More

    ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’, ಸದ್ಯ ಇದಕ್ಕೆ ತಡೆ: ಯಾವ್ಯಾವ ಜಿಲ್ಲೆಯಲ್ಲಿಲ್ಲ, ಕಾರಣವೇನು?

    ಬೆಂಗಳೂರು: ‘ಜಿಲ್ಲಾಧಿಕಾರಿಗಳ ನಡೆ, ಹಳ್ಳಿಯ ಕಡೆ’ ಕಾರ್ಯಕ್ರಮ ಚಾಲ್ತಿಯಲ್ಲಿರುವುದು ಬಹುತೇಕ ಎಲ್ಲರಿಗೂ ಗೊತ್ತಿರುವಂಥ ವಿಚಾರ. ಆದರೆ ಸದ್ಯಕ್ಕಂತೂ ಇದಕ್ಕೆ ತಡೆ ಬಿದ್ದಿದೆ. ಅದಕ್ಕೂ ಬಲವಾದ ಕಾರಣವಿದ್ದು, ಜಿಲ್ಲಾಧಿಕಾರಿಳಿಗೆ ಈ ವಿಷಯದಲ್ಲಿ ವಿನಾಯಿತಿಯೂ ಸಿಕ್ಕಿದೆ.

    ಸರ್ಕಾರದ ಈ ಹಿಂದಿನ ಆದೇಶದ ಪ್ರಕಾರ ತಿಂಗಳ ಮೂರನೇ ಶನಿವಾರದಂದು ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಅಭಿಯಾನವನ್ನು ಜರುಗಿಸಬೇಕಾಗಿರುತ್ತದೆ. ಆದರೆ ಈ ತಿಂಗಳಲ್ಲಿ ನಡೆಯಬೇಕಿದ್ದ ಈ ಅಭಿಯಾನಕ್ಕೆ ಕೆಲವು ಜಿಲ್ಲೆಗಳಿಗೆ ಅನ್ವಯಿಸುವಂತೆ ವಿನಾಯಿತಿ ನೀಡಲಾಗಿದೆ.

    ಪ್ರಸ್ತುತ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆ ಆಗುತ್ತಿರುವುದರಿಂದ ಪ್ರಕೃತಿ ವಿಕೋಪಕ್ಕೆ ತುತ್ತಾದ ಸಂತ್ರಸ್ತರನ್ನು ತಾತ್ಕಾಲಿಕವಾಗಿ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸುವ ಮತ್ತು ಪರಿಹಾರ ವಿತರಿಸುವ ಹಾಗೂ ನಷ್ಟ ಅಂದಾಜು ಮಾಡುವ ಕಾರ್ಯದಲ್ಲಿ ಜಿಲ್ಲಾಡಳಿತ ಕಾರ್ಯಪ್ರವೃತ್ತವಾಗಬೇಕಾಗಿದ್ದು, ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಡೆಸಲು ತೊಂದರೆ ಆಗುತ್ತಿರುವುದು ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದ್ದಾಗಿ ತಿಳಿಸಿದೆ.

    ಅಲ್ಲದೆ ಹೆಚ್ಚು ಮಳೆಯಾಗುತ್ತಿರುವ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಜುಲೈ 16ರಂದು ಜರುಗಬೇಕಾಗಿರುವ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಅಭಿಯಾನಕ್ಕೆ ಜುಲೈ ತಿಂಗಳಲ್ಲಿ ವಿನಾಯಿತಿ ನೀಡಲಾಗಿದೆ ಎಂಬ ಆದೇಶ ಹೊರಬಿದ್ದಿದೆ.

    ಸರ್ಕಾರದ ಈ ಆದೇಶಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ!; ಆರ್ಡರ್ ಹಿಂಪಡೆಯಲು ಆಗ್ರಹ..

    ಸತತ ಮೂರನೇ ದಿನ ಅಪ್ಪು ಟ್ರೆಂಡ್; ಪುನೀತ್ ರಾಜಕುಮಾರ್​ ‘ಗಂಧದಗುಡಿ’ ಬಿಡುಗಡೆ ದಿನಾಂಕ ಪ್ರಕಟ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts