ್ವರೆಗೆ ಶನೇಶ್ಚರನು ಮೀನ ರಾಶಿಯಲ್ಲಿ ವಕ್ರಿಯಾಗಿ ಹಳೆಯ ದಾಂಪತ್ಯ ಜೀವನದಲ್ಲಿ ಮರುಕಳಿಸುವಿಕೆ, ಹಳೆಯ ಪ್ರೀತಿ-ಪ್ರೇಮಗಳ ಕಡೆ ಗಮನ, ಆತುರದ ನಿರ್ಧಾರಗಳು ಬೇಡ, ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಉತ್ತಮ. ಇಷ್ಟವಿಲ್ಲದ ಸ್ಥಾನಕ್ಕೆ ವರ್ಗ, ಅಪಘಾತ ಭಯ, ದನ-ಕರುಗಳ ಬಗ್ಗೆ ಎಚ್ಚರ, ಸಮಾಜದಲ್ಲಿ ಅಗೌರವ, ಕಾರ್ವಿುಕರಿಂದ ತೊಂದರೆ, ದೇಹಾರೋಗ್ಯದಲ್ಲಿ ಏರುಪೇರು, ಚಾರಿತ್ರ್ಯಧೆ, ವಿನಾಕಾರಣ ಅಲೆದಾಟ, ಜೀರ್ಣ ಶಕ್ತಿಯ ಕೊರತೆ, ವಿದೇಶ ನೆಲಕ್ಕೆ ಪ್ರಯಾಣ, ನಾನಾ ಕಾರ್ಯಗಳಲ್ಲಿ ವಿರೋಧ, ಮಹಾಭಯ, ಧನ ನಾಶ, ಮನಸ್ತಾಪ. ಡಿಸೆಂಬರ್ರವರೆಗೆ ರಾಹು ಆರನೇ ಮನೆ ಕುಂಭರಾಶಿಯಲ್ಲಿ ಸಂಚಾರ, ಶತ್ರುನಾಶ, ರೋಗಮುಕ್ತಿ, ಸಾಲ ತೀರಿಸುವಿಕೆ, ಸ್ಪರ್ಧೆಗಳಲ್ಲಿ ಗೆಲುವು ಸಾಧನೆ, ನಂತರ ಪಂಚಮ ಸ್ಥಾನ ಮಕರ ರಾಶಿಯಲ್ಲಿ ಸಂಚಾರ, ಮಕ್ಕಳಿಂದ ಚಿಂತೆ, ಪ್ರೀತಿಯಲ್ಲಿ ಮೋಸ, ವಿದ್ಯೆಯಲ್ಲಿ ಎಚ್ಚರ, ಹೂಡಿಕೆಯಲ್ಲಿ ನಷ್ಟ, ಕೇತು ಹನ್ನೆರಡರ ಸಿಂಹ ರಾಶಿಯಿಂದ 11ರ ಕಟಕ ರಾಶಿಯಲ್ಲಿ ಸಂಚಾರ- ಲಾಭದಲ್ಲಿ ಕೇತು, ಹಠಾತ್ ಲಾಭ, ಆಧ್ಯಾತ್ಮಿಕ ಲಾಭ, ನಂತರ ಖರ್ಚು, ದಾಂಪತ್ಯದಲ್ಲಿ ತಾಳ್ಮೆ ಅಗತ್ಯ, ಮಾತಿನಲ್ಲಿ ಎಚ್ಚರ; ವ್ಯವಸಾಯದಲ್ಲಿ ಲಾಭ, ಕೋರ್ಟು ಕಚೇರಿಗಳಲ್ಲಿ ಜಯ, ಉನ್ನತ ಪದವಿ ಸಾಧನೆ. ಆದರೆ ನಿಮ್ಮ ಸ್ವಂತ ಜನರಿಂದ ಅಪಾಯ, ಹಿರಿಯ ಸಹೋದರ- ಸಹೋದರಿಯರ ಆರೋಗ್ಯದಲ್ಲಿ ಏರುಪೇರು ಸಾಧ್ಯತೆ.
ಪರಿಹಾರ: ವಿಷ್ಣು ಸಹಸ್ರನಾಮ, ಬುಧವಾರ ಗಣಪತಿ ಪೂಜೆ, ಹಸಿರು ಬಟ್ಟೆ ದಾನ, ಅನ್ನದಾನ ಮಾಡಿ.
ಅದೃಷ್ಟದ ಬಣ್ಣ: ಹಸಿರು
ಸಂಖ್ಯೆ: 5
ದಿನ: ಬುಧವಾರ
ರತ್ನ: ಪಚ್ಚೆ
ದೇವರು: ಗಣಪತಿ.
ತುಲಾ ರಾಶಿಯವರಿಗೆ ವೃತ್ತಿ ಲಾಭದ ರಾಜಯೋಗ ವರ್ಷ. ಕರ್ಮ ಲಾಭ ಯೋಗ. ಅಕ್ಟೋಬರ್ವರೆಗೆ ಗುರು ಕಟಕದಲ್ಲಿ ಉಚ್ಚನಾಗಿರುತ್ತಾನೆ. ವೃತ್ತಿ ಸ್ಥಾನದಲ್ಲಿ ಉಚ್ಚ ಗುರು. 12 ವರ್ಷಕ್ಕೊಮ್ಮೆ ಬರುವ ಮಹಾಯೋಗ. ಇತರರ ಸಹಾಯದಿಂದ ವೃತ್ತಿಯಲ್ಲಿ ಜವಾಬ್ದಾರಿ, ಧರ್ಮ ಮಾರ್ಗ ಅನುಸರಿಸದಿದ್ದರೆ, ವೃತ್ತಿಯಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾದೀತು. ಶಾರೀರಿಕ ಆಯಾಸ, ಆರೋಗ್ಯದಲ್ಲಿ ಎಚ್ಚರ ವಹಿಸಬೇಕು. ವೃತ್ತಿಯಲ್ಲಿ ವರ್ಗಾವಣೆ, ಬಡ್ತಿ, ನೂತನ ಕೆಲಸ, ಸರ್ಕಾರಿ ಕೆಲಸ, ಪ್ರಶಸ್ತಿ, ತಂದೆಯಿಂದ ಸಹಾಯ, ಸಮಾಜದಲ್ಲಿ ಪ್ರಶಂಸೆ, ರಾಜಕೀಯ ಲಾಭ, ವಿದೇಶಿ ಕಂಪನಿಯಿಂದ ಆಹ್ವಾನ. ವೃತ್ತಿ ಜೀವನ- ವ್ಯಾಪಾರದಲ್ಲಿ ಧರ್ಮ ಮಾರ್ಗದಲ್ಲಿ ಹಾಗೂ ಗುರು- ಹಿರಿಯರ ಸೇವೆಯಿಂದ ವೃತ್ತಿ ಜೀವನ ಉತ್ತುಂಗಕ್ಕೆ ಏರುವುದು. ತಪ್ಪಿದಲ್ಲಿ ಗುರು ನಿಮಗೆ ವೃತ್ತಿಯಲ್ಲಿ ಶಿಕ್ಷೆ ನೀಡುವ ಸಮಯ. ನವೆಂಬರ್ನಿಂದ ಗುರು ಹನ್ನೊಂದನೇ ಮನೆ- ಲಾಭ ಸ್ಥಾನದ ಸಿಂಹ ರಾಶಿಗೆ ಅತಿಚಾರ ಪ್ರವೇಶ. ಧನಲಾಭ, ಹಿರಿಯ ಸಹೋದರರಿಂದ, ಸ್ನೇಹಿತರಿಂದ ಸಹಾಯ. ಆಸೆ ಈಡೇರುವಿಕೆ, ಷೇರು ಮಾರುಕಟ್ಟೆಯಲ್ಲಿ ಲಾಭ. ನೂತನ ವಾಹನ-ಗೃಹ ಲಾಭ. ಡಿಸೆಂಬರ್- ಜನವರಿಯಲ್ಲಿ ಗುರು ವಕ್ರಿ, ಲಾಭದಲ್ಲಿ ವಿಳಂಬ, ಹಳೆಯ ಕೆಲಸಗಳು ವಾಪಸಾಗುವಿಕೆ, ಹೊಸ ನಿರ್ಧಾರಗಳು ಬೇಡ. ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವ ಸಮಯ. ಹೊಸ ವಸ್ತ್ರ, ನೂತನ ಆಭರಣಗಳನ್ನು ಖರೀದಿಸುವಿರಿ. ಸಂತಾನ ಭಾಗ್ಯ, ಅನಾರೋಗ್ಯದಿಂದ ಬಳಲುತ್ತಿದ್ದವರಿಗೆ ಆರೋಗ್ಯ ಭಾಗ್ಯ, ವಿದೇಶ ಪ್ರಯಾಣ ಇತ್ಯಾದಿ ಫಲಗಳನ್ನು ಅನುಭವಿಸುವಿರಿ. ಶನೇಶ್ಚರನು ಆರನೇ ಮನೆಯಲ್ಲಿ ಮೀನದಲ್ಲಿ ಸಂಚಾರ. ಶತ್ರು- ರೋಗ- ಸಾಲದ ಸ್ಥಾನ, ಅತ್ಯಂತ ಶುಭ, ಶತ್ರು ನಾಶ, ರೋಗ ಮುಕ್ತಿ, ಸಾಲ ತೀರಿಸುವಿಕೆ, ಸ್ಪರ್ಧೆಯಲ್ಲಿ ಗೆಲುವು, ಕೋರ್ಟ್ ಕೇಸ್ಗಳಲ್ಲಿ ಗೆಲುವು, ಉದ್ಯೋಗದಲ್ಲಿ ಜಯ. ಡಿಸೆಂಬರ್ವರೆಗೆ ಶನೇಶ್ಚರನು ವಕ್ರಿ. ಹಳೆಯ ರೋಗಗಳು ಮರುಕಳಿಸುವುದು. ಹಳೆಯ ಶತ್ರುಗಳು ಪ್ರತ್ಯಕ್ಷರಾಗುವರು. ಆರೋಗ್ಯ ತಪಾಸಣೆ ಮಾಡಿಸಿ. ತಾಳ್ಮೆಯಿಂದಿರಿ. ಶನೇಶ್ಚರನು ನಿಮ್ಮನ್ನು ಸಂತೋಷವಾಗಿರಿಸುವ ಸಮಯ. ರಾಹು ಡಿಸೆಂಬರ್ವರೆಗೆ ಪಂಚಮದಲ್ಲಿ ಸಂಚಾರ. ಮಕ್ಕಳಿಂದ ಚಿಂತೆ, ಹೂಡಿಕೆಯಲ್ಲಿ ನಷ್ಟ, ಷೇರು ನಷ್ಟ, ವಿದ್ಯೆಯಲ್ಲಿ ಎಚ್ಚರ. ಯಾವುದೇ ಯೋಜನೆಯಲ್ಲಿ ಹೂಡುವಾಗ ಮುನ್ನೆಚ್ಚರಿಕೆ ಅಗತ್ಯ. ನಂತರ ನಾಲ್ಕನೇ ಮನೆ ಮಕರಕ್ಕೆ ರಾಹು ಸಂಚಾರ. ಗೃಹ ಬದಲಾವಣೆ, ತಾಯಿ ಆರೋಗ್ಯ, ವಾಹನ ಖರೀದಿ ವಿಳಂಬ. ಮನಸ್ಸು ಭಾರ. ನಿದ್ರಾ ಭಂಗ. ಕೇತು ಲಾಭದಲ್ಲಿ. ವ್ಯವಸಾಯದಿಂದ ಲಾಭ, ನಿಮ್ಮ ನಿರ್ಧಾರಗಳನ್ನು ಪೂರ್ಣಗೊಳಿಸುವ ಸಮಯ. ಕೀರ್ತಿ ಗೌರವಗಳು ಲಭ್ಯ. ನಂತರ ದಶಮ ಕೇತು, ಗಳಿಸಿದ್ದನ್ನು ಕಳೆಯುವ ಸಮಯ. ಆಧ್ಯಾತ್ಮಿಕ ಚಿಂತನೆಗಳು, ಧರ್ಮ ಮಾರ್ಗ, ತೀರ್ಥಯಾತ್ರೆ ಬೆಳೆಸುವಿರಿ. ಮಾತಿನಲ್ಲಿ ತಾಳ್ಮೆ ಇರಲಿ.
ಪರಿಹಾರ: ದುರ್ಗಾಸ್ತುತಿ, ಪ್ರತಿ ದಿನ ಹನುಮಾನ್ ಚಾಲೀಸಾ, ಶುಕ್ರವಾರ ಲಕ್ಷ್ಮೀ ಪೂಜೆ; ಬಿಳಿ ವಸ್ತ್ರ ದಾನ.
ಅದೃಷ್ಟ ಬಣ್ಣ: ಬಿಳಿ
ಸಂಖ್ಯೆ: 6
ದಿನ: ಶುಕ್ರವಾರ
ರತ್ನ: ವಜ್ರ
ದೇವರು: ದುರ್ಗಾ
ವೃಶ್ಚಿಕ ರಾಶಿಯವರಿಗೆ ಭಾಗ್ಯ. ವೃತ್ತಿಯ ಧರ್ಮ ಕರ್ವಧಿಪತಿ ಯೋಗದ ವರ್ಷ. ಗುರು ಅಕ್ಟೋಬರ್ರವರೆಗೆ ಒಂಬತ್ತನೇ ಮನೆಯಾದ ಭಾಗ್ಯದಲ್ಲಿ ಉಚ್ಚ- ಗುರು. ಅತ್ಯಂತ ಶುಭ, ಮಹಾ ಭಾಗ್ಯ. ತಂದೆಯಿಂದ ಸಹಾಯ, ಗುರುಗಳ ಕೃಪೆ, ದೇವರ ಕೃಪೆ, ವಿದೇಶಯಾತ್ರೆ. ಉನ್ನತ ಶಿಕ್ಷಣ, ಭಾಗ್ಯೋದಯ. ಧಾರ್ವಿುಕ ಕಾರ್ಯ, ಯಾತ್ರೆ, ಪುಣ್ಯ ಕ್ಷೇತ್ರ ದರ್ಶನ. ನೀವು ಮುಟ್ಟಿದ್ದೆಲ್ಲ ಚಿನ್ನ. ನವೆಂಬರ್ ತಿಂಗಳಿನಲ್ಲಿ ಗುರು ದಶಮದ ಸಿಂಹ ರಾಶಿಗೆ ಅತಿಚಾರ ಪ್ರವೇಶ. ಪೂರ್ವ ಪುಣ್ಯದಿಂದ ಅಧಿಕಾರ ಲಾಭ, ಸಮಾಜದಲ್ಲಿ ಗೌರವ- ಮನ್ನಣೆ. ಸಮಾಜ ಸೇವೆ, ಗಣ್ಯರ ಸಂಪರ್ಕ ಹಾಗೂ ಗೌರವ. ರಾಜಕೀಯ ಲಾಭ. ಗೃಹದಲ್ಲಿ ಶುಭ-ಕಾರ್ಯ, ಜ್ಞಾನಾರ್ಜನೆ. ಜನವರಿ, ಫೆಬ್ರವರಿಯಲ್ಲಿ ಗುರು ವಕ್ರಿ. ವೃತ್ತಿಯಲ್ಲಿ ಹಳೆಯ ಸಮಸ್ಯೆಗಳು ಮರುಕಳಿಸುವಿಕೆ. ಹಳೆಯ ಕೆಲಸಗಳು ವಾಪಸ್ಸು. ಧರ್ಮ ಮಾರ್ಗದಲ್ಲಿ ನಡೆಯದಿದ್ದರೆ ಗುರುವಿನ ಶಾಪ, ಅಶುಭ ಫಲಗಳನ್ನು ಅನುಭವಿಸಬೇಕಾದೀತು. ಅನಾರೋಗ್ಯ, ಸ್ಥಾನ ಪಲ್ಲಟ, ಮಕ್ಕಳ ಆರೋಗ್ಯದಲ್ಲಿ ಎಚ್ಚರ ವಹಿಸಿ. ಆಸ್ತಿ ವಿವಾದದಲ್ಲಿ ಅಶುಭ ಫಲಗಳು.
