ದೇವಳ ಜೀರ್ಣೋದ್ಧಾರಕ್ಕೆ ಮುಷ್ಟಿ ಕಾಣಿಕೆ ಸಮರ್ಪಣೆ

musti
Published on

ಹಾಲಾಡಿ: ಕುಂದಾಪುರ ಹಾಲಾಡಿಯ ಕಟ್ಟೆಮಕ್ಕಿಯಲ್ಲಿರುವ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಇತ್ತೀಚೆಗೆ ಕೆಸರು ಕಲ್ಲು ಮುಹೂರ್ತ ಮತ್ತು ಮುಷ್ಟಿ ಕಾಣಿಕೆ ಸಮರ್ಪಣೆ ಕ್ಷೇತ್ರದ ಪುರೋಹಿತ ಸೂರ್ಯನಾರಾಯಣ ಬಾಯರಿ ಅವರ ವಾರ್ಗದರ್ಶನದಲ್ಲಿ ನಡೆಯಿತು. 80 ಲಕ್ಷ ರೂ. ವೆಚ್ಚದಲ್ಲಿ ಜೀರ್ಣೋದ್ಧಾರ ಕಾರ್ಯ ನಡೆಯಲಿದೆ.

ಆಡಳಿತ ಸಮಿತಿ ಗೌರವಾಧ್ಯಕ್ಷ ಬಂಟಕೋಡು ಗಣಪಯ್ಯ ಶೆಟ್ಟಿ, ನಾರಾಯಣ ನಾಯ್ಕ, ಕ್ರೋಡ ಶ್ರೀ ಶಂಕರನಾರಾಯಣ ದೇವಸ್ಥಾನ ಆಡಳಿತ ಧರ್ಮದರ್ಶಿ ಲಕ್ಷ್ಮೀನಾರಾಯಣ ಉಡುಪ, ಶಂಕರನಾರಾಯಣ ಶ್ರೀ ವೀರ ಕಲ್ಲುಕುಟಿಗ ದೇವಸ್ಥಾನ ಆಡಳಿತ ಧರ್ಮದರ್ಶಿ ಮಂಜುನಾಥ ಶೇಟ್, ಹಾಲಾಡಿ ಶ್ರೀ ಮರ್ಲುಚಿಕ್ಕು ದೈವಸ್ಥಾನದ ಆಡಳಿತ ಧರ್ಮದರ್ಶಿ ಅಮರನಾಥ ಶೆಟ್ಟಿ ಹಾಲಾಡಿ, ಹಾಲಾಡಿ ವಾರಿಕಾನು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮೊಕ್ತೇಸರ ಜ್ಞಾನೇಶ ಶೆಟ್ಟಿ, ಪ್ರಮುಖರಾದ ಎಂ.ಶಿವರಾಮ ಶೆಟ್ಟಿ, ಕಳ್ಗಿ ಸುಧಾಕರ ಶೆಟ್ಟಿ, ಪ್ರದೀಪ ಶೆಟ್ಟಿ, ಜಮದಗ್ನಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಸದಸ್ಯರು, ಅಗ್ರಹಾರ ಶ್ರೀ ಸಾಂಬ ಸದಾಶಿವ ದೇವಸ್ಥಾನದ ಅಭಿವದ್ಧಿ ಸಮಿತಿಯ ಸದಸ್ಯರು, ಕುತ್ಯಾರು ನಾರಾಯಣ ಶೆಟ್ಟಿ, ರವಿ ಕುಲಾಲ್, ಪಾಂಡು ನಾಯ್ಕ ತಲ್ಲಾರಿ, ಸಿದ್ದಾಪುರ ಹಿರಿಯ ನಾಗರಿಕರ ವೇದಿಕೆ ಪದಾಧಿಕಾರಿಗಳು, ರಮೇಶ ಶೆಟ್ಟಿ, ಸಂಜೀವ ಮಡಿವಾಳ, ದಿನಕರ ತೋಳಾರ್, ಆನಂದ ನಾಯ್ಕ ಹಾಗೂ ಸಮಿತಿ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net