ಪಡುಬಿದ್ರಿ: ಎಲ್ಲೂರು ಗ್ರಾಮದ ಬೆಳ್ಳಿಬೆಟ್ಟು ಬಳಿ ಶುಕ್ರವಾರ ಹಳೇ ದ್ವೇಷದಿಂದ ಆರೀಫ್ ಸಾಹೇಬ್ ಎಂಬಾತ ಶೇಖ್ ಮುನಾಫ್ ಸಾಹೇಬ್ ಎಂಬಾತನಿಗೆ ಚೂರಿಯಿಂದ ತಿವಿಯಲೆತ್ನಿಸಿ ಜೀವಬೆದರಿಕೆ ಹಾಕಿದ್ದಾನೆ. ಆರೀಫ್ ಮತ್ತು ಶೇಖ್ ಮುನಾಫ್ ಇಬ್ಬರೂ ಸ್ನೇಹಿತರಾಗಿದ್ದು, ಕೆಲವು ಕ್ರಿಮಿನಲ್ ಪ್ರಕರಣದಲ್ಲಿ ಬಾಗಿಯಾಗಿದ್ದರು. ಇತ್ತೀಚೆಗೆ 5 ವರ್ಷಗಳಿಂದ ಮುನಾಫ್ ಮದುವೆಯಾಗಿ ಹೆಂಡತಿಯೊಂದಿಗೆ ವಾಸವಾಗಿದ್ದು, ಆರೀಫ್ ಸಹವಾಸದಿಂದ ದೂರವಾಗಿ ಚಾಲಕ ವೃತ್ತಿ ಮಾಡಿಕೊಂಡಿದ್ದ. ಅದರಿಂದ ದ್ವೇಷಗೊಂಡ ಆರೀಫ್ ಸಾಹೇಬ್, ಮುನಾಫ್‌ಗೆ ತನ್ನೊಂದಿಗೆ ಬಾರದಿದ್ದರೆ ಕೊಲ್ಲುವುದಾಗಿ ಹೆದರಿಸುತ್ತಿದ್ದ, ಶುಕ್ರವಾರ ಕಾಂಜರಕಟ್ಟೆಗೆ ಟಿಪ್ಪರ್ ಲಾರಿ ಚಲಾಯಿಸಿಕೊಂಡು ಹೋಗುತ್ತಿರುವಾಗ ಹಿಂದಿನಿಂದ ದ್ವಿಚಕ್ರ ವಾಹನದಲ್ಲಿ ಫಾಲೋ ಮಾಡಿಕೊಂಡು ಬಂದ ಆರೀಫ್ ಬೆಳ್ಳಿಬೆಟ್ಟು ಬಳಿ ಲಾರಿಗೆ ದ್ವಿಚಕ್ರ ವಾಹನ ಅಡ್ಡ ಇಟ್ಟು, ಲಾರಿಯಿಂದ ಕೆಳಗೆ ಎಳೆದು ಹಾಕಿ ಕೈಯಲ್ಲಿದ್ದ ಚೂರಿಯಿಂದ ತಿವಿಯಲು ಮುಂದಾದಾಗ ತಪ್ಪಿಸುವ ಯತ್ನದಲ್ಲಿ ಎರಡೂ ಕೈಗಳಿಗೆ ಗೀಚಿದ ಗಾಯಗೊಂಡು ಮುನಾಫ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