ಶನೇಶ್ಚರನು ಪಂಚಮ-ಮೀನದಲ್ಲಿ ಸಂಚಾರ. ಮಕ್ಕಳು, ವಿದ್ಯೆ, ಪ್ರೀತಿ, ಹೂಡಿಕೆ ಸ್ಥಾನ, ಪಂಚಮ ಶನೇಶ್ಚರ ಕಠಿಣ. ಮಕ್ಕಳಿಂದ ಚಿಂತೆ, ವಿದ್ಯೆಯಲ್ಲಿ ವಿಳಂಬ, ಪ್ರೀತಿಯಲ್ಲಿ ಬಿರುಕು, ಹೂಡಿಕೆಯಲ್ಲಿ ನಷ್ಟ, ಷೇರು ನಷ್ಟ, ಸಂತಾನ ವಿಳಂಬ, ಡಿಸೆಂಬರ್ನಲ್ಲಿ ಶನೇಶ್ಚರನು ವಕ್ರಿ. ಹಳೆಯ ಪ್ರೀತಿ ವಾಪಸ್, ಹಳೆಯ ಹೂಡಿಕೆಯಿಂದ ಸಮಸ್ಯೆ. ನಿಮ್ಮ ಯೋಜನೆಗಳು ಸ್ಥಗಿತ. ಅಪಘಾತಗಳಿಂದ ಕಾಲಿನಲ್ಲಿ ಗಾಯ. ಶತ್ರು ಭಯ. ಕುಟುಂಬದಿಂದ ಬೇರ್ಪಡೆ. ಸ್ನೇಹಿತರಿಂದ ಅಪವಾದ ಇತ್ಯಾದಿ ಫಲಗಳು.
ರಾಹು ಡಿಸೆಂಬರ್ವರೆಗೆ ಚತುರ್ಥ- ಕುಂಭ ರಾಶಿಯಲ್ಲಿ ಸ್ಥಿತ. ಗೃಹ, ತಾಯಿ, ವಾಹನ ಸಮಸ್ಯೆ, ಮನೆ ಬದಲಾವಣೆ, ಅನಾರೋಗ್ಯ, ಶತ್ರು ಬಾಧೆ, ಪ್ರಯಾಣದಲ್ಲಿ ಎಚ್ಚರ, ನಿದ್ರಾಭಂಗ, ವಿದ್ಯೆಯಲ್ಲಿ ಮಂದ, ಸ್ಥಿರಾಸ್ತಿ ಕೈಬಿಡುವ ಸಾಧ್ಯತೆ. ನಂತರ ರಾಹು ತೃತೀಯ ಮಕರ ರಾಶಿಯಲ್ಲಿ ಸಂಚಾರ. ಧೈರ್ಯ ಹೆಚ್ಚು, ಸಹೋದರರಿಂದ ಲಾಭ, ಸಣ್ಣ ಪ್ರಯಾಣದಿಂದ ಲಾಭ, ಬರವಣಿಗೆ, ಸಂಗೀತದಲ್ಲಿ ಯಶಸ್ಸು, ಪುಸ್ತಕ ಪ್ರಕಟಣೆಗೆ ಶುಭ ಸಮಯ. ಹಣಕಾಸು ಲಾಭ. ಯಾವುದೇ ವಿಷಯವನ್ನು ಎದುರಿಸುವ ಧೈರ್ಯ, ಸಹೋದರ-ಸಹೋದರಿಯರಿಂದ ಸಹಾಯ. ಧರ್ಮ ಪತ್ನಿ, ಮಕ್ಕಳ ಆರೋಗ್ಯದಲ್ಲಿ ಉತ್ತಮ ಫಲ. ಹುದ್ದೆಯಲ್ಲಿ, ವ್ಯಾಪಾರದಲ್ಲಿ ಬಡ್ತಿ, ಸಾಲ ವಸೂಲಾತಿ ಸಮಯ.
ಕೇತು ಡಿಸೆಂಬರ್ವರೆಗೆ ದಶಮ- ಸಿಂಹ ರಾಶಿಯಲ್ಲಿ ಸಂಚಾರ ವ್ಯವಸಾಯದಿಂದ ಲಾಭ. ಉದ್ದೇಶಗಳನ್ನು ಪೂರ್ಣಗೊಳಿಸುವ ಸಮಯ. ಸಮಾಜದಲ್ಲಿ ಗೌರವ, ಸರ್ಕಾರದಿಂದ ಲಾಭ, ವ್ಯಾಪಾರದಲ್ಲಿ ಅಭಿವೃದ್ಧಿ, ಕೆಲಸದಲ್ಲಿ ಬಡ್ತಿ, ಸ್ನೇಹಿತರಿಂದ ಸಹಾಯ, ಶತ್ರುಗಳು ಮಿತ್ರರಾಗುವರು. ನಂತರ ನವಮ ಕಟಕ ರಾಶಿಯಲ್ಲಿ ಕೇತು ಸಂಚಾರ. ವೃತ್ತಿಯಲ್ಲಿ ವೈರಾಗ್ಯ, ಭಾಗ್ಯದಲ್ಲಿ ಅಡಚಣೆ, ಆದರೆ ಆಧ್ಯಾತ್ಮದಲ್ಲಿ ಆಳವಾದ ಅನುಭವ, ಗುರು ಕೃಪೆ. ಒಟ್ಟಾರೆ ಭಾಗ್ಯದಲ್ಲಿ ಮತ್ತು ವೃತ್ತಿಯಲ್ಲಿ ಚೆನ್ನಾದ ಸಮಯ.
ಪರಿಹಾರ: ಸುಬ್ರಮಣ್ಯ ಭುಜಗಂ, ಗುರುವಾರ ಗುರುಪೂಜೆ. ಹಳದಿ ವಸ್ತ್ರ ದಾನ. ಅನ್ನದಾನ.
ಅದೃಷ್ಟ ಬಣ್ಣ: ಕೆಂಪು
ಸಂಖ್ಯೆ: 9
ವಾರ: ಮಂಗಳವಾರ
ರತ್ನ: ಹವಳ
ದೇವರು: ಸುಬ್ರಮಣ್ಯ
ಈ ರಾಶಿಯವರಿಗೆ ಗುರು ಅಷ್ಟಮದಿಂದ ಭಾಗ್ಯಕ್ಕೆ ಚಲಿಸುವ ವರ್ಷ. ಆರಂಭ ಕಷ್ಟ, ಅಂತ್ಯ ಭಾಗ್ಯ. ಅಕ್ಟೋಬರ್ವರೆಗೆ ಗುರು ಅಷ್ಟಮದಲ್ಲಿ ಕಟಕ ರಾಶಿಯಲ್ಲಿ ಉಚ್ಚ, ಗುಪ್ತ ಹಣ, ಇನ್ಶೂರೆನ್ಸ್, ಆಸ್ತಿ ವಿವಾದದಿಂದ ಹಣ, ತಂದೆಯ ಆಸ್ತಿ. ಆದರೆ ಆರೋಗ್ಯದಲ್ಲಿ ಎಚ್ಚರ. ಶಸ್ತ್ರಚಿಕಿತ್ಸೆ, ಅಪಘಾತ, ಮಾನಸಿಕ ಒತ್ತಡ, ನಿದ್ರಾಭಂಗ. ಜನ್ಮ ಸ್ಥಳದಿಂದ ಇತರ ಸ್ಥಾನಕ್ಕೆ ಸ್ಥಳ ಬದಲಾವಣೆ. ಸಮಾಜದಲ್ಲಿ ಅಗೌರವ. ವಾದ-ವಿವಾದಗಳಿಂದ ಹಿನ್ನಡೆ. ಪ್ರಯಾಣಗಳಿಂದ ಶಾರೀರಿಕ ಬಾಧೆ. ಕೆಲಸ-ಕಾರ್ಯಗಳಲ್ಲಿ ಹಿನ್ನಡೆ, ತಾಳ್ಮೆಯಿಂದ ಇರಬೇಕು. ನವೆಂಬರ್ ತಿಂಗಳಿನಿಂದ ಗುರು ಭಾಗ್ಯಸ್ಥಾನಕ್ಕೆ ಅತಿಚಾರ ಪ್ರವೇಶ. ನಿಮ್ಮ ರಾಶಿಯ ಅಧಿಪತಿ ಭಾಗ್ಯದಲ್ಲಿ. ಅಂದಿನಿಂದ ಶುಭ ಫಲ ಪ್ರಾರಂಭ. ಭಾಗ್ಯೋದಯ. ತಂದೆಯಿಂದ ಸಹಾಯ, ಗುರುಗಳ ಕೃಪೆ, ವಿದೇಶಯಾತ್ರೆ, ಉನ್ನತ ವಿದ್ಯೆ, ಧಾರ್ವಿುಕ ಕಾರ್ಯ, ಯಾತ್ರೆ. ಉನ್ನತ ಹುದ್ದೆ, ಸಮಾಜದಲ್ಲಿ ಕೀರ್ತಿ, ನಿಮ್ಮ ಎಲ್ಲ ಕಾರ್ಯಗಳಲ್ಲಿ ಯಶಸ್ಸು ಕಾಣುವಿರಿ. ಜನವರಿಯಲ್ಲಿ ಗುರು ವಕ್ರಿ. ಭಾಗ್ಯದಲ್ಲಿ ವಿಳಂಬ, ಹಳೆಯ ಭಾಗ್ಯದ ಕೆಲಸ ಮರುಕಳಿಸುವಿಕೆ ಇತ್ಯಾದಿ ಫಲಗಳು. ಶನೇಶ್ಚರನು ಮೀನ ರಾಶಿಯಲ್ಲಿ ಚತುರ್ಥ ಭಾವದಲ್ಲಿ ಸ್ಥಿತ. ಗೃಹ ನಿರ್ವಣದಲ್ಲಿ ವಿಳಂಬ. ತಾಯಿ ಆರೋಗ್ಯ, ಮನಸ್ಸಿನಲ್ಲಿ ಭಾರ, ನಿದ್ರಾಭಂಗ, ವಾಹನ ರಿಪೇರಿ, ಹಳೆಯ ಮನೆ ವಾಪಸ್ಸು, ಹಳೆಯ ವಾಹನ ಸಮಸ್ಯೆ, ಸರ್ಕಾರದಿಂದ ಬಾಧೆ, ಗೋವುಗಳ ರಕ್ಷಣೆ ಅಗತ್ಯ, ಕೂಡಿಟ್ಟ ಹಣ ವ್ಯಯ, ಸ್ವಂತ ಮನೆಯಿಂದ ಹೊರನಡಿಗೆ, ಸ್ಥಿರಾಸ್ತಿಯಲ್ಲಿ ಬಾಧೆ, ದೇಹ ಬಾಧೆ, ಶತ್ರು ಬಾಧೆ, ಭಯದ ವಾತಾವರಣ ನಿರ್ವಣ, ಜೀವನದಲ್ಲಿ ಜಿಗುಪ್ಸೆ ಇತ್ಯಾದಿ ಫಲಗಳ ನಿರೀಕ್ಷೆ.
ಡಿಸೆಂಬರ್ವರೆಗೆ ರಾಹು ತೃತೀಯ ಕುಂಭರಾಶಿಯಲ್ಲಿ ಸಂಚಾರ. ಧೈರ್ಯ, ಸಹೋದರರಿಂದ ಲಾಭ, ಸಣ್ಣ ಪ್ರಯಾಣ, ಗೃಹದಲ್ಲಿ ಇತರರ ಆರೋಗ್ಯದಲ್ಲಿ ಉತ್ತಮ ಬದಲಾವಣೆ, ಹುದ್ದೆಯಲ್ಲಿ ಬಡ್ತಿ, ಪದವಿ ಪ್ರಮಾಣ, ಶತ್ರುಗಳು ಮಿತ್ರರಾಗುವರು. ನಂತರ ರಾಹು ಮಕರ ದ್ವಿತೀಯದಲ್ಲಿ ಸಂಚಾರ. ಮಾತಿನಿಂದ ಹಣ, ಹಣಕಾಸು ವಿವಾದ, ನೇತ್ರದಲ್ಲಿ ಬಾಧೆ, ಮಾತಿನಲ್ಲಿ ಎಚ್ಚರ, ಅಧಿಕ ವೆಚ್ಚ, ಆಹಾರದಲ್ಲಿ ಜಾಗ್ರತೆ, ಜೀರ್ಣಶಕ್ತಿ ಕಡಿಮೆ, ಕೌಟುಂಬಿಕ ಕಲಹ, ಹೆಂಡತಿ- ಮಕ್ಕಳಿಂದ ಅಶುಭ ಸಮಯ.
ಕೇತು ಭಾಗ್ಯಸ್ಥಾನದಿಂದ ಅಷ್ಟಮ ಸಂಚಾರ. ಭಾಗ್ಯದಲ್ಲಿ ಅಡಚಣೆ, ಆದರೆ ಆಧ್ಯಾತ್ಮದಲ್ಲಿ ಆಸಕ್ತಿ, ಹಣಕಾಸಿನ ವ್ಯವಹಾರದಲ್ಲಿ ಏರುಪೇರು, ಸನ್ಯಾಸ ಜೀವನ ನಡೆಸಲು ಮನಸ್ಸು, ಕಾನೂನಿನಲ್ಲಿ ಹಿನ್ನಡೆ, ತಂದೆಯವರಿಗೆ ಅನಾರೋಗ್ಯ. ನಂತರ ಕೇತು ಅಷ್ಟಮದಲ್ಲಿ ಸಂಚಾರ. ಅನೇಕ ಸಮಸ್ಯೆಗಳ ಸರಮಾಲೆ ಉದ್ಭವ. ಭಯದ ವಾತಾವರಣ, ಆಭರಣಗಳ ಕಳ್ಳತನ, ಕುಟುಂಬದವರಿಂದ ಪೂರ್ಣ ಬೆಂಬಲ, ಸಹಾಯ, ನೇತ್ರ ಬಾಧೆ ಇತ್ಯಾದಿ ಫಲಗಳು. ತಾಳ್ಮೆ ಅಗತ್ಯ.
ಪರಿಹಾರ: ದಕ್ಷಿಣಾಮೂರ್ತಿ ಸ್ತೋತ್ರ ಪಠಣ, ಗುರುವಾರ ಪೂಜೆ, ಹಳದಿ ವಸ್ತ್ರ ದಾನ
ಅದೃಷ್ಟ ಬಣ್ಣ: ಹಳದಿ
ಸಂಖ್ಯೆ: 3
ವಾರ: ಗುರುವಾರ
ರತ್ನ: ಪುಷ್ಯರಾಗ
ದೇವರು: ಕಾಲಭೈರವ ಆರಾಧನೆ, ಗಣಪತಿ ಆರಾಧನೆ.
ಮಕರ ರಾಶಿಗೆ ಅಕ್ಟೋಬರ್ವರೆಗೆ ಗುರು ಸಪ್ತಮ ಸ್ಥಾನವಾದ ಕಟಕ ರಾಶಿಯಲ್ಲಿ ಸ್ಥಿತ. ಈ ರಾಶಿಯಲ್ಲಿ ಉಚ್ಚನಾಗಿ ದಾಂಪತ್ಯ ಜೀವನದಲ್ಲಿ ಶುಭ. ವಿವಾಹಯೋಗ, ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಸಂಗಾತಿಯಿಂದ ಸಹಾಯ, ಹೊಸ ಒಪ್ಪಂದಗಳು, ನಿಶ್ಚಿತಾರ್ಥ ಯೋಗ. ಪ್ರಶಸ್ತಿ ಹಾಗೂ ಸಮಾಜದಲ್ಲಿ ಕೀರ್ತಿ. ಸರ್ಕಾರದಿಂದ ಲಾಭ, ವಾಹನ ಖರೀದಿ, ಉನ್ನತ ಶಿಕ್ಷಣದಲ್ಲಿ ಶುಭ, ಧರ್ಮ-ದಾನಗಳ ಕಾರ್ಯಕ್ರಮಗಳಲ್ಲಿ ಭಾಗಿಯಾಗುವಿಕೆ, ತೀರ್ಥಯಾತ್ರೆ, ವಿದೇಶ ಪ್ರಯಾಣ, ಸಂತಾನ ಭಾಗ್ಯ, ಗೃಹ ಅಲಂಕಾರ ಖರೀದಿ. ನವೆಂಬರ್ನಿಂದ ಗುರು ಅತಿಚಾರದಲ್ಲಿ ಸಿಂಹರಾಶಿಗೆ ಪ್ರವೇಶ. ಗುಪ್ತ ಧನ, ಜೀವ ವಿಮೆ, ಭವಿಷ್ಯನಿಧಿ. ಆದರೆ ಸಂಗಾತಿಯ ಆರೋಗ್ಯದಲ್ಲಿ ಸಮಸ್ಯೆ, ಶಸ್ತ್ರಚಿಕಿತ್ಸೆ ಭಯ, ದಾಂಪತ್ಯದಲ್ಲಿ ಬಿರುಕು ಸಂಭವ, ಮಾತಿನಲ್ಲಿ ಎಚ್ಚರವಿರಲಿ. ಡಿಸೆಂಬರ್- ಜನವರಿ ಗುರು ವಕ್ರಿ. ಹಳೆಯ ದಾಂಪತ್ಯ ಸಮಸ್ಯೆ ವಾಪಸ್, ಹಳೆಯ ಪ್ರೀತಿ ವಾಪಸ್, ಹೊಸ ನಿರ್ಧಾರಗಳು ಬೇಡ, ಜನ್ಮ ಸ್ಥಳದಿಂದ ಬೇರೆ ಸ್ಥಳಕ್ಕೆ ವರ್ಗವಾಗುವ ಸಂಭವ, ವೃತ್ತಿಯಲ್ಲಿ ಜಾಗ್ರತೆಯಿರಲಿ. ಅನಾರೋಗ್ಯ, ವಿನಾಕಾರಣ ಅಲೆದಾಟ, ಹಣ ಕೊರತೆ, ದಾವೆ, ಮೊಕದ್ದಮೆ ಅಥವಾ ವ್ಯಾಜ್ಯ ಎದುರಾಗಬಹುದು, ಸರ್ಕಾರದಿಂದ ಹಿನ್ನಡೆ ಇತ್ಯಾದಿ ಫಲಗಳು. ಶನೇಶ್ಚರನು ತೃತೀಯ ಮೀನದಲ್ಲಿ ಸಂಚಾರ. ಧೈರ್ಯ ಸ್ಥಾನ- ಧೈರ್ಯ ಕಡಿಮೆ, ಸಹೋದರರಿಂದ ದೂರ, ಸಣ್ಣ ಪ್ರಯಾಣ ವಿಳಂಬ ಬರವಣಿಗೆ- ಸಂಗೀತದಲ್ಲಿ ಅಡಚಣೆ, ಆಲಸ್ಯ, ನಿದ್ರಾಭಂಗ. ಡಿಸೆಂಬರ್ವರೆಗೆ ಶನೇಶ್ಚರನು ವಕ್ರಿ. ಧೈರ್ಯ ಮತ್ತಷ್ಟು ಕಡಿಮೆ, ಹಳೆಯ ಸಹೋದರ ವಿವಾದ ವಾಪಸ್, ಹಳೆಯ ಪುಸ್ತಕ ವಾಪಸ್, ಆದರೆ ತೃತೀಯದ ಶನೇಶ್ಚರನು ಆರೋಗ್ಯದಲ್ಲಿ ಉತ್ತಮ, ದೀರ್ಘ ಕಾಯಿಲೆಯಿಂದ ಹೊರಬರುವಿರಿ, ಬಡ್ತಿ ದೊರೆಯುವ ಸಮಯ, ನಾಯಕತ್ವದ ಜವಾಬ್ದಾರಿ, ಧನಲಾಭವಾಗುವ ಸಂಭವ, ನೂತನ ವಾಹನ ಖರೀದಿ, ಸಹೋದರ- ಸಹೋದರಿಯರ ಜೀವನದಲ್ಲಿ ಉತ್ತಮ ಫಲಿತಾಂಶ, ಬಡ್ತಿ, ಕಾರ್ವಿುಕ ವರ್ಗದವರಿಂದ ಸಹಕಾರ, ಗೃಹ ನಿರ್ವಣದಲ್ಲಿ ಶುಭ, ಗೋವು ಸಾಗಾಣಿಕೆಯಿಂದ ಲಾಭ. ರಾಹು ಡಿಸೆಂಬರ್ 5ರವರೆಗೆ ನಿಮ್ಮ ಎರಡನೇ ಮನೆ ಕುಂಭ ಸ್ಥಿತ. ಮಾತಿನಿಂದ ಹಣ, ಕುಟುಂಬದಲ್ಲಿ ಜಗಳ, ಹಣಕಾಸು ವಿವಾದ, ನೇತ್ರಬಾಧೆ - ಅನಿರೀಕ್ಷಿತ ಖರ್ಚು, ಆಹಾರ ವಿಷಯದಲ್ಲಿ ಜಾಗ್ರತೆ ಇರಬೇಕು, ಭಯದ ವಾತಾವರಣ, ಅಜೀರ್ಣ, ಮೋಸ ಹೋಗುವ ಸಂಭವ, ಸಂಸಾರದಲ್ಲಿ ಬಿರುಕು, ಆರೋಗ್ಯದಲ್ಲಿ ಎಚ್ಚರ ವಹಿಸಬೇಕು. ನಂತರ ರಾಹು ನಿಮ್ಮ ರಾಶಿಯಲ್ಲಿ ಸ್ಥಿತ. ದೊಡ್ಡ ಬದಲಾವಣೆ, ತಲೆ ಭಾರ, ಮಾನಸಿಕ ಒತ್ತಡ, ವಿದೇಶ ಯೋಗ, ಹೊಸ ಕೆಲಸ, ನೂತನ ಗೃಹ, ಅಹಂಕಾರ ಬೇಡ, ಕಾನೂನು ಪಾಲಿಸಿ, ನಿಯಮ ಮೀರಬೇಡಿ, ಮಾಟ-ಮಂತ್ರಗಳ ಶಂಕೆ. ಕೇತು ಅಷ್ಟಮದಿಂದ- ಸಪ್ತಮ ಕಟಕ ಸಂಚಾರ, ದಾಂಪತ್ಯದಲ್ಲಿ ವೈರಾಗ್ಯ, ಸಂಗಾತಿಯಿಂದ ದೂರ, ಆಧ್ಯಾತ್ಮದಲ್ಲಿ ಆಸಕ್ತಿ, ವಿನಾಕಾರಣ ತಿರುಗಾಟ, ಏಕಾಂತವಾಗಿ ಇರಲು ಇಚ್ಛೆ. ತಾಳ್ಮೆಯಿಂದಿರಬೇಕು.
ಪರಿಹಾರ: ಹನುಮಾನ್ ಚಾಲೀಸಾ, ಶನಿವಾರ ಎಳ್ಳೆಣ್ಣೆ ದಾನ, ಕಪ್ಪು ವಸ್ತ್ರ- ಕಬ್ಬಿಣ ದಾನ.
ಅದೃಷ್ಟ ಬಣ್ಣ: ನೀಲಿ
ಸಂಖ್ಯೆ: 8
ದಿನ: ಶನಿವಾರ
ರತ್ನ: ನೀಲಮಣಿ
ದೇವರು: ಭೈರವಾಷ್ಟಕ ಪಠಣ
ಶತ್ರು ನಾಶದಿಂದ ದಾಂಪತ್ಯ ಜೀವನಕ್ಕೆ ಸಾಗುವ ಕಾಲ. ಸಾಡೇಸಾತಿ ಮಧ್ಯದ ವರ್ಷ. ಅಕ್ಟೋಬರ್ವರೆಗೆ ಉಚ್ಚ ಗುರು ಕರ್ಕಾಟಕ ರಾಶಿಯಲ್ಲಿ ಆರನೇ ಮನೆಯಲ್ಲಿ ಚಲಿಸುತ್ತಾನೆ. ಶತ್ರು, ರೋಗ, ಸಾಲ ಸ್ಥಾನದಲ್ಲಿ ಉಚ್ಚ ಗುರು. ಶತ್ರು ನಾಶ, ರೋಗ ಮುಕ್ತಿ, ಸಾಲ ತೀರಿಸುವಿಕೆ ಸಾಧ್ಯವಾಗುತ್ತದೆ. ಸ್ಪರ್ಧೆಗಳಲ್ಲಿ ಗೆಲುವು ಸಾಧಿಸುವಿರಿ. ಕೋರ್ಟ್ ಕೇಸ್ನಲ್ಲಿ ಗೆಲುವು, ಉದ್ಯೋಗದಲ್ಲಿ ಜಯ. ಗೋವುಗಳನ್ನು ಸುರಕ್ಷಿತವಾಗಿ ನೋಡಿಕೊಳ್ಳಬೇಕು. ಜನ್ಮ ಸ್ಥಳದಿಂದ ಸ್ಥಳಾಂತರ ಸಂಭವ. ದಾಂಪತ್ಯ ಜೀವನದಲ್ಲಿ ಒಳಜಗಳಗಳನ್ನು ಕಾಣುವಿರಿ. ಬೇಡವಾದ ಚರ್ಚೆಗಳು, ಭಯದ ವಾತಾವರಣ. ನವೆಂಬರ್ನಿಂದ ಗುರು ಅತಿಚಾರದಲ್ಲಿ ಸಪ್ತಮ ಸ್ಥಾನ, ದಾಂಪತ್ಯ ಸ್ಥಾನ, ವಿವಾಹ ಯೋಗ, ಪಾಲುದಾರಿಕೆ ವ್ಯಾಪಾರದಲ್ಲಿ ಲಾಭ, ಸಂಗಾತಿಯಿಂದ ಸಹಾಯ, ವಿದೇಶದಲ್ಲಿ ಲಾಭ, ಹೊಸ ಒಪ್ಪಂದಗಳಿಂದ ಲಾಭ. ನಂತರ ಜನವರಿವರೆಗೆ ಗುರು ವಕ್ರಿ. ಹಳೆಯ ದಾಂಪತ್ಯ ಸಮಸ್ಯೆ, ಹಳೆಯ ಶತ್ರುಗಳು ವಾಪಸ್. ಒಟ್ಟಾರೆ ಗುರು ಸಪ್ತಮ ಸಂಚಾರ ಶುಭ, ಸಮಾಜದಲ್ಲಿ ಗೌರವ, ಸರ್ಕಾರದಿಂದ ಮನ್ನಣೆ, ಸಂತಾನ ಭಾಗ್ಯ, ಧರ್ಮ ಕಾರ್ಯಗಳು ಹಾಗೂ ತೀರ್ಥಯಾತ್ರೆಗಳು. ವಿದ್ಯಾಭ್ಯಾಸ, ಉನ್ನತ ಶಿಕ್ಷಣದಲ್ಲಿ ಶುಭ, ವಸ್ತ್ರಾಭರಣಗಳ ಖರೀದಿ, ಧರ್ಮ ಪತ್ನಿಯಿಂದ ಆಸ್ತಿ- ಧನ ಲಾಭ. ಶನೇಶ್ಚರನು ನಿಮ್ಮ ರಾಶಿಗೆ ಸಾಡೇಸಾತಿ. ಮಾನಸಿಕ ಒತ್ತಡ, ತಲೆನೋವು- ಕಾಲುನೋವು ಕಾಣಿಸಿಕೊಳ್ಳುವುದು.
ಕೆಲಸದಲ್ಲಿ ವಿಳಂಬ, ಹಣಕಾಸು ಒತ್ತಡ, ನಿದ್ರಾಭಂಗ, ಕನಸಿನಲ್ಲಿ ಭಯ, ಆಧ್ಯಾತ್ಮದಲ್ಲಿ ಆಸಕ್ತಿ, ಗುರುಗಳ ಕೃಪೆ, ಧ್ಯಾನದಿಂದ ಶಾಂತಿ, ಹಣ ಕಳೆದುಕೊಳ್ಳುವಿಕೆ, ಅಧಿಕ ವೆಚ್ಚ, ಗೃಹದಲ್ಲಿ ಅನಾರೋಗ್ಯ- ಆಸ್ಪತ್ರೆ ಖರ್ಚು, ಕಾರ್ವಿುಕರಿಂದ ತೊಂದರೆ, ಮನೆಯಿಂದ ದೂರವಿರುವ ಸಾಧ್ಯತೆ, ಹಿರಿಯರ ಹಾಗೂ ಹಿರಿಯ ಅಧಿಕಾರಿಗಳ ಮುನಿಸು, ನೇತ್ರ ಬಾಧೆ, ಸ್ವಲ್ಪ ಆಸ್ತಿಯನ್ನು ಮಾರುವ ಸಮಯ, ಮಾತಿನಿಂದ ಜಗಳ. ಡಿಸೆಂಬರ್ವರೆಗೆ ಶನಿ ವಕ್ರಿ. ಹಳೆಯ ನೋವು, ಹಳೆಯ ರೋಗ ವಾಪಸ್, ಭಯದ ವಾತಾವರಣ, ಆರೋಗ್ಯ ತಪಾಸಣೆ ಮಾಡಿಸಿ, ತಾಳ್ಮೆಯಿಂದಿರಿ, ಉದ್ಯೋಗ- ವ್ಯಾಪಾರದಲ್ಲಿ ಬಹು ಜಾಗ್ರತರಾಗಿರಬೇಕು, ಎಚ್ಚರವಹಿಸಿ.
ರಾಹು ಡಿಸೆಂಬರ್ವರೆಗೆ ನಿಮ್ಮ ರಾಶಿಯಲ್ಲಿ. ಮಾನಸಿಕ ಒತ್ತಡ, ತಲೆ ಭಾರ, ವಿದೇಶ ಯೋಗ, ಹೊಸ ಕೆಲಸ- ಜವಾಬ್ದಾರಿ, ನೂತನ ಗೃಹ ಪ್ರಾಪ್ತಿ, ಆಹಾರ ಸೇವನೆಯಲ್ಲಿ ಎಚ್ಚರವಾಗಿರಬೇಕು. ನಂತರ 12ನೇ ಮನೆ ಮಕರದಲ್ಲಿ ಸಂಚಾರ- ಖರ್ಚು ಹೆಚ್ಚು, ಒಡ ಹುಟ್ಟಿದವರಿಂದ ದೂರ, ವಿದೇಶಯೋಗ, ನಿದ್ರಾಭಂಗ, ಯಾತ್ರೆ- ಆಶ್ರಮ ದರ್ಶನ, ಆದರೆ ಆಧ್ಯಾತ್ಮ, ಶಾಂತಿ, ಧ್ಯಾನದಿಂದ ನೆಮ್ಮದಿ. ಕೇತು ಸಪ್ತಮದಿಂದ ಷಷ್ಠ- ಕಟಕ ರಾಶಿ ಪ್ರವೇಶ, ದಾಂಪತ್ಯದಲ್ಲಿ ವೈರಾಗ್ಯ, ನಂತರ ಶತ್ರು ನಾಶ, ರೋಗ ಮುಕ್ತಿ, ಧನದಲ್ಲಿ ಲಾಭ, ಜ್ಞಾನ ವಿಚಾರ, ಮಾತಿನಿಂದ ಸಮಾಜದಲ್ಲಿ ಗೌರವ- ಪ್ರಶಸ್ತಿ, ಹೊಟ್ಟೆಯ ಭಾಗದಲ್ಲಿ ಜಾಗ್ರತೆ, ಸಾಲಗಳಿಂದ ಮುಕ್ತಿ, ಆಧ್ಯಾತ್ಮಿಕ ಚಿಂತನೆ, ಅಧ್ಯಯನಕ್ಕೆ ಉತ್ತಮ ಸಮಯ. ಸಾಡೇಸಾತಿಯಿಂದ ತಾಳ್ಮೆ ಅಗತ್ಯ, ಧ್ಯಾನ ಮಾಡಿ.
ಪರಿಹಾರ: ಸುಂದರಕಾಂಡ, ಶನಿವಾರ ಎಳ್ಳೆಣ್ಣೆ ದೀಪ, ಕಪ್ಪು ವಸ್ತ್ರ ದಾನ, ಅನ್ನ ದಾನ ಮಾಡಿ.
ಅದೃಷ್ಟ ಬಣ್ಣ: ನೀಲಿ
ಸಂಖ್ಯೆ: 8
ವಾರ: ಶನಿವಾರ
ರತ್ನ: ನೀಲಮಣಿ
ದೇವರು: ಹನುಮಾನ್.
ಪ್ರಸಕ್ತ ದೀಪಾವಳಿಯಿಂದ ಮುಂದಿನ ವರ್ಷದ ದೀಪಾವಳಿವರೆಗೆ ಸಾಡೆಸಾತಿ ಶಿಖರದ ವರ್ಷ. ಗುರು ಉಚ್ಚನಾಗಿ ಪಂಚಮ ಸ್ಥಾನ ಕಟಕದಲ್ಲಿ ಸಂಚರಿಸುತ್ತಾನೆ. ಮಕ್ಕಳು, ವಿದ್ಯೆ, ಪ್ರೀತಿ, ಹೂಡಿಕೆ, ಬುದ್ಧಿ ಸ್ಥಾನದಲ್ಲಿ ಉಚ್ಚ ಗುರು. ಮಕ್ಕಳ ಭಾಗ್ಯ, ವಿದ್ಯೆಯಲ್ಲಿ ಉನ್ನತಿ, ಪ್ರೀತಿಯಲ್ಲಿ ಯಶಸ್ಸು, ಹೂಡಿಕೆಯಲ್ಲಿ ಲಾಭ, ಷೇರು ಮಾರುಕಟ್ಟೆ ಲಾಭ, ಮಂತ್ರ ಸಿದ್ಧಿ, ಬುದ್ಧಿಶಕ್ತಿಯಲ್ಲಿ ಹೆಚ್ಚಳ, ಸಂತಾನ ಭಾಗ್ಯ, ವಿದ್ಯಾರ್ಥಿಗಳಿಗೆ ಉನ್ನತ ವಿದ್ಯೆ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಜಯ. ಮನೆಯಲ್ಲಿ ಶುಭಕಾರ್ಯಗಳು, ವಾಹನ ಖರೀದಿ, ಸಮಾಜದಲ್ಲಿನ ಪ್ರತಿಷ್ಠಿತರ ಸಂಪರ್ಕ, ಹೆಸರು ಮತ್ತು ಕೀರ್ತಿ, ದೇವಾಲಯದ ಕಾರ್ಯಾಸಕ್ತಿ, ಹೆಚ್ಚು ಜ್ಞಾನ ಸಂಪಾದನೆಯಲ್ಲಿ ಆಸಕ್ತಿ, ಕಾರ್ವಿುಕರಿಂದ ಸಹಕಾರ, ಡೈರಿ ಉತ್ಪನ್ನಗಳ ವ್ಯಾಪಾರ ಆರಂಭದಲ್ಲಿ ಆಸಕ್ತಿ- ಯಶಸ್ಸು, ಅವಿವಾಹಿತರಿಗೆ ವಿವಾಹ ಯೋಗ, ಧರ್ಮ ಕಾರ್ಯ, ಅನ್ನದಾನದಲ್ಲಿ ತೊಡಗುವಿಕೆ, ವಸ್ತ್ರಾಭರಣಗಳ ಖರೀದಿ, ಉನ್ನತ ಪದವಿ- ಬಡ್ತಿ, ಸಮಾಜದಿಂದ ಗೌರವ- ಪ್ರಶಸ್ತಿ, ವಾಹನ ಖರೀದಿ, ನ್ಯಾಯ ಮಾರ್ಗದಲ್ಲಿ ನಡತೆಯ ದಾರಿ. ನವೆಂಬರ್ನಿಂದ ಗುರು ಆರನೇ ಮನೆ ಸಿಂಹ ರಾಶಿಯಲ್ಲಿ ಅತಿಚಾರ ಪ್ರವೇಶ, ನಡಿಗೆ. ಶತ್ರು ಕಾಟ, ಅನಾರೋಗ್ಯ, ಸಾಲ, ಶತ್ರುನಾಶ, ರೋಗ ಮುಕ್ತಿ, ಸಾಲ ತೀರುವಿಕೆ, ಸ್ಪರ್ಧೆಯಲ್ಲಿ ಗೆಲುವು, ಕೋರ್ಟ್ ಕೇಸ್ ಗೆಲುವು, ಉದ್ಯೋಗದಲ್ಲಿ ಜಯ. ಡಿಸೆಂಬರ್- ಜನವರಿ ಗುರು ವಕ್ರಿ. ಹಳೆಯ ಶತ್ರು ವಾಪಸ್, ಹಳೆಯ ರೋಗ ಮರುಕಳಿಸುವುದು, ಹಳೆಯ ಸಾಲ ಮರುಪಾವತಿ, ಎಚ್ಚರ ಅಗತ್ಯ.
ಗೃಹದಿಂದ ದೂರ ಸಂಚಾರ, ಆರೋಗ್ಯದಲ್ಲಿ ಎಚ್ಚರದಿಂದಿರಬೇಕು, ವಾತರೋಗ ಸಂಭವ, ಜೀರ್ಣ ಶಕ್ತಿ ಕೊರತೆ, ಶತ್ರುಗಳಿಂದ ಬಾಧೆ, ವಿನಾಕಾರಣ ದಾವೆ-ವಿವಾದಗಳು, ನಿಮ್ಮ ಕೆಲಸ ಕಾರ್ಯಗಳಲ್ಲಿ ವಿಘ್ನ, ಸರ್ಕಾರದಿಂದ ಕಿರುಕುಳ ಇತ್ಯಾದಿ. ಶನೇಶ್ಚರನು ನಿಮ್ಮ ರಾಶಿಯಲ್ಲೇ ಸಾಡೇಸಾತಿ ಶಿಖರ. ಮಾನಸಿಕ ಒತ್ತಡ, ತಲೆನೋವು, ಕಾಲುನೋವು, ನಿದ್ರಾಭಂಗ, ಕನಸಿನಲ್ಲಿ ಭಯ, ಕೆಲಸದಲ್ಲಿ ವಿಳಂಬ, ಹಣಕಾಸು ಒತ್ತಡ, ಕುಟುಂಬದಲ್ಲಿ ಬಿರುಕು, ಆದರೆ ಆಧ್ಯಾತ್ಮದಲ್ಲಿ ಉನ್ನತಿ, ಗುರುಗಳ ಕೃಪೆ, ಧ್ಯಾನದಿಂದ ಶಾಂತಿ, ಯಾತ್ರಾ ಯೋಗ, ವಿನಾಕಾರಣ ಖರ್ಚು, ಬೆಂಕಿ ಅನಾಹುತ ಸಂಭವ, ಮುಖ ಬಾಡುವುದು, ಸ್ನೇಹಿತರು ಮತ್ತು ಸ್ವಂತದವರಿಂದ ದೂರ, ಕೆಲಸ ಕಾರ್ಯಗಳಿಗೆ ವಿನಾ ಅಲೆದಾಟ, ಹೆಚ್ಚಿನ ಕೆಲಸದ ಒತ್ತಡದಿಂದ ಆಯಾಸ ಇತ್ಯಾದಿ. ಶನೇಶ್ಚರನು ಡಿಸೆಂಬರ್ವರೆಗೆ ವಕ್ರಿ. ಹಳೆಯ ರೋಗ, ಹಳೆಯ ನೋವು, ಹಳೆಯ ಭಯದ ವಾತಾವರಣ, ಆರೋಗ್ಯದಲ್ಲಿ ಎಚ್ಚರ. ಆರೋಗ್ಯ ತಪಾಸಣೆ ಮಾಡಿಸಿ ತಾಳ್ಮೆಯಿಂದಿರಿ.
ರಾಹು ಡಿಸೆಂಬರ್ವರೆಗೆ ಕುಂಭದಲ್ಲಿ ಸಂಚಾರ. ಖರ್ಚು, ವಿದೇಶ ಯಾತ್ರೆ, ಆಸ್ಪತ್ರೆ, ನಿದ್ರಾಭಂಗ, ಯಾತ್ರೆ, ಆಶ್ರಮ ದರ್ಶನ. ನಂತರ ಲಾಭ ಸ್ಥಾನದ ಮಕರದಲ್ಲಿ ರಾಹು ಸಂಚಾರ. ಧನಲಾಭ, ಹಿರಿಯ ಸಹೋದರರಿಂದ ಲಾಭ, ಆಸೆ ಈಡೇರುವಿಕೆ, ಷೇರು ಲಾಭ. ಕೇತು ಆರರಿಂದ ಪಂಚಮ ಸ್ಥಾನಕ್ಕೆ. ಶತ್ರುನಾಶ, ಮಕ್ಕಳಿಂದ ಚಿಂತೆ, ಪ್ರೀತಿಯಲ್ಲಿ ಎಚ್ಚರ, ಧ್ಯಾನ ಮಾಡಿ.
ಪರಿಹಾರ: ನಿತ್ಯ ವಿಷ್ಣು ಸಹಸ್ರನಾಮ ಪಠಣ, ಗುರುವಾರ ಹಳದಿ ವಸ್ತ್ರ ದಾನ, ಅನ್ನ ದಾನ ಮಾಡಿ.
ಅದೃಷ್ಟ ಬಣ್ಣ: ಹಳದಿ
ಸಂಖ್ಯೆ: 3
ದಿನ: ಗುರುವಾರ
ರತ್ನ: ಪುಷ್ಯರಾಗ
ದೇವರು: ಮಹಾ ವಿಷ್ಣು