ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದ ಲಯನ್ಸ್ ಕ್ಲಬ್ ವತಿಯಿಂದ ಐನೆಕಿದು ನವಗ್ರಾಮದಲ್ಲಿ ಶನಿವಾರ ಲಯನ್ ತುಡರ್ ಪರ್ಬ ನೆರವೇರಿತು. ಲಯನ್ಸ್ ಅಧ್ಯಕ್ಷ ರಾಜೇಶ್ ಎನ್.ಎಸ್.ಅಧ್ಯಕ್ಷತೆ ವಹಿಸಿದ್ದರು.
ಲಯನ್ಸ್ ಝೋನ್ 2ರ ಅಧ್ಯಕ್ಷ ಪ್ರೊ.ಕೆ.ಆರ್.ಶೆಟ್ಟಿಗಾರ್, ಕೋಶಾಧಿಕಾರಿ ಮೋಹನದಾಸ ರೈ, ಕಾರ್ಯಕ್ರಮದ ಆಯೋಜಕರಾದ ರಾಮಚಂದ್ರ ಪಳಂಗಾಯ, ಡಾ.ಶಿವಕುಮಾರ್ ಹೊಸೊಳಿಕೆ, ಹಿಮ್ಮತ್ ಕೆ.ಸಿ ಹಾಗೂ ಊರಿನವರಾದ ಚಿನ್ನಮ್ಮ ನವಗ್ರಾಮ ಉಪಸ್ಥಿತರಿದ್ದರು.
ಈ ಸಂದರ್ಭ ಪರಿಸರದಲ್ಲಿ ಹಣತೆ ದೀಪಗಳನ್ನು ಹಚ್ಚಿ, ಪಟಾಕಿ ಸಿಡಿಸಿ, ಸಿಹಿತಿಂಡಿ ವಿತರಿಸಿ ಆಚರಿಸಲಾಯಿತು. ಲಯನ್ಸ್ ಕ್ಲಬ್ ಕಾರ್ಯದರ್ಶಿ ಕೃಷ್ಣಕುಮಾರ್ ಬಾಳುಗೋಡು ವಂದಿಸಿದರು. ಸತೀಶ್ ಕೂಜುಗೋಡು, ರೇಗನ್ ಎಸ್.ಪಿ., ಮಿಥುನ್ ಕೂಜುಗೋಡು ಸಹಕರಿಸಿದರು.