ರಾಜಕಾಲುವೆಯಲ್ಲಿ ತೇಲಿಬಂದ ಮಗುವಿನ ಮೃತದೇಹ!

Raja Kaluve
Published on

ಶಿವಮೊಗ್ಗ: ನಗರದ ಆರ್‌ಎಂಎಲ್ ನಗರದಲ್ಲಿ ಮಸೀದಿ ಬಳಿ ರಾಜಕಾಲುವೆಯಲ್ಲಿ ಶುಕ್ರವಾರ ಮಗುವಿನ ಮೃತದೇಹ ತೇಲಿಬಂದಿದೆ.

ಸುಮಾರು ಎರಡು ತಿಂಗಳ ಗಂಡು ಮಗು ಇದಾಗಿದ್ದು ಪಾಲಕರು ಬಿಸಾಡಿರುವ ಶಂಕೆ ವ್ಯಕ್ತವಾಗಿದೆ. ಎರಡು ದಿನಗಳಿಂದ ಶಿವಮೊಗ್ಗ ನಗರದಲ್ಲಿ ಮಳೆ ಹೆಚ್ಚಿದ್ದು ನೆರೆ ಸೃಷ್ಟಿಯಾಗಿದ್ದರಿಂದ ಮಗುವಿನ ಮೃತದೇಹ ರಾಜಕಾಲುವೆಯಲ್ಲಿ ತೇಲಿಬಂದಿದೆ. ಇದನ್ನು ಮಹಿಳೆಯೊಬ್ಬರು ಗಮನಿಸಿ ಸ್ಥಳೀಯರಿಗೆ ಮಾಹಿತಿ ನೀಡಿದ್ದರು.

ಯುವಕರು ಪರಿಶೀಲಿಸಿದಾಗ ಭರತ್ ಫೌಂಡ್ರಿ ಬಳಿಯ ರಾಜಕಾಲುವೆಯಲ್ಲಿ ಮೃತದೇಹ ಸಿಕ್ಕಿತ್ತು. ಮೃತದೇಹದ ದೊಡ್ಡಪೇಟೆ ಪೊಲೀಸರಿಗೆ ಮಾಹಿತಿ ನೀಡಿದ್ದು ಮೆಗ್ಗಾನ್ ಆಸ್ಪತ್ರೆ ಶವಗಾರಕ್ಕೆ ಸ್ಥಳಾಂತರಿಸಲಾಯಿತು. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net