ಮಜಿ ಬಸ್ ತಂಗುದಾಣ ಲೋಕಾರ್ಪಣೆ

New Project (8)
Published on

ಬಂಟ್ವಾಳ: ವೀರಕಂಭ ಗ್ರಾಮದ ಮಜಿ ಎಂಬಲ್ಲಿ ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನಿಯಮಿತ ವತಿಯಿಂದ ಸಾರ್ವಜನಿಕ ಬಸ್ ತಂಗುದಾಣ ಭಾನುವಾರ ಲೋಕಾರ್ಪಣೆಗೊಂಡಿತು.

ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನಿಯಮಿತ ಅಧ್ಯಕ್ಷ ಜಗನಾಥ್ ಸಾಲಿಯಾನ್ ಉದ್ಘಾಟಿಸಿ, ಮಜಿ ಪ್ರದೇಶದ ಜನರ ಬೇಡಿಕೆಗೆ ಸ್ಪಂದಿಸಿ ಪ್ರಯಾಣಿಕರ ತಂಗುದಾಣ ನಿರ್ಮಿಸಿದ್ದು, ಅದರ ಉಸ್ತುವಾರಿ ಈ ಪ್ರದೇಶದ ಜನರೇ ನೋಡಿಕೊಂಡು ಸ್ವಚ್ಛತೆ ಕಾಪಾಡಿ, ಯೋಗ್ಯವಾಗಿ ಉಪಯೋಗಿಸಿಕೊಂಡು ಸಂರಕ್ಷಣೆ ಮಾಡಿಕೊಂಡು ಬರುವಂತೆ ತಿಳಿಸಿದರು.

ಬ್ಯಾಂಕ್ ಉಪಾಧ್ಯಕ್ಷ ಮನೋರಂಜನ್ ಕರೈ, ನಿರ್ದೇಶಕರಾದ ದಯಾನಂದ ಆಳ್ವ, ಕೇಶವ ಮಾಡದಾರು, ದಿವಾಕರ ವಿಟ್ಲ, ಭಾಸ್ಕರ ಶೆಟ್ಟಿ ಕನ್ಯಾನ, ಪೂವಪ್ಪ ವಿಟ್ಲ, ಬ್ಯಾಂಕ್ ಕಾರ್ಯನಿರ್ವಹಣಾಧಿಕಾರಿ ಮುರಳಿ ಶ್ಯಾಮ್, ವೀರಕಂಭ ಗ್ರಾಪಂ ಉಪಾಧ್ಯಕ್ಷ ಜನಾರ್ದನ ಪೂಜಾರಿ, ಸದಸ್ಯರಾದ ದಿನೇಶ್ ಪೂಜಾರಿ, ಇಂಜಿನಿಯರ್ ರಾಮಣ್ಣ ಮೂಲ್ಯ, ವೀರಕಂಬ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ವೀರಪ್ಪ ಮೂಲ್ಯ, ಕೆಎಂಎಫ್ ವಿಸ್ತರಣಾಧಿಕಾರಿ ಜಗದೀಶ್, ಹಿರಿಯರಾದ ನಾಗರಾಜ್ ಶಿಲ್ಪಿ, ಸುಂದರ ಮೂಲ್ಯ ಮೈರಾ, ಸಂಜೀವ ಮೂಲ್ಯ ಮಜಿ, ರವೀಂದ್ರ ಮೂಲ್ಯ, ಕೃಷ್ಣ ಮೂಲ್ಯ, ಕೇಶವ ಮೂಲ್ಯ, ಕಾಂತಪ್ಪ ಮೂಲ್ಯ, ನೋಣಯ್ಯ ಎಂ.ಆರ್., ದೇವಿಕ ಉಪಸ್ಥಿತರಿದ್ದರು.

ಅಂಗನವಾಡಿ ಕಾರ್ಯಕರ್ತೆ ಶಶಿಕಲಾ ಸ್ವಾಗತಿಸಿದರು. ಬ್ಯಾಂಕ್ ನಿರ್ದೇಶಕ ವಿಶ್ವನಾಥ ಎಂ. ಪ್ರಾಸ್ತಾವಿಕ ಮಾತನಾಡಿದರು. ಸ್ನೇಹ ಸಂಜೀವಿನಿ ವೀರಕಂಭ ಒಕ್ಕೂಟ ಅಧ್ಯಕ್ಷೆ ಕುಸುಮ ಶೆಟ್ಟಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net