ದೀಪಾವಳಿ ಸಂಭ್ರಮ; ದೇಶಾದ್ಯಂತ 3.75 ಲಕ್ಷ ಕೋಟಿ ರೂ. ವ್ಯಾಪಾರ

diwali
Published on

ನವದೆಹಲಿ:  ಬೆಳಕಿನ ಹಬ್ಬ ದೀಪಾವಳಿ. ದೀಪಾವಳಿಯನ್ನು ಒಟ್ಟು ಮೂರು ದಿನ ಆಚರಿಸಲಾಗುತ್ತದೆ. ಮೊದಲ ದಿನ ಮನೆಯವರೆಲ್ಲರೂ ಎಣ್ಣೆ ಸ್ನಾನ ಮಾಡುವ ನರಕ ಚತುದರ್ಶಿ, ಮರು ದಿವಸ ಅಮಾವಾಸ್ಯೆ, ಮೂರನೇ ದಿನವೇ ಬಲಿ ಪಾಡ್ಯಮಿ. ದೀಪಾವಳಿ ಬಲಿಪಾಡ್ಯಮಿಯೊಂದಿಗೆ ಈ ಮೂರು ದಿನಗಳ ಹಬ್ಬ ಮುಗಿಯುತ್ತದೆ.  ಬೆಳಕಿನ ಹಬ್ಬ ದೀಪಾವಳಿಯು ಭಾರತೀಯ ಮಾರುಕಟ್ಟೆಗೆ ಪುಷ್ಟಿ ನೀಡಿದೆ. ಗ್ರಾಹಕರಿಂದ ಸ್ವದೇಶಿ ಉತ್ಪನ್ನಗಳಿಗೆ ಈ ಸಲ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದ್ದು, ಸ್ಥಳೀಯ ಉದ್ಯಮಿಗಳು, ವ್ಯಾಪಾರಿಗಳಿಗೆ ಹೆಚ್ಚಿನ ಲಾಭವಾಗಿದೆ.

ದೀಪಾವಳಿಯ ಸಂದರ್ಭ ಚಿಲ್ಲರೆ ಮಾರುಕಟ್ಟೆಯಲ್ಲಿ ಇದುವರೆಗೆ 3.75 ಲಕ್ಷ ಕೋಟಿ ರೂ. ವ್ಯಾಪಾರ ದಾಖಲಾಗಿದೆ ಎಂದು ವ್ಯಾಪಾರಿಗಳ ಸಂಘಟನೆ ಕಾನ್ವೆಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್‌ (ಸಿಎಐಟಿ) ಸೋಮವಾರ ತಿಳಿಸಿದೆ.

ಗೋವರ್ಧನ ಪೂಜೆ, ಭೈಯಾ ದೂಜ್, ಚಾತ್ ಪೂಜೆ ಹಾಗೂ ತುಳಸಿ ವಿವಾಹದಂತಹ ಹಬ್ಬಗಳು ಇನ್ನಷ್ಟೇ ನಡೆಯಬೇಕಿದೆ. ಈ ಹಬ್ಬಗಳಲ್ಲಿ 50,000 ಕೋಟಿ ರೂ. ಹೆಚ್ಚುವರಿ ವ್ಯಾಪಾರವಾಗಲಿದೆ ಎಂದು ಸಿಎಐಟಿ ತಿಳಿಸಿದೆ.

ಸಿಎಐಟಿಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಮಾತನಾಡಿ, ದೀಪಾವಳಿ ಸಂದರ್ಭ ಹೆಚ್ಚಾಗಿ ಭಾರತೀಯ ಉತ್ಪನ್ನಗಳು ಮಾತ್ರವೇ ಮಾರಾಟವಾಗಿವೆ ಹಾಗೂ ಖರೀದಿಸಲಾಗಿವೆ. ಇದು ಗಮನಾರ್ಹ ಎಂದು ಅದು ಹೇಳಿದೆ. ಈ ದೀಪಾವಳಿಯ ಸಂದರ್ಭ ಚೀನಾ ಉತ್ಪನ್ನಗಳು 1 ಲಕ್ಷ ಕೋಟಿ ರೂ.ಗಿಂತಲೂ ಅಧಿಕ ಮೌಲ್ಯದ ವ್ಯಾಪಾರವನ್ನು ಕಳೆದುಕೊಂಡಿವೆ. ಹಿಂದಿನ ವರ್ಷ ದೀಪಾವಳಿ ಸಂದರ್ಭ ಚೀನಾ ಉತ್ಪನ್ನಗಳು ಸುಮಾರು ಶೇ. 70 ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿತ್ತು ಎಂದು ಅವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net